ADVERTISEMENT

ಭೂತ್ ಟ್ರೇಲರ್‌: ನಟ ವಿಕ್ಕಿ ಕೌಶಲ್‌ಗೆ ದೆವ್ವಗಳ ಕಾಟ! ಫೆ. 21ಕ್ಕೆ ಬಿಡುಗಡೆ

​ಪ್ರಜಾವಾಣಿ ವಾರ್ತೆ
Published 4 ಫೆಬ್ರುವರಿ 2020, 9:22 IST
Last Updated 4 ಫೆಬ್ರುವರಿ 2020, 9:22 IST
   

ಮುಂಬೈ:ವಿಕ್ಕಿ ಕೌಶಲ್‌ ಅಭಿನಯದ ‘ಭೂತ್‌ ಪಾರ್ಟ್‌ ಒನ್‌: ದಿ ಹಂಟೆಡ್‌ ಶಿಪ್‌’ ಸಿನಿಮಾದ ಟ್ರೇಲರ್ ಬಿಡುಗಡೆಯಾಗಿ ಸಾಮಾಜಿಕ ಜಾಲತಾಣಗಳಲ್ಲಿ ಸಾಕಷ್ಟು ಸದ್ದು ಮಾಡುತ್ತಿದೆ.

ಚಿತ್ರತಂಡ ಈ ಹಿಂದೆ ಘೋಷಣೆ ಮಾಡಿದಂತೆಫೆಬ್ರುವರಿ 21ಕ್ಕೆ ಚಿತ್ರ ಬಿಡುಗಡೆಯಾಗಲಿದೆ. ನಿನ್ನೆ ಚಿತ್ರದ ಟ್ರೇಲರ್‌ ಬಿಡುಗಡೆಯಾಗಿದ್ದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್‌ ಆಗಿದೆ. ಯುಟ್ಯೂಬ್‌ನಲ್ಲಿ ಬಿಡುಗಡೆಯಾದ 24 ಗಂಟೆಗಳಲ್ಲಿ 1.5 ಕೋಟಿ ಜನರು ವೀಕ್ಷಣೆ ಮಾಡಿದ್ದಾರೆ.

ವಿಕ್ಕಿ ಕೌಶಲ್‌ ಅವರ ಮೊದಲ ಹಾರರ್‌ ಸಿನಿಮಾ ಇದಾಗಿದೆ.ಮುಂಬೈನಲ್ಲಿ ನಡೆದ ನೈಜ ಘಟನೆಯೊಂದನ್ನು ಆಧರಿಸಿ ಸಿನಿಮಾ ತೆಗೆಯಲಾಗಿದೆ. ಒಂದು ವಸತಿ ಕಾಲೋನಿ ಮತ್ತು ಹಡಗಿನಲ್ಲಿಸಿನಿಮಾದ ಸಂಪೂರ್ಣ ಶೂಟಿಂಗ್‌ನಡೆದಿದೆ. ಅದರಲ್ಲೂ ರಾತ್ರಿ ವೇಳೆಯಲ್ಲಿ ಶೂಟಿಂಗ್ ಮಾಡಿರುವುದು ವಿಶೇಷ. ಕೊಲೆ ಪ್ರಕರಣದ ತನಿಖೆ ಮಾಡುತ್ತಿರುವ ವಿಕ್ಕಿ ಕೌಶಲ್‌ಗೆ ದೆವ್ವಗಳು ಎದುರಾಗುತ್ತವೆ,ಮುಂದಿನ ಕುತೂಹಲವನ್ನು ತೆರೆಯ ಮೇಲೆ ನೋಡಿ ಎಂಜಾಯ್‌ ಮಾಡಬೇಕು ಎಂದು ಚಿತ್ರ ತಂಡ ಹೇಳಿದೆ.

ADVERTISEMENT

ಈ ಸಿನಿಮಾವನ್ನುಕರಣ್‌ ಜೋಹರ್ ನಿರ್ಮಾಣ ಮಾಡಿದ್ದು ಭಾನು ಪ್ರತಾಪ್‌ ಸಿಂಗ್ ಆ್ಯಕ್ಷನ್‌ ಕಟ್‌ ಹೇಳಿದ್ದಾರೆ. ಭೂಮಿ ಪಡ್ನೇಕರ್ ಸೇರಿದಂತೆ ಅಶುತೋಷ್‌ ರಾಣಾ, ಸಿದ್ಧಾರ್ಥ ಕಪೂರ್‌ ಮುಖ್ಯಭೂಮಿಕೆಯಲ್ಲಿ ನಟಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.