ನಟ ದರ್ಶನ್
ನಟ ದರ್ಶನ್ ಅಭಿಮಾನಿಗಳಿಗೆ ‘ದಿ ಡೆವಿಲ್’ ಚಿತ್ರತಂಡ ಅಪ್‌ಡೇಟ್ ಒಂದನ್ನು ನೀಡಿದೆ. ದಿ ಡೆವಿಲ್ ಅಭಿಮಾನಿಗಳ ಒತ್ತಾಯದ ಮೇರೆಗೆ 11ರ ಬೆಳಗ್ಗೆ 6:30ಕ್ಕೆ ಮೊದಲ ಪ್ರದರ್ಶನ ನೀಡಲು ಚಿತ್ರತಂಡ ತೀರ್ಮಾನಿಸಿದೆ.
ಈ ಕುರಿತು ಶ್ರೀ ಜೈಮಾತಾ ಕಂಬೈನ್ಸ್ ಸಾಮಾಜಿಕ ಮಾಧ್ಯಮ ಎಕ್ಸ್‌ನಲ್ಲಿ ಮಾಹಿತಿ ಹಂಚಿಕೊಂಡಿದೆ. ಅದರ ಜೊತೆಗೆ ‘ಅಭಿಮಾನಿಗಳ ಒತ್ತಾಯದ ಮೇರೆಗೆ 11ರ ಬೆಳಗ್ಗೆ 6:30ಕ್ಕೆ ಪ್ರಥಮ ಪ್ರದರ್ಶನ. ಡಿಸೆಂಬರ್ 6ರಂದು ಶನಿವಾರ ಮಧ್ಯಾಹ್ನ 1:05ಕ್ಕೆ ಬುಕ್ ಮೈ ಶೋ ಮತ್ತು ಡಿಸ್ಟ್ರಿಕ್ಟ್ ಆ್ಯಪ್‌ಗಳಲ್ಲಿ ಟಿಕೆಟ್ಸ್ ದೊರೆಯಲಿದೆ’ ಎಂದು ಎಂದು ಬರೆದುಕೊಂಡಿದೆ.
ಇತ್ತೀಚೆಗೆ ದಿ ಡೆವಿಲ್ ಸಿನಿಮಾದ ಹಾಡೊಂದರಲ್ಲಿ ನಟ ದರ್ಶನ್ ಕುಳಿತುಕೊಂಡಿದ್ದ ಕುರ್ಚಿಯನ್ನು ಅಭಿಮಾನಿಗಳ ಪ್ರದರ್ಶನಕ್ಕೆ ಇಡಲಾಗಿತ್ತು. ದಿ ಡೆವಿಲ್ ಸಿನಿಮಾಗಾಗಿಯೇ ಚಿತ್ರತಂಡ ವಿಶೇಷವಾಗಿಯೇ ಕುರ್ಚಿಯನ್ನು ತಯಾರಿಸಿತ್ತು. ಸಿನಿಮಾ ಚಿತ್ರೀಕರಣ ಮುಕ್ತಾಯದ ಬಳಿಕ ಕುರ್ಚಿ ಮೇಲೆ ಅಭಿಮಾನಿಗಳು ಕುಳಿತುಕೊಳ್ಳುವ ಅವಕಾಶವನ್ನು ಚಿತ್ರತಂಡ ನೀಡಿತ್ತು. ಈಗ ಅಭಿಮಾನಿಗಳ ಒತ್ತಾಯದ ಮೇರೆಗೆ 11ರ ಬೆಳಗ್ಗೆ 6:30ಕ್ಕೆ ಪ್ರಥಮ ಪ್ರದರ್ಶನಗೊಳಿಸಲು ಚಿತ್ರತಂಡ ತೀರ್ಮಾನಿಸಿದೆ.
ದಿ ಡೆವಿಲ್ ಸಿನಿಮಾ ಇದೇ ಡಿಸೆಂಬರ್ 11ರಂದು ಬಿಡುಗಡೆಯಾಗಲಿದೆ. ಮಿಲನಾ ಪ್ರಕಾಶ್ ಅವರ ನಿರ್ದೇಶನದಲ್ಲಿ ಮೂಡಿ ಬರುತ್ತಿರುವ ಈ ಸಿನಿಮಾದಲ್ಲಿ ದರ್ಶನ್, ರಚನಾ ರೈ, ಶರ್ಮಿಳಾ ಮಾಂಡ್ರೆ ಮುಂತಾದವರು ನಟಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.