ADVERTISEMENT

ಇದು ‘ಟೈಮ್ ಪಾಸ್‌’ ಟೀಸರ್: ಅಕ್ಟೋಬರ್ 17ರಂದು ಚಿತ್ರ ತೆರೆಗೆ

​ಪ್ರಜಾವಾಣಿ ವಾರ್ತೆ
Published 10 ಸೆಪ್ಟೆಂಬರ್ 2025, 13:44 IST
Last Updated 10 ಸೆಪ್ಟೆಂಬರ್ 2025, 13:44 IST
ಚಿತ್ರದ ಪೋಸ್ಟರ್‌
ಚಿತ್ರದ ಪೋಸ್ಟರ್‌   

ಚೇತನ್ ಜೋಡಿದಾರ್ ನಿರ್ದೇಶನ ‘ಟೈಮ್ ಪಾಸ್‌’ ಚಿತ್ರದ ಟೀಸರ್‌ ಇತ್ತೀಚೆಗೆ ಬಿಡುಗಡೆಗೊಂಡಿದೆ. ಅಕ್ಟೋಬರ್ 17ರಂದು ಚಿತ್ರ ತೆರೆಗೆ ಬರಲಿದೆ.

‘ಡಾರ್ಕ್ ಹ್ಯೂಮರ್ ಜಾನರಿನ ಕಥೆಯಿದು. ಮನೋರಂಜನೆಯನ್ನೇ ಮುಖ್ಯ ಬಿಂದುವಾಗಿಸಿಕೊಂಡು ಈ ಕಥೆ ಮಾಡಲಾಗಿದೆ. ನನ್ನ ಚೊಚ್ಚಲ ಸಿನಿಮಾ. ಯಾವ ನಿರ್ದೇಶಕರ ಬಳಿಯೂ ಕೆಲಸ ಮಾಡಿಲ್ಲ. ಸಿನಿಮಾ ಪ್ರೇಮದಿಂದ ಎಲ್ಲವನ್ನೂ ನೋಡಿ ಕಲಿತಿದ್ದೇನೆ’ ಎಂದಿದ್ದಾರೆ ನಿರ್ದೇಶಕರು. 

ಶ್ರೀ ಚೇತನ ಸರ್ವಿಸಸ್ ಬ್ಯಾನರ್ ಮೂಲಕ ಗುಂಡೂರು ಶೇಖರ್, ಕಿರಣ್ ಕುಮಾರ್ ಶೆಟ್ಟಿ, ಎಂ.ಹೆಚ್‌.ಕೃಷ್ಣಮೂರ್ತಿ ನಿರ್ಮಾಣ ಮಾಡಿದ್ದಾರೆ. ಇಮ್ರಾನ್ ಪಾಷಾ, ವೈಸಿರಿ ಕೆ.ಗೌಡ, ರಕ್ಷಾರಾಮ್ ಮುಂತಾದವರು ಚಿತ್ರದಲ್ಲಿದ್ದಾರೆ. 

ADVERTISEMENT

ಡಿ.ಎಂ. ಉದಯ ಕುಮಾರ್ (ಡಿಕೆ) ಸಂಗೀತ ನಿರ್ದೇಶನ, ರಾಜೀವ್ ಗಣೇಶ್ ಛಾಯಾಚಿತ್ರಗ್ರಹಣ, ಹರಿ ಪರಮ್ ಸಂಕಲನ ಈ ಚಿತ್ರಕ್ಕಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.