ADVERTISEMENT

ಬಿಡುಗಡೆಗೂ ಮುನ್ನ ಆನ್‌ಲೈನ್‌ನಲ್ಲಿ ಸೋರಿಕೆಯಾದ ‘ಅವತಾರ್ 2‘ ಸಿನಿಮಾ ಟ್ರೇಲರ್

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 2 ಮೇ 2022, 10:33 IST
Last Updated 2 ಮೇ 2022, 10:33 IST
   

ಬೆಂಗಳೂರು: ಜೇಮ್ಸ್ ಕ್ಯಾಮೆರಾನ್ ನಿರ್ದೇಶನದ ಬಹುನಿರೀಕ್ಷಿತ ಚಿತ್ರ, ಅವತಾರ್ ಸರಣಿಯ ಎರಡನೇ ಭಾಗ ‘ಅವತಾರ್: ದಿ ವೇ ಆಫ್ ವಾಟರ್‘ ಸಿನಿಮಾದ ಟ್ರೇಲರ್, ಬಿಡುಗಡೆಗೂ ಮೊದಲೇ ಸೋರಿಕೆಯಾಗಿದೆ.

ಆನ್‌ಲೈನ್‌ನಲ್ಲಿ ಸೋರಿಕೆಯಾದ ಟ್ರೇಲರ್ ತುಣುಕುಗಳನ್ನು ಚಿತ್ರತಂಡದ ಮನವಿಯ ಮೇರೆಗೆ ಇಂಟರ್‌ನೆಟ್‌ನಿಂದ ತೆಗೆಯಲಾಗಿದೆ.

ಅವತಾರ್ ಚಿತ್ರದ ಎರಡನೇ ಭಾಗವನ್ನು ಇದೇ ವರ್ಷದ ಡಿಸೆಂಬರ್ 16ರಂದು ಬಿಡುಗಡೆ ಮಾಡುವುದಾಗಿ ನಿರ್ದೇಶಕ ಜೇಮ್ಸ್ ತಿಳಿಸಿದ್ದರು.

ADVERTISEMENT

ಅಲ್ಲದೆ, ಚಿತ್ರ 160 ಭಾಷೆಗಳಲ್ಲಿ ಬಿಡುಗಡೆಯಾಗಲಿದೆ ಎನ್ನುವ ಮಾಹಿತಿಯನ್ನು ಅವರು ಹಂಚಿಕೊಂಡಿದ್ದರು.

2009ರಲ್ಲಿ ಅವತಾರ್ ಸರಣಿಯ ಮೊದಲ ಭಾಗ ಬಿಡುಗಡೆಯಾಗಿದ್ದು, ₹20,000 ಕೋಟಿಗೂ ಅಧಿಕ ಗಳಿಕೆ ಕಂಡು ವಿಶೇಷ ದಾಖಲೆ ನಿರ್ಮಿಸಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.