ADVERTISEMENT

ಸೂರ್ಯನ ಚುಂಬಿಸಿ, ಅಭಿಮಾನಿಗಳಲ್ಲಿ ಬಿಸಿಯೇರಿಸಿದ ಈಶಾ ಗುಪ್ತ

​ಪ್ರಜಾವಾಣಿ ವಾರ್ತೆ
Published 25 ಫೆಬ್ರುವರಿ 2020, 8:40 IST
Last Updated 25 ಫೆಬ್ರುವರಿ 2020, 8:40 IST
ಈಶಾ ಗುಪ್ತ
ಈಶಾ ಗುಪ್ತ   

ಮುಂಬೈ: 'ಬಿಸಿ ಬಿಸಿ' ಚಿತ್ರಗಳ ಮೂಲಕ ಸದಾ ಸುದ್ದಿಯಲ್ಲಿರುವ ಬಾಲಿವುಡ್‌ನ ಮಾದಕ ಚೆಲುವೆ ಈಶಾ ಗುಪ್ತ ಇತ್ತೀಚೆಗೆ ತಮ್ಮ ಫೋಟೊಶೂಟ್‌ ಚಿತ್ರಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿದ್ದಾರೆ.

ಕಳೆದ ನಾಲ್ಕು ದಿನಗಳಿಂದ ಈಶಾ ಗುಪ್ತ ತಮ್ಮ ಫೋಟೊಶೂಟ್‌ ಚಿತ್ರಗಳನ್ನು ಹಂಚಿಕೊಳ್ಳುತ್ತಿದ್ದಾರೆ. ಬಿಕಿನಿ ಉಡುಗಡಯಲ್ಲಿ ಸೂರ್ಯನಿಗೆ ಮುತ್ತಿಡುತ್ತಿರುವ (ಬಿಸಿಲಿಗೆ ಮೈಯೊಡ್ಡಿ) ಫೋಟೊ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್‌ ಆಗಿದೆ.

ಬಿಳಿ ಉಡುಪಿನಲ್ಲಿ ಪೋಸ್‌ ಕೊಟ್ಟಿರುವ ಈಶಾ ಚಿತ್ರಗಳ ಸಾಕಷ್ಟು ವೈರಲ್‌ ಆಗಿವೆ. ಫೆಬ್ರುವರಿ 15ರಂದು ‘ಶಾರ್ಟ್‌‘ ಹಾಕಿಕೊಂಡು ಫೋಟೊಶೂಟ್‌ ನಡೆಸಿದ ಚಿತ್ರಗಳನ್ನು ಹಂಚಿಕೊಂಡಿದ್ದಾರೆ. ವೈರಲ್‌ ಆಗಿರುವ ಚಿತ್ರಗಳಿಗೆ ಫಿದಾ ಆಗಿರುವಈಶಾ ಸೌಂದರ್ಯವನ್ನು ಕಮೆಂಟ್‌ಗಳ ಮೂಲಕ ಬಣ್ಣಿಸಿದ್ದಾರೆ.

ADVERTISEMENT

ತೆಲುಗು, ತಮಿಳು ಸೇರಿಂದಂತೆ ಹಿಂದಿಯಲ್ಲಿ ಸುಮಾರು 10ಕ್ಕೂ ಹೆಚ್ಚು ಚಿತ್ರಗಳಲ್ಲಿ ನಟಿಸಿದ್ದಾರೆ. ಮುಖ್ಯವಾಗಿ ಐಟಂ ಸಾಂಗ್‌ಗಳಲ್ಲಿ ಈಶಾ ಗುಪ್ತ ಹೆಚ್ಚಾಗಿ ಕಾಣಿಸಿಕೊಂಡಿದ್ದಾರೆ.

ಮಣಿಪಾಲ್ ವಿಶ್ವವಿದ್ಯಾಲಯದಲ್ಲಿ ಪತ್ರಿಕೋದ್ಯಮ ಪದವಿ ಪಡೆದಿದ್ದಾರೆ.

ಫೋಟೊಶೂಟ್‌ ಚಿತ್ರಗಳು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.