ಹೈದರಾಬಾದ್: ತೆಲುಗು ನಟ ರವಿ ತೇಜಾ ಅಭಿನಯದ ‘ರಾವಣಾಸುರ’ ಚಿತ್ರದ ಎರಡನೇ ಹಂತದ ಚಿತ್ರೀಕರಣ ಮುಕ್ತಾಯವಾಗಿದ್ದು, ಬಿಡುಗಡೆಗೆ ಸಜ್ಜಾಗುತ್ತಿದೆ.
ಆ್ಯಕ್ಷನ್ ಥ್ರಿಲ್ಲರ್ ಕಥಾಹಂದರ ಹೊಂದಿರುವ ಈ ಚಿತ್ರಕ್ಕೆ ನಿರ್ದೇಶಕ ಸುಧೀರ್ ವರ್ಮಾ ಆ್ಯಕ್ಷನ್ ಕಟ್ ಹೇಳಿದ್ದಾರೆ.
ಚಿತ್ರದಲ್ಲಿ ರವಿ ತೇಜಾಗೆ ಐವರು ನಟಿಯರು ಕಾಣಿಸಿಕೊಂಡಿರುವುದು ವಿಶೇಷ. ದಕ್ಷಾ ನಗರ್ಕರ್, ಅನು ಇಮ್ಮಾನ್ಯುಯೆಲ್, ಫರಿಯಾ ಅಬ್ದುಲ್ಲಾ, ಮೇಘಾ ಆಕಾಶ್, ಪೂಜಿತಾ ಪೊನ್ನಡ ಪ್ರಮುಖ ಪಾತ್ರಗಳಲ್ಲಿ ಅಭಿನಯಿಸಿದ್ದಾರೆ.
ಚಿತ್ರದಲ್ಲಿ ರವಿ ತೇಜಾ ವಕೀಲರಾಗಿ ಕಾಣಿಸಿಕೊಂಡರೆ, ನಟ ಸುಶಾಂತ್ ಡೈನಾಮಿಕ್ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಚಿತ್ರಕ್ಕೆ ಅಭಿಷೇಕ್ ನಾಮಾ ಬಂಡವಾಳ ಹೂಡಿದ್ದಾರೆ.
2020ರಲ್ಲಿ ಬಿಡುಗಡೆಯಾದ ಗೋಪಿಚಂದ್ ಮಲಿನೇನಿಯವರ ಕ್ರಾಕ್‌ನಲ್ಲಿ ರವಿತೇಜ ಕೊನೆಯದಾಗಿ ಕಾಣಿಸಿಕೊಂಡಿದ್ದರು. ಇವರ ಹಲವಾರು ಸಿನಿಮಾಗಳು ಇನ್ನು ನಿರ್ಮಾಣದ ಹಂತದಲ್ಲಿವೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.