ADVERTISEMENT

ರಶ್ಮಿಕಾ ಮಂದಣ್ಣ ಜತೆಗಿನ ಮದುವೆ ವಿಚಾರ: ನಟ ವಿಜಯ್ ದೇವರಕೊಂಡ ಹೇಳಿದ್ದೇನು?

​ಪ್ರಜಾವಾಣಿ ವಾರ್ತೆ
Published 22 ಫೆಬ್ರುವರಿ 2022, 6:36 IST
Last Updated 22 ಫೆಬ್ರುವರಿ 2022, 6:36 IST
ರಶ್ಮೀಕಾ, ವಿಜಯ್‌
ರಶ್ಮೀಕಾ, ವಿಜಯ್‌   

ಟಾಲಿವುಡ್‌ನಲ್ಲಿ ದೊಡ್ಡ ಹೆಸರು ಮಾಡಿರುವ ನಟ ವಿಜಯ್ ದೇವರಕೊಂಡ ಹಾಗೂ ಕೊಡಗಿನ ಕುವರಿ ರಶ್ಮಿಕಾ ಮಂದಣ್ಣ ನಡುವಿನ ’ಮದುವೆ’ಯ ಗಾಳಿ ಸುದ್ದಿ ಬಗ್ಗೆ ವಿಜಯ್‌ ದೇವರಕೊಂಡ ಕೊನೆಗೂ ಮೌನ ಮುರಿದಿದ್ದಾರೆ.

ದಕ್ಷಿಣ ಭಾರತದ ಸಿನಿಮಾರಂಗದಲ್ಲಿ ಕಳೆದೊಂದು ವಾರದಲ್ಲಿ ರಶ್ಮಿಕಾ ಹಾಗೂ ವಿಜಯ್ ದೇವರಕೊಂಡ ಅವರ ಮದುವೆ ಸುದ್ದಿ ವ್ಯಾಪಕವಾಗಿ ಹರಡಿತ್ತು. ಸಿನಿಮಾ ಪತ್ರಿಕೆಗಳು, ಸಾಮಾಜಿಕ ಮಾಧ್ಯಮಗಳು ಹಾಗೂ ಟಿ.ವಿಗಳಲ್ಲೂ ಮದುವೆ ವಿಚಾರದ ಸುದ್ದಿಗಳು ಪ್ರಸಾರವಾಗಿದ್ದವು.

ಅಂತಿಮವಾಗಿ ಈ ಬಗ್ಗೆ ವಿಜಯ್‌ ದೇವರಕೊಂಡ ಪ್ರತಿಕ್ರಿಯೆ ನೀಡಿದ್ದಾರೆ. ‘ಅಂತಹ ವರದಿಗಳು ಅಸಂಬದ್ಧ’ ಎಂದು ಟ್ವೀಟ್‌ ಮಾಡುವ ಮೂಲಕ ಮದುವೆಯ ಕುರಿತ ವದಂತಿಗಳನ್ನು ತಳ್ಳಿ ಹಾಕಿದ್ದಾರೆ. ಇನ್ನು ಈ ಬಗ್ಗೆ ರಶ್ಮಿಕಾ ಯಾವುದೇ ಪ್ರತಿಕ್ರಿಯೆ ನೀಡಿಲ್ಲ.

ADVERTISEMENT

ಮದುವೆಯ ಗಾಳಿ ಸುದ್ದಿಗಳು ಹರಡಲು ಕಾರಣಗಳು....

*ವಿಜಯ್‌ ದೇವರಕೊಂಡ ಹಾಗೂ ರಶ್ಮಿಕಾ ಅವರು ’ಗೀತಗೋವಿಂದಂ’ ಸಿನಿಮಾದ ಬಳಿಕಜೊತೆಯಾಗಿ ಪದೇ ಪದೇ ಕಾಣಿಸಿಕೊಳ್ಳುವುದು.

* ಇಬ್ಬರ ಬೇರೆ ಬೇರೆ ಸಿನಿಮಾಗಳ ಪ್ರಚಾರ ಕಾರ್ಯದ ಸಮಾರಂಭಗಳಲ್ಲಿ ಭಾಗಿಯಾಗುತ್ತಿರುವುದು.

*ಗೋವಾದಲ್ಲಿ ಜೊತೆಯಾಗಿ ಹೊಸ ವರ್ಷ ಆಚರಣೆ ಮಾಡಿದ್ದು

* ಇಬ್ಬರ ಕುಟುಂಬದ ಸದಸ್ಯರು ಒಟ್ಟಾಗಿ ಪ್ರವಾಸ ಮಾಡಿರುವುದು

* ವಿಜಯ್‌ ದೇವರಕೊಂಡ ಮನೆಯಲ್ಲಿ ರಶ್ಮಿಕಾ ಸಂಕ್ರಾಂತಿ ಹಬ್ಬ ಆಚರಣೆ ಮಾಡಿದ್ದು.

ಈ ಘಟನೆಗಳನ್ನು ಇಟ್ಟುಕೊಂಡು ಅಭಿಮಾನಿಗಳು ವಿಜಯ್‌ ಮತ್ತು ರಶ್ಮಿಕಾಲವ್‌ ಮಾಡುತ್ತಿದ್ದು ಇವರುಡಿಸೆಂಬರ್‌ ಅಂತ್ಯದ ಒಳಗೆ ಮದುವೆಯಾಗುತ್ತಾರೆ ಎಂದು ಸಾಮಾಜಿಕ ಜಾಲತಾಣಗಳಲ್ಲಿಪೋಸ್ಟ್‌ಗಳನ್ನು ಹಾಕುತ್ತಿದ್ದಾರೆ.

ಮದುವೆಯ ವಿಚಾರವನ್ನು ತಳ್ಳಿಹಾಕಿರುವ ವಿಜಯ್‌ ದೇವರಕೊಂಡ ಗಾಸಿಪ್‌ಗಳಿಗೆ ಬ್ರೇಕ್ ಹಾಕಿದ್ದಾರೆ.

‘ಡಿಯರ್ ಕಾಮ್ರೇಡ್’, ‘ಗೀತ ಗೋವಿಂದಂ’ ಚಿತ್ರಗಳಲ್ಲಿ ಈ ಜೋಡಿ ಜತೆಯಾಗಿ ಬಣ್ಣಹಚ್ಚಿದ್ದರು. ಸದ್ಯ ವಿಜಯ್‌ ಲೈಗರ್‌ ಸಿನಿಮಾದಲ್ಲಿ ಸಕ್ರಿಯರಾಗಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.