ADVERTISEMENT

ಹಿಂದಿ ಸಿನಿಮಾದಲ್ಲಿ ನಟಿಸುವ ಅಗತ್ಯ ನನಗಿಲ್ಲ: ಮಹೇಶ್ ಬಾಬು ಹೀಗೆ ಹೇಳಿದ್ದು ಯಾಕೆ?

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 9 ಏಪ್ರಿಲ್ 2022, 8:43 IST
Last Updated 9 ಏಪ್ರಿಲ್ 2022, 8:43 IST
ನಟ ಮಹೇಶ್‌ ಬಾಬು
ನಟ ಮಹೇಶ್‌ ಬಾಬು    

ಹೈದರಾಬಾದ್: ಟಾಲಿವುಡ್‌ನ ‘ಪ್ರಿನ್ಸ್’ ಎಂದೇ ಗುರುತಿಸಿಕೊಂಡಿರುವ ನಟ ಮಹೇಶ್‌ ಬಾಬು ಅವರು ಬೇಡಿಕೆ ನಟರಲ್ಲಿ ಒಬ್ಬರು.

ಮಹೇಶ್‌ ಬಾಬು ತೆಲುಗು ಚಿತ್ರರಂಗಕ್ಕೆ ಪದಾರ್ಪಣೆ ಮಾಡಿ ಹಲವು ವರ್ಷಗಳು ಕಳೆದಿವೆ. ಆದರೆ, ಇದುವರೆಗೆ ಅವರು ಬೇರೆ ಭಾಷೆ ಚಿತ್ರಗಳಲ್ಲಿ ನಟಿಸಿಲ್ಲ. ಇತ್ತೀಚೆಗೆ ಮಹೇಶ್‌ ಬಾಬು ಹಿಂದಿ ಸಿನಿಮಾದಲ್ಲಿ ನಟಿಸಲಿದ್ದಾರೆ ಎಂಬ ವದಂತಿಗಳು ಹರಿದಾಡುತ್ತಿದ್ದವು. ಈ ಕುರಿತು ಸುದ್ದಿಗಾರರು ಕೇಳಿದ ಪ್ರಶ್ನೆಗೆ ಅವರು ಖಡಕ್‌ ಆಗಿಯೇ ಪ್ರತಿಕ್ರಿಯಿಸಿದ್ದಾರೆ.

‘ನನಗೆ ಹಿಂದಿ ಸಿನಿಮಾ ಮಾಡುವ ಅಗತ್ಯವಿಲ್ಲ. ನಾನು ತೆಲುಗು ಸಿನಿಮಾವನ್ನು ಮಾತ್ರ ಮಾಡುತ್ತೇನೆ. ಆ ಸಿನಿಮಾ ಪ್ರಪಂಚದ್ಯಾಂತ ತೆರೆಕಾಣುತ್ತೆ. ಬಾಲಿವುಡ್ ಚಿತ್ರರಂಗಕ್ಕೆ ನಾನ್ಯಾಕೆ ಹೋಗಬೇಕು’ ಎಂದು ಮಹೇಶ್ ಬಾಬು ಹೇಳಿದ್ದಾರೆ. ಈ ವಿಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್‌ ಆಗಿದ್ದು, ಅಭಿಮಾನಿಗಳು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

‘ಬಾಹುಬಲಿ’ ಹಾಗೂ ‘ಆರ್‌ಆರ್‌ಆರ್‌’ ಖ್ಯಾತಿಯ ಎಸ್.ಎಸ್.ರಾಜಮೌಳಿ ಅವರ ನಿರ್ದೇಶನದ ಮುಂದಿನ ಚಿತ್ರದಲ್ಲಿ ಮಹೇಶ್‌ ಬಾಬು ನಟಿಸಲಿದ್ದು, ಅಭಿಮಾನಿಗಳಲ್ಲಿ ಭಾರಿ ನಿರೀಕ್ಷೆ ಮೂಡಿಸಿದೆ.

ADVERTISEMENT

ಪರಶುರಾಮ್‌ ನಿರ್ದೇಶನದಲ್ಲಿ ಮೂಡಿಬರುತ್ತಿರುವ ‘ಸರ್ಕಾರು ವಾರಿ ಪಾಟ’ ಸಿನಿಮಾದಲ್ಲಿ ಮಹೇಶ್‌ ಬಾಬು –ಕೀರ್ತಿ ಸುರೇಶ್‌ ಕಾಣಿಸಿಕೊಂಡಿದ್ದಾರೆ. ಚಿತ್ರದ ಚಿತ್ರೀಕರಣ ಈಗಾಗಲೇ ಮುಕ್ತಾಯಗೊಂಡಿದ್ದು, ಬಿಡುಗಡೆಗೆ ಸಜ್ಜಾಗಿದೆ. ಈ ವರ್ಷದ ಬಹುನಿರೀಕ್ಷಿತ ಚಿತ್ರಗಳಲ್ಲಿ ಮಹೇಶ್ ಬಾಬು ಅಭಿನಯದ 'ಸರ್ಕಾರು ವಾರಿ ಪಾಟ' ಕೂಡ ಒಂದಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.