
ನಟ, ತಮಿಳಿಗ ವೆಟ್ರಿ ಕಳಗಂ (ಟಿವಿಕೆ) ಪಕ್ಷದ ಸಂಸ್ಥಾಪಕ ವಿಜಯ್ ಅವರ ಪತ್ನಿ ಸಂಗೀತಾ ಅವರು ವಿಚ್ಛೇದನ ಕೋರಿ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದಾರೆ. ಇದೀಗ ವಿಜಯ್ ತಂದೆ ಚಂದ್ರಶೇಖರ್ ಅವರು ಮಗ, ಸೊಸೆ ಕುರಿತು ಅಭಿಪ್ರಾಯ ಹಂಚಿಕೊಂಡಿರುವ ವಿಡಿಯೊ ಸಾಮಾಜಿಕ ಮಾಧ್ಯಮದಲ್ಲಿ ಹರಿದಾಡುತ್ತಿದೆ.
‘ಸಂದರ್ಶನ ಒಂದರಲ್ಲಿ ನಿರೂಪಕಿಯು ಚಂದ್ರಶೇಖರ್ ಅವರಿಗೆ ವಿಜಯ್–ಸಂಗೀತಾ ಜೋಡಿ ಬಗ್ಗೆ ನಿಮ್ಮ ಅಭಿಪ್ರಾಯವೇನು? ಎಂದು ಕೇಳುತ್ತಾರೆ. ಅದಕ್ಕೆ ಉತ್ತರಿಸಿದ ಚಂದ್ರಶೇಖರ್ ಅವರು, ‘ವಿಜಯ್ ಸಾಮಾನ್ಯವಾಗಿ ಯಾರ ಮಾತುಗಳನ್ನು ಕೇಳುವುದಿಲ್ಲ ಆದರೆ ಸಂಗೀತಾ ಅವರ ಮಾತುಗಳಿಗೆ ಗೌರವ ನೀಡುತ್ತಾರೆ. ಅಲ್ಲದೆ ಅವರಿಗೆ ಆದ್ಯತೆ ನೀಡುತ್ತಾರೆ' ಎಂದು ಹೇಳಿಕೊಂಡಿದ್ದಾರೆ.
ವಿಜಯ್– ಸಂಗೀತಾ ಅವರು ಲಂಡನ್‌ನಲ್ಲಿ 1998ರ ಜುಲೈ 10ರಂದು ವಿವಾಹ ನೋಂದಾಯಿ ಮಾಡಿಸಿದ್ದು, 1999ರ ಆ. 25ರಂದು ಚೆನ್ನೈನಲ್ಲಿ ವಿಧ್ಯುಕ್ತವಾಗಿ ಮದುವೆ ನಡೆದಿತ್ತು.
ಸಂಗೀತಾ ಅವರು ವಿಚ್ಛೇದನ ಕೋರಿ ಸಲ್ಲಿಸಿರುವ ಅರ್ಜಿಯಲ್ಲಿ, ‘ವಿಜಯ್ ಅವರು 2021ರಿಂದಲೂ ನನ್ನನ್ನು ಭಾವನಾತ್ಮಕವಾಗಿ ದೂರವಿಟ್ಟಿದ್ದಾರೆ. ಮನೆ ಬಿಟ್ಟು ಹೋಗುವಂತೆ ಹೇಳಿದ್ದರು. ಅದಕ್ಕೆ ಸ್ಪಂದಿಸದಿದ್ದಾಗ ಪ್ರತ್ಯೇಕವಾಗಿ ವಾಸಿಸುವಂತೆ ಒತ್ತಾಯಿಸಿದರು. ಆದರೆ, ನಟಿಯೊಂದಿಗೆ ಮುಕ್ತ ಒಡನಾಟ ಹೊಂದಿದ್ದರು’ ಎಂದು ಅರ್ಜಿಯಲ್ಲಿ ದೂರಿದ್ದಾರೆ.
ಚೆಂಗಲ್ಪಟ್ಟು ಜಿಲ್ಲೆಯ ಕುಟುಂಬ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದು, ಏ. 10ರಂದು ವಿಚಾರಣೆಗೆ ಬರುವ ಸಾಧ್ಯತೆ ಇದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.