ADVERTISEMENT

ಅಪ್ಪನಂತೆ ಮಗ: ಡೆವಿಲ್ ಚಿತ್ರೀಕರಣದ ವೇಳೆ ಒಂದೇ ಸ್ಟೈಲ್‌ನಲ್ಲಿ ವಿನೀಶ್-ದರ್ಶನ್

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 19 ಡಿಸೆಂಬರ್ 2025, 6:55 IST
Last Updated 19 ಡಿಸೆಂಬರ್ 2025, 6:55 IST
<div class="paragraphs"><p>ವಿನೀಶ್‌, ದರ್ಶನ್</p></div>

ವಿನೀಶ್‌, ದರ್ಶನ್

   

ಚಿತ್ರ: ಇನ್‌ಸ್ಟಾಗ್ರಾಂ

ನಟ ದರ್ಶನ್ ಅಭಿನಯದ ಬಹುನಿರೀಕ್ಷಿತ ‘ದಿ ಡೆವಿಲ್’ ಸಿನಿಮಾ ರಾಜ್ಯಾದ್ಯಂತ ಡಿಸೆಂಬರ್ 11ರಂದು (ಗುರುವಾರ) ಬಿಡುಗಡೆಯಾಗಿತ್ತು. ಡೆವಿಲ್ ಸಿನಿಮಾ ಕಣ್ತುಂಬಿಕೊಂಡ ಪ್ರೇಕ್ಷಕರು ಉತ್ತಮ ಪ್ರತಿಕ್ರಿಯೆ ವ್ಯಕ್ತಪಡಿಸುತ್ತಿದ್ದಾರೆ.

ADVERTISEMENT

ವಿನೀಶ್‌, ದರ್ಶನ್

ಡೆವಿಲ್ ಸಿನಿಮಾ ಬಿಡುಗಡೆಯಾದ ಮೊದಲ ದಿನ ನಿರೀಕ್ಷೆಗೂ ಮೀರಿದ ಆರಂಭ ಪಡೆದುಕೊಂಡಿತ್ತು. ಬಹುತೇಕ ಚಿತ್ರಮಂದಿರಗಳು ಹೌಸ್ ಫುಲ್ ಕೂಡ ಆಗಿದ್ದವು. ಇದೀಗ ಡೆವಿಲ್ ಚಿತ್ರದ ಶೂಟಿಂಗ್ ಸಮಯದಲ್ಲಿ ದರ್ಶನ್ ಪುತ್ರ ವಿನೀಶ್ ಭಾಗಿಯಾಗಿದ್ದರು.

ವಿನೀಶ್‌, ದರ್ಶನ್

ಈ ಚಿತ್ರಗಳನ್ನು ನಿರ್ಮಾಣ ಸಂಸ್ಥೆ ಶ್ರೀ ಜೈಮಾತಾ ಕಂಬೈನ್ಸ್ ಸಾಮಾಜಿಕ ಮಾಧ್ಯಮ ಇನ್‌ಸ್ಟಾಗ್ರಾಂನಲ್ಲಿ ಹಂಚಿಕೊಂಡಿದೆ. ಆ ಚಿತ್ರಗಳಲ್ಲಿ ದರ್ಶನ್‌ ಅವರ ಮಗ ವಿನೀಶ್ ತಂದೆ ರೀತಿಯೇ ಕಾಸ್ಟೂಮ್ ತೊಟ್ಟು ಮಿಂಚಿದ್ದಾರೆ. ಉದಯಪುರದಲ್ಲಿ ನಡೆದ ದಿ ಡೆವಿಲ್‌ ಸಿನಿಮಾದ ಚಿತ್ರೀಕರಣ ವೇಳೆ ಅಪ್ಪ-ಮಗ ಒಂದೇ ರೀತಿಯಲ್ಲಿ ಕಾಣಿಸಿಕೊಂಡಿದ್ದು, ಎಲ್ಲರ ಗಮನ ಸೆಳೆಯುತ್ತಿದೆ.

ವಿನೀಶ್‌, ದರ್ಶನ್

ಶ್ರೀ ಜೈಮಾತಾ ಕಂಬೈನ್ಸ್ ಹಂಚಿಕೊಂಡ ಪೋಸ್ಟ್‌ ಜೊತೆಗೆ, ‘24 ಗಂಟೆಗಳ ನಿರಂತರ ಚಿತ್ರೀಕರಣ. ಒಂದು ದಿನದಿಂದ ಕೊನೆಯ ದಿನದವರೆಗೆ ಉದಯಪುರದಲ್ಲಿ ನಡೆದ ದಿ ಡೆವಿಲ್‌ ಸಿನಿಮಾ ಚಿತ್ರೀಕರಣ’ ಎಂದು ಬರೆದುಕೊಂಡಿದೆ.

ವಿಶೇಷ ಏನೆಂದರೆ ಫೋಟೋದಲ್ಲಿ ದರ್ಶನ್ ಹಾಗೂ ಪುತ್ರ ವಿನೀಶ್‌ ಒಂದೇ ಸ್ಟೈಲ್‌ನಲ್ಲಿ ಕಾಣಿಸಿಕೊಂಡಿದ್ದಾರೆ. ಶೂಟಿಂಗ್‌ನಲ್ಲಿ ತಂದೆಯ ಜೊತೆಗೆ ಖುಷಿ ಖುಷಿಯಿಂದ ಕಾಲ ಕಳೆದಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.