ADVERTISEMENT

ಬಲ್ಲೆ ಬಲ್ಲೇ ಮಾತ್ರವಲ್ಲ, ಬ್ಯಾಲೆ ಡ್ಯಾನ್ಸ್‌ಗೂ ರೆಡಿ: ವಾಣಿ ಕಪೂರ್

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 23 ಡಿಸೆಂಬರ್ 2021, 4:53 IST
Last Updated 23 ಡಿಸೆಂಬರ್ 2021, 4:53 IST
ನಟಿ ವಾಣಿ ಕಪೂರ್
ನಟಿ ವಾಣಿ ಕಪೂರ್    

ಬೆಂಗಳೂರು: ಬಾಲಿವುಡ್ ನಟಿ ವಾಣಿ ಕಪೂರ್ ಅವರ ಹೊಸ ಚಿತ್ರ ‘ಚಂದೀಗಡ್‌ ಕರೇ ಆಶಿಕಿ‘ ಇತ್ತೀಚೆಗೆ ಬಿಡುಗಡೆಯಾಗಿದೆ.

ಅದರಲ್ಲಿ ವಾಣಿ ಕಪೂರ್ ಅಭಿನಯವನ್ನು ಜನರು ಕೊಂಡಾಡಿದ್ದಾರೆ.

ವಾಣಿ ಕಪೂರ್ ಎಂದರೆ ಅವರು ಹೆಚ್ಚಾಗಿ ಬೋಲ್ಡ್ ಆ್ಯಂಡ್ ಬ್ಯೂಟಿಫುಲ್ ಎನ್ನಿಸುವಂತಹ ಪಾತ್ರಗಳನ್ನೇ ಆಯ್ದುಕೊಳ್ಳುತ್ತಾರೆ.

ADVERTISEMENT

ಅಲ್ಲದೆ, ವಾಣಿ ಅವರಿಗೆ ಡ್ಯಾನ್ಸ್ ಎಂದರೆ ಹೆಚ್ಚು ಇಷ್ಟವಂತೆ.. ವಿವಿಧ ಪ್ರಕಾರದ ಡ್ಯಾನ್ಸ್‌ನಲ್ಲಿ ಅವರು ಪರಿಣಿತರಾಗಿದ್ದಾರೆ.

ತಮ್ಮ ಇನ್‌ಸ್ಟಾಗ್ರಾಂನಲ್ಲಿ ಅವರು ಹೊಸ ಬೂಮರಂಗ್ ವಿಡಿಯೊ ಒಂದನ್ನು ಪೋಸ್ಟ್ ಮಾಡಿದ್ದು, ಬಲ್ಲೆ ಬಲ್ಲೇ ಮಾತ್ರವಲ್ಲ, ಬ್ಯಾಲೆ ಡ್ಯಾನ್ಸ್‌ಗೂ ಸೈ.. ಎಂದು ಅಡಿಬರಹ ನೀಡಿದ್ದಾರೆ.

ಜತೆಗೆ ವಾಣಿ ಫ್ಯಾಷನ್ ಸ್ಟೇಟ್‌ಮೆಂಟ್ಕೂಡ ಯುವಕರಿಗೆ ಮೆಚ್ಚುಗೆಯಾಗುತ್ತದೆ ಎನ್ನುವುದಕ್ಕೆ ಅವರ ಇನ್‌ಸ್ಟಾಗ್ರಾಮ್ ಪೋಸ್ಟ್‌ಗಳೇ ಸಾಕ್ಷಿ..

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.