ADVERTISEMENT

ವಿಡಿಯೊ ನೋಡಿ: ದೇವರ ಪೂಜೆಯಲ್ಲೂ ‘ಪುಷ್ಪ’ ಚಿತ್ರದ ‘ಸಾಮಿ ಸಾಮಿ’ ಹಾಡು!

​ಪ್ರಜಾವಾಣಿ ವಾರ್ತೆ
Published 10 ಜನವರಿ 2022, 8:27 IST
Last Updated 10 ಜನವರಿ 2022, 8:27 IST
 ‘ಸಾಮಿ ಸಾಮಿ’ ಹಾಡು
‘ಸಾಮಿ ಸಾಮಿ’ ಹಾಡು   

ಕನ್ನಡತಿ ರಶ್ಮಿಕಾ ಮಂದಣ್ಣ ನಟಿಸಿರುವ ‘ಪುಷ್ಪ’ ಸಿನಿಮಾ ಭರ್ಜರಿ ಯಶಸ್ಸು ಕಂಡಿದ್ದುಚಿತ್ರದಲ್ಲಿರುವ ‘ಸಾಮಿ ಸಾಮಿ..’ ಹಾಡು ಸಖತ್​ ಫೇಮಸ್​ ಆಗಿದೆ.

ಸ್ಟಾರ್‌ ನಟ ಅಲ್ಲು ಅರ್ಜುನ್ ನಾಯಕ ನಟರಾಗಿ ನಟಿಸಿದ್ದಾರೆ. ಇದರಲ್ಲಿ ರಶ್ಮಿಕಾ ಹೆಜ್ಜೆ ಹಾಕಿರುವ ’ಸಾಮಿ ಸಾಮಿ’ ಹಾಡು ಇಂಟರ್ನೆಟ್‌ನಲ್ಲಿ ವೈರಲ್‌ ಆಗಿದೆ. ಸದ್ಯ ಈ ಹಾಡನ್ನು ಕೇರಳದ ದೇವಾಲಯದಲ್ಲಿ ಟ್ಯೂನ್‌ ಆಗಿ ಬಳಕೆ ಮಾಡಿದ್ದಾರೆ. ಇದು ಕೂಡ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ.

ಕೇರಳದ ದೇವಾಲಯದಲ್ಲಿ ಪೂಜೆಯ ಸಂದರ್ಭದಲ್ಲಿ ಅಲ್ಲಿನ ವಾದ್ಯದವರು ‘ಸಾಮಿ ಸಾಮಿ..’ ಹಾಡಿನ ಟ್ಯೂನ್​ ನುಡಿಸಿದ್ದಾರೆ. ಇದನ್ನು ಲಕ್ಷಾಂತರ ಜನರು ಸೋಶಿಯಲ್‌​ ಮಿಡಿಯಾದಲ್ಲಿ ಶೇರ್ ಮಾಡಿಕೊಳ್ಳುತ್ತಿದ್ದಾರೆ.

ADVERTISEMENT

ಸಾಮಿ ಸಾಮಿ ಹಾಡು ವೈರಲ್ ಆಗುತ್ತಿರುವುದು ಹಾಗೂ ಅದರ ಟ್ಯೂನ್‌ ವಿವಿಧ ಕಡೆಗಳಲ್ಲಿ ಬಳಕೆಯಾಗುತ್ತಿರುವುದಕ್ಕೆ ಆ ಹಾಡಿನ ಜನಪ್ರಿಯತೆಗೆ ಸಾಕ್ಷಿಯಾಗಿದೆ ಎಂದು ಹಲವರು ಕಾಮೆಂಟ್‌ ಮಾಡುತ್ತಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.