ADVERTISEMENT

ಹೃತಿಕ್‌ – ಸಮಂತಾ ಫೋಟೊಗಳು ಸಾಮಾಜಿಕ ಜಾಲತಾಣಗಳಲ್ಲಿ ಟ್ರೆಂಡ್‌: ನಡೆದದ್ದು ಏನು?

​ಪ್ರಜಾವಾಣಿ ವಾರ್ತೆ
Published 23 ಡಿಸೆಂಬರ್ 2021, 12:48 IST
Last Updated 23 ಡಿಸೆಂಬರ್ 2021, 12:48 IST
ಹೃತಿಕ್‌ – ಸಮಂತಾ
ಹೃತಿಕ್‌ – ಸಮಂತಾ    

ಬಾಲಿವುಡ್‌ ನಟ ಹೃತಿಕ್‌ ರೋಷನ್‌ ಹಾಗೂ ನಟಿ ಸಮಂತಾ ಲಾಕ್‌ವುಡ್‌ ಅವರ ಫೋಟೊಗಳು ಸಾಮಾಜಿಕ ಜಾಲತಾಣಗಳಲ್ಲಿ ಟ್ರೆಂಡ್‌ ಆಗಿವೆ.

ಅಮೆರಿಕದಹಾಲಿವುಡ್‌ ನಟಿ ಸಮಂತಾ ಅವರು ಇತ್ತೀಚೆಗೆ ನಟ ಹೃತಿಕ್‌ ರೋಷನ್‌ ಅವರನ್ನು ಭೇಟಿ ಮಾಡಿ, ಹೃತಿಕ್‌ ಜೊತೆ ಇರುವ ಚಿತ್ರಗಳನ್ನು ಸಾಮಾಜಿಕ ಜಾಲತಾಣ ಇನ್‌ಸ್ಟಾಗ್ರಾಮ್‌ನಲ್ಲಿ ಹಂಚಿಕೊಂಡಿದ್ದಾರೆ.

ಸದ್ಯ ಸಮಂತಾ ಅವರು ಸಿನಿಮಾವೊಂದನ್ನು ನಿರ್ಮಾಣ ಮಾಡುತ್ತಿದ್ದು ಅದರ ಕುರಿತಾಗಿ ಹೃತಿಕ್‌ ಜೊತೆ ಮಾತುಕತೆ ನಡೆಸಿದ್ದಾರೆ ಎನ್ನಲಾಗಿದೆ. ಅವರ ಭೇಟಿ ಸಿನಿಮಾಗೆ ಮಾತ್ರ ಸಂಬಂಧಿಸಿದ್ದು ಎಂದು ಹೃತಿಕ್‌ ಮ್ಯಾನೇಜರ್‌ಕೂಡ ಹೇಳಿದ್ದಾರೆ.

ADVERTISEMENT

ಬಾಲಿವುಡ್‌ ಸ್ಟಾರ್‌ ನಟನನ್ನು ಭೇಟಿ ಮಾಡಿ, ಅವರೊಂದಿಗೆ ಕಾಲ ಕಳೆದಿರುವುದು ನನಗೆ ಸಂತಸ ತಂದಿದೆ ಎಂದು ಖಾಸಗಿ ವಾಹಿನಿಗೆ ನೀಡಿದ ಸಂದರ್ಶನದಲ್ಲಿ ಸಮಂತಾ ಹೇಳಿದ್ದಾರೆ. ಈ ಹಿಂದೆ ಸಮಂತಾ ಅವರು ಸಲ್ಮಾನ್‌ ಖಾನ್‌ ಜೊತೆ ಕಾರಿನಲ್ಲಿ ತೆರಳಿದಾಗಲೂ ಅವರ ಫೋಟೊಗಳು ಹರಿದಾಡಿದ್ದವು.

ಹೃತಿಕ್‌ ರೋಷನ್‌ ’ವಾರ್‌’ ಸಿನಿಮಾದ ಯಶಸ್ಸಿನ ಬಳಿಕ ಫೈಟರ್‌ ಎಂಬ ಸಿನಿಮಾಮಾಡುತ್ತಿದ್ದಾರೆ. ಇದುಜನವರಿ ತಿಂಗಳಲ್ಲಿ ಘೋಷಣೆಯಾಗುವ ಸಾಧ್ಯತೆ ಇದೆ. ಹೃತಿಕ್‌ಗೆ ನಾಯಕಿಯಾಗಿ ದೀಪಿಕಾ ಪಡುಕೋಣೆ ನಟಿಸುತ್ತಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.