ADVERTISEMENT

ಬಾಕ್ಸ್‌ ಆಫೀಸ್‌ನಲ್ಲಿ ₹200 ಕೋಟಿ ಗಳಿಕೆ ಮಾಡಿದ ‘ಛಾವಾ’

ಪಿಟಿಐ
Published 21 ಫೆಬ್ರುವರಿ 2025, 3:11 IST
Last Updated 21 ಫೆಬ್ರುವರಿ 2025, 3:11 IST
<div class="paragraphs"><p>ಛಾವಾ ಸಿನಿಮಾದಲ್ಲಿ ವಿಕ್ಕಿ ಕೌಶಲ್‌</p></div>

ಛಾವಾ ಸಿನಿಮಾದಲ್ಲಿ ವಿಕ್ಕಿ ಕೌಶಲ್‌

   

ನವದೆಹಲಿ: ಬಾಲಿವುಡ್ ನಟ ವಿಕ್ಕಿ ಕೌಶಲ್‌, ರಶ್ಮಿಕಾ ಮಂದಣ್ಣ ನಟನೆಯ ಛಾವಾ ಚಿತ್ರ ಬಾಕ್ಸ್‌ ಆಫೀಸ್‌ನಲ್ಲಿ ₹200 ಕೋಟಿ ಗಳಿಕೆ ಮಾಡಿದೆ.

ಸಿನಿಮಾ ಬಿಡುಗಡೆಯಾದ ಆರನೇ ದಿನಕ್ಕೆ ₹203.68 ಕೋಟಿ ಗಳಿಕೆ ಮಾಡಿದೆ ಎಂದು ಪ್ರೊಡಕ್ಷನ್‌ ಹೌಸ್‌ ಮಡ್ಡೊಕ್ ಫಿಲ್ಮ್ಸ್‌ ಹೇಳಿದೆ. 

ADVERTISEMENT

ಲಕ್ಷ್ಮಣ್‌ ಉತೆಕರ್ ನಿರ್ದೇಶನದ ಈ ಚಿತ್ರ ಫೆ.14ರಂದು ಚಿತ್ರಮಂದಿರಗಳಲ್ಲಿ ಬಿಡುಗಡೆಗೊಂಡಿತ್ತು. ಎ.ಆರ್. ರೆಹಮಾನ್ ಅವರು ಚಿತ್ರಕ್ಕೆ ಸಂಗೀತ ನೀಡಿದ್ದಾರೆ.

ಛತ್ರಪತಿ ಶಿವಾಜಿ ಮಹಾರಾಜನ ಮಗ ಛತ್ರಪತಿ ಸಂಭಾಜಿ ಮಹಾರಾಜನ ಪಾತ್ರದಲ್ಲಿ ವಿಕ್ಕಿ ಕೌಶಲ್‌ ಕಾಣಿಸಿಕೊಂಡಿದ್ದಾರೆ. ‌ಮರಾಠಿ ಕಾದಂಬರಿಕಾರ ಶಿವಾಜಿ ಸಾವಂತ್ ಬರೆದಿರುವ ‘ಛಾವಾ’ ಕೃತಿಯನ್ನು ಆಧರಿಸಿ ಮರಾಠಾ ದೊರೆ ಛತ್ರಪತಿ ಸಂಭಾಜಿ ಮಹಾರಾಜರ ಜೀವನ ಕುರಿತ ಚಿತ್ರ ಇದಾಗಿದೆ.

ಗೋವಾ ಮತ್ತು ಮಧ್ಯಪ್ರದೇಶದಲ್ಲಿ ಛಾವಾ ಸಿನಿಮಾ ವೀಕ್ಷಣೆ ತೆರಿಗೆ ಮುಕ್ತ ಎಂದು ಅಲ್ಲಿನ ಸರ್ಕಾರಗಳು ಘೋಷಿಸಿವೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.