ADVERTISEMENT

ಹೋಳಿ ರಂಗಲ್ಲೂ ಹುಡುಗರ ಗುಂಗೇರಿಸಿದ ನಟಿ ಉರ್ಫಿ ಜಾವೇದ್!

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 20 ಮಾರ್ಚ್ 2022, 7:32 IST
Last Updated 20 ಮಾರ್ಚ್ 2022, 7:32 IST
   

ಬೆಂಗಳೂರು: ಬೋಲ್ಡ್ ಮತ್ತು ಬ್ಯೂಟಿಫುಲ್ ಖ್ಯಾತಿಯ ನಟಿ ಉರ್ಫಿ ಜಾವೇದ್‌ ಮತ್ತೊಮ್ಮೆ ಸುದ್ದಿಯಲ್ಲಿದ್ದಾರೆ. ದೇಶದಾದ್ಯಂತ ಹೋಳಿ ಸಂಭ್ರಮ ಮನೆ ಮಾಡಿದೆ. ಇದೇ ವೇಳೆಉರ್ಫಿ ಕೂಡ ಹೋಳಿ ಸಂಭ್ರಮದಲ್ಲಿ ಪಾಲ್ಗೊಂಡು ಗಮನ ಸೆಳೆದಿದ್ದಾರೆ.

ತಮ್ಮ ಉಡುಗೆ ತೊಡುಗೆ ಮೂಲಕವೇ ಆಕರ್ಷಕವಾಗಿ ಕಾಣಿಸಿಕೊಂಡಿರುವ ಉರ್ಫಿ ಹೋಳಿ ಸಂಭ್ರಮದ ವೇಳೆಯೂ ಹಾಟ್ ಆಗಿ ಕಾಣಿಸಿಕೊಳ್ಳುವ ಚಾಕಚಕ್ಯತೆಯನ್ನು ತೋರಿಸಿದ್ದಾರೆ.

ಉರ್ಫಿ ಜಾವೇದ್‌

ಬಿಳಿ ಕುರ್ತಾ ಪೈಜಾಮ್‌ನಲ್ಲಿ ಆಕರ್ಷಕ ಉಡುಗೆ ತೊಟ್ಟು ಉರ್ಫಿ ರಂಗಿನಾಟ ಆಡಿದ್ದಾರೆ. ಈ ಫೋಟೊಗಳು ಸಾಮಾಜಿಕ ಜಾಲತಾಣಗಳಲ್ಲಿ ಸಾಕಷ್ಟು ವೈರಲ್ ಆಗಿವೆ.

ADVERTISEMENT
ಉರ್ಫಿ

ಉರ್ಫಿ ಹೋಳಿ ರಂಗಲ್ಲೂ ಹುಡುಗರ ಗುಂಗು ಏರಿಸಿದ್ದಾರೆ ಎಂದು ಕಮೆಂಟ್ ಮಾಡಿದ್ದಾರೆ.ಸದಾ ಕಾಲ ಉಡುಪಿನ ವಿಚಾರದಲ್ಲಿ ಟ್ರೋಲ್‌ಗೆ ಸಿಲುಕುವ ಉರ್ಫಿ, ಈ ಸಾರಿಯೂ ಉಡುಪಿನ ಮೂಲಕವೇ ಗಮನ ಸೆಳೆದಿದ್ದಾರೆ.

ಉರ್ಫಿ

ಟ್ರೋಲ್‌ಗಳಿಗೆ ತೆಲೆ ಕೆಡಿಸಿಕೊಳ್ಳದ ಈ ನಟಿ ತಮ್ಮ ಬೋಲ್ಡ್ ಲುಕ್‌ನಿಂದಲೇ ಸೋಶಿಯಲ್ ಮೀಡಿಯಾದಲ್ಲಿ ಅಪಾರ ಅಭಿಮಾನಿಗಳನ್ನು ಸಂಪಾದಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.