
ಸಿನಿಮಾದ ಪೋಸ್ಟರ್
ಚಿತ್ರ ಕೃಪೆ: V Creations
ದಳಪತಿ ವಿಜಯ್ ಅವರ ಬಹುನಿರೀಕ್ಷಿತ ಸಿನಿಮಾ ‘ಜನ ನಾಯಗನ್’ ಕಾನೂನು ತೊಂದರೆಗಳನ್ನು ಎದುರಿಸುತ್ತಿದೆ. ಈ ನಡುವೆ 2016ರಲ್ಲಿ ಬಿಡುಗಡೆಯಾದ ಅವರ ‘ಥೇರಿ’ ಸಿನಿಮಾವನ್ನು ಮರುಬಿಡುಗಡೆ ಮಾಡುವುದಾಗಿ ನಿರ್ಮಾಪಕರು ಘೋಷಿಸಿದ್ದರು.
ವಿಜಯ್ ಅವರು ಹಿಟ್ ಸಿನಿಮಾ ಥೇರಿ ಮರುಬಿಡುಗಡೆ ಅಭಿಮಾನಿಗಳಿಗೆ ಖುಷಿಯನ್ನು ನೀಡಿತ್ತು. ಆದರೆ ಸದ್ಯಕ್ಕೆ ಥೇರಿ ಮರುಬಿಡುಗಡೆಯಾಗುತ್ತಿಲ್ಲ ಎಂದು ನಿರ್ಮಾಪಕರು ಹೇಳಿದ್ದಾರೆ. ಈ ವಿಚಾರ ವಿಜಯ್ ಅಭಿಮಾನಿಗಳಿಗೆ ಆಘಾತ ತಂದಿದೆ.
ಜನ ನಾಯಗನ್ ಚಿತ್ರವನ್ನು ಮುಂದೂಡಿದ ನಂತರ, ಪೊಂಗಲ್‌ಗೆ ಹಲವು ತಮಿಳು ಚಿತ್ರಗಳು ಬಿಡುಗಡೆಯಾಗಲು ಸಿದ್ಧವಾಗಿವೆ. ಹೊಸ ಚಿತ್ರಗಳ ನಿರ್ಮಾಪಕರು, ಥೇರಿ ನಿರ್ಮಾಪಕರನ್ನು ಸಂಪರ್ಕಿಸಿ, 'ಥೇರಿ' ಬಿಡುಗಡೆಯು ನಮ್ಮ ಸಿನಿಮಾಗಳಿಗೆ ಅರ್ಥಿಕ ನಷ್ಟ ಮಾಡಬಹುದು ಎಂಬ ಕಾರಣದಿಂದ ನಿರ್ಧಾರವನ್ನು ಮರುಪರಿಶೀಲಿಸುವಂತೆ ಒತ್ತಾಯಿಸಿದ್ದರು. ನಿರ್ಮಾಪಕರ ಮನವಿಗೆ ಥಾನು ಅವರು ಒಪ್ಪಿಕೊಂಡಿದ್ದು, ಸಿನಿಮಾದ ಮರು ಬಿಡುಗಡೆಯನ್ನು ರದ್ದುಗೊಳಿಸಿದ್ದಾರೆ.
ಅಟ್ಲೀ ಅವರ ನಿರ್ದೇಶನದ ಥೇರಿ ಸಿನಿಮಾದಲ್ಲಿ ವಿಜಯ್ ಅವರು ಡಿಸಿಪಿ ವಿಜಯ ಕುಮಾರ್ ಮತ್ತು ಜೋಸೆಫ್ ಕುರುವಿಲ್ಲಾ ಎಂಬ ದ್ವಿಪಾತ್ರದಲ್ಲಿ ನಟಿಸಿದ್ದಾರೆ. ಈ ಕಥೆಯು ಮಾಜಿ ಪೊಲೀಸ್ ಅಧಿಕಾರಿಯೊಬ್ಬರು ತನ್ನ ಮಗಳನ್ನು ರಕ್ಷಿಸಲು ಮತ್ತು ಆಕೆಯನ್ನು ಬೆಳೆಸಲು ತನ್ನ ಕೆಲಸವನ್ನು ತ್ಯಜಿಸುವುದು ಸಿನಿಮಾದ ಕಥೆಯಾಗಿದೆ. ಬಾಲನಟಿ ನೈನಿಕಾ ಅವರು ವಿಜಯ್ ಮಗಳ ಪಾತ್ರವನ್ನು ನಿರ್ವಹಿಸಿದರೆ, ಸಮಂತಾ ರುತ್ ಪ್ರಭು ಮತ್ತು ಆಮಿ ಜಾಕ್ಸನ್ ಕೂಡ ಪ್ರಮುಖ ಪಾತ್ರಗಳನ್ನು ನಿರ್ವಹಿಸಿದ್ದಾರೆ.
ನಿರ್ಮಾಪಕರಾದ ಕೆವಿಎನ್ ಪ್ರೊಡಕ್ಷನ್ಸ್ ಸುಪ್ರೀಂ ಕೋರ್ಟ್‌ನಲ್ಲಿ ಪ್ರಮಾಣೀಕರಣ ಹೋರಾಟ ನಡೆಸುತ್ತಿರುವುದರಿಂದ ಜನ ನಾಯಗನ್ ಬಿಡುಗಡೆಯು ಅನಿರ್ದಿಷ್ಟಾವಧಿಗೆ ವಿಳಂಬವಾಗಿದೆ. ಚಿತ್ರದ ಯು/ಎ 16+ ರೇಟಿಂಗ್‌ಗೆ ಸಂಬಂಧಿಸಿದ ವಿವಾದಗಳನ್ನು ಒಳಗೊಂಡಿರುವ ಈ ಪ್ರಕರಣವು ಜನವರಿ 15 ರಂದು ವಿಚಾರಣೆಗೆ ಬರುವ ಸಾಧ್ಯತೆಯಿದೆ.
ಸಿಬಿಎಫ್‌ಸಿ ಪ್ರಮಾಣೀಕರಣದಲ್ಲಿನ ವಿಳಂಬವು ನಿರ್ಮಾಪಕರು ತಮ್ಮ ಜನವರಿ 9ರ ಬಿಡುಗಡೆಯ ವಿಂಡೋವನ್ನು ಬಿಟ್ಟುಬಿಡುವಂತೆ ಮಾಡಿದೆ, ಇದು ದಳಪತಿ ವಿಜಯ್ ಪೂರ್ಣ ಸಮಯದ ರಾಜಕೀಯಕ್ಕೆ ಪ್ರವೇಶಿಸುವ ಮೊದಲು ಅವರ ಕೊನೆಯ ಚಿತ್ರ ಯಾವುದು ಎಂಬುದಕ್ಕೆ ಹೆಚ್ಚಿನ ಅನಿಶ್ಚಿತತೆಯನ್ನು ಸೇರಿಸಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.