ADVERTISEMENT

ಸಾಮಾಜಿಕ ಮಾಧ್ಯಮ ಬಳಸುವುದು ಮಗಳ ಆಯ್ಕೆಗೆ ಬಿಟ್ಟ ವಿಚಾರ: ವರುಣ್ ಧವನ್

ಪಿಟಿಐ
Published 7 ಜನವರಿ 2026, 10:12 IST
Last Updated 7 ಜನವರಿ 2026, 10:12 IST
<div class="paragraphs"><p>ಬಾಲಿವುಡ್‌ ನಟ ವರುಣ್‌ ಧವನ್‌</p></div>

ಬಾಲಿವುಡ್‌ ನಟ ವರುಣ್‌ ಧವನ್‌

   

ಚಿತ್ರ: ಪ್ರಜಾವಾಣಿ

ಮುಂಬೈ: ಬಾಲಿವುಡ್‌ ನಟ ವರುಣ್ ಧವನ್ ‘ತಮ್ಮ ಮಗಳು ಲಾರಾ ಮುಖವನ್ನು ನಾವು ಸಾಮಾಜಿಕ ಮಾಧ್ಯಮದಲ್ಲಿ ಬಹಿರಂಗಪಡಿಸುವುದಿಲ್ಲ, ಅದು ಅವಳ ಆಯ್ಕೆ’ ಎಂದಿದ್ದಾರೆ.

ADVERTISEMENT

ಜನವರಿ 23 ರಂದು ಬಿಡುಗಡೆಯಾಗಲಿರುವ ’ಬಾರ್ಡರ್ 2’ ಸಿನಿಮಾದಲ್ಲಿ ವರುಣ್ ಧವನ್ ನಟಿಸಿದ್ದಾರೆ. ಸಿನಿಮಾ ತೆರೆಕಾಣುವುದಕ್ಕೂ ಮುನ್ನ ತಮ್ಮ ಎಕ್ಸ್‌ ಖಾತೆಯಲ್ಲಿ ಅಭಿಮಾನಿಗಳೊಂದಿಗೆ ಪ್ರಶ್ನೋತ್ತರ ನಡೆಸಿದ್ದಾರೆ. ಆ ವೇಳೆ ಅವರ ಅಭಿಮಾನಿಯೊಬ್ಬರು ’ಲಾರಾ ಮುಖ ಯಾವಾಗ ಬಹಿರಂಗ ಆಗುತ್ತೆ?’ ಎಂದು ಕೇಳಿದ್ದಾರೆ. ಇದಕ್ಕೆ ಉತ್ತರಿಸಿದ ವರುಣ್ ಧವನ್ ‘ಸಾಮಾಜಿಕ ಮಾಧ್ಯಮದಲ್ಲಿ ಇರಬೇಕೆ ಅಥವಾ ಬೇಡವೇ ಎಂಬ ಆಯ್ಕೆ ತನ್ನ ಮಗಳದ್ದಾಗಿರಬೇಕು. ಅದು ನಾವು ನಿರ್ಧರಿಸಲು ಬಯಸುವ ವಿಷಯವಲ್ಲ’ ಎಂದು ಉತ್ತರಿಸಿದ್ದಾರೆ.

 2024ರಲ್ಲಿ ವರುಣ್‌  ಧವನ್, ನತಾಶಾ ದಂಪತಿಗೆ ಹೆಣ್ಣು ಮಗು ಜನಿಸಿತ್ತು. ಆಗಾಗ ತನ್ನ ಮಗಳ ಪೋಟೊಗಳನ್ನು ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಂಡರೂ, ಮಗಳ ಮುಖದ ಮೇಲೆ ಎಮೋಜಿ ಹಾಕಿ ಫೋಟೊಗಳನ್ನು ಹಂಚಿಕೊಳ್ಳುತ್ತಿದ್ದರು. ಈ ಕಾರಣಕ್ಕಾಗಿ ಅವರ ಮಗಳ ಪೋಟೊ ನೋಡಲು ಅಭಿಮಾನಿಗಳು ಕಾತರರಾಗಿದ್ದಾರೆ. 

ಇತ್ತೀಚೆಗೆ ವರುಣ್ ನಟನೆಯ ’ಸನ್ನಿ ಸಂಸ್ಕಾರಿ ಕಿ ತುಳಸಿ ಕುಮಾರಿ’ ಹಾಗೂ ’ ಹಂಪಿ ಶರ್ಮಾ ಕಿ ದುಲ್ಹನಿಯಾ’ ಸಿನಿಮಾಗಳು ಬಿಡುಗಡೆಯಾಗಿವೆ.

ಟಿ-ಸೀರೀಸ್ ಫಿಲ್ಮ್ಸ್ ಮತ್ತು ಜೆಪಿ ಫಿಲ್ಮ್ಸ್‌ಗಳ ಸಹಭಾಗಿತ್ವದಲ್ಲಿ ನಿರ್ಮಾಣವಾಗಿರುವ ‘ಬಾರ್ಡರ್‌–2’ ಸಿನಿಮಾ ಜನವರಿ 23ರಂದು ಬಿಡುಗಡೆಯಾಗಲಿದೆ.

ಈ ಸಿನಿಮಾ 1997ರ ಬಾರ್ಡರ್‌ ಸಿನಿಮಾದ ಮುಂದುವರಿದ ಭಾಗವಾಗಿದೆ. ಸಿನಿಮಾವನ್ನು ಅನುರಾಗ್ ಸಿಂಗ್ ನಿರ್ದೇಶಿಸಿದ್ದಾರೆ. ಸನ್ನಿ ಡಿಯೋಲ್, ಸೋನಮ್ ಬಜ್ವಾ, ಅಹಾನ್ ಶೆಟ್ಟಿ, ದಿಲ್ಜಿತ್ ದೋಸಾಂಜ್ ಮತ್ತು ಮೇಧಾ ರಾಣಾ ನಟಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.