
ಉಗ್ರಂ ಮಂಜು, ಸಂಧ್ಯಾ
ಚಿತ್ರ: ಇನ್‌ಸ್ಟಾಗ್ರಾಂ
ಚಂದನವನದ ನಟ, ಬಿಗ್‌ಬಾಸ್ ಮಾಜಿ ಸ್ಪರ್ಧಿ ಉಗ್ರಂ ಮಂಜು ಅವರು ಸಂಧ್ಯಾ ಜೊತೆಗೆ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. ಇಂದು (ಜ.23) ಕುಟುಂಬಸ್ಥರ ಸಮ್ಮುಖದಲ್ಲಿ ಉಗ್ರಂ ಮಂಜು ಹಾಗೂ ಸಂಧ್ಯಾ ಧರ್ಮಸ್ಥಳದಲ್ಲಿ ಸರಳವಾಗಿ ಮದುವೆಯಾಗಿದ್ದಾರೆ.
ಉಗ್ರಂ ಮಂಜು, ಸಂಧ್ಯಾ
ನಟ ಉಗ್ರಂ ಮಂಜು ಅವರ ಮನೆಯಲ್ಲಿ ಮದುವೆ ಸಂಭ್ರಮ ಜೋರಾಗಿದೆ. ಇತ್ತೀಚೆಗೆ ಸಂಧ್ಯಾ ಖುಷಿ ಜೊತೆಗೆ ನಿಶ್ಚಿತಾರ್ಥ ಮಾಡಿಕೊಂಡಿದ್ದರು. ಇದೀಗ ಈ ಇಬ್ಬರು ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದಾರೆ. ಜ.21ರಂದು ನಟನ ಮನೆಯಲ್ಲಿ ಅರಿಸಿಣ ಹಾಗೂ ಮೆಹೆಂದಿ ಶಾಸ್ತ್ರಗಳು ನಡೆದಿದ್ದವು. ಮದುವೆಯ ಬಳಿಕ ಈ ಜೋಡಿ ಬೆಂಗಳೂರಿನಲ್ಲಿ ಅದ್ಧೂರಿಯಾಗಿ ಆರತಕ್ಷತೆ ಕಾರ್ಯಕ್ರಮ ನಡೆಸಲು ನಿರ್ಧರಿಸಿದೆ.
ಉಗ್ರಂ ಮಂಜು ಪತ್ನಿ ಸಂಧ್ಯಾ
ಉಗ್ರಂ ಮಂಜು ಎಂದೇ ಖ್ಯಾತಿ ಪಡೆದುಕೊಂಡಿರುವ ಇವರು, ನಟ ಸುದೀಪ್ ಜತೆಗೆ ‘ಮ್ಯಾಕ್ಸ್’ನಲ್ಲಿ ನಟಿಸಿದ್ದರು. ನಂತರದ ದಿನಗಳಲ್ಲಿ ಮ್ಯಾಕ್ಸ್ ಮಂಜು ಎಂದು ಸಾಮಾಜಿಕ ಜಾಲತಾಣದಲ್ಲಿ ಹೆಸರನ್ನು ಬದಲಾಯಿಸಿಕೊಂಡಿದ್ದಾರೆ.
ಉಗ್ರಂ ಮಂಜು, ಸಂಧ್ಯಾ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.