ನಟ ವಿಜಯ್ ದೇವರಕೊಂಡ ಮತ್ತು ನಟಿ ಕೀರ್ತಿ ಸುರೇಶ್
ಚಿತ್ರ: @SVC_official ಟ್ವೀಟರ್
ನಟ ವಿಜಯ್ ದೇವರಕೊಂಡ ಹಾಗೂ ನಟಿ ಕೀರ್ತಿ ಸುರೇಶ್ ನಟನೆಯ ಹೊಸ ಸಿನಿಮಾದ ಮುಹೂರ್ತ ನೆರವೇರಿದೆ.
ಮಹಾನಟಿ ಸಿನಿಮಾದ ಬಳಿಕ ಎರಡನೇ ಬಾರಿಗೆ ನಟಿ ಕೀರ್ತಿ ಸುರೇಶ್‌ಗೆ ನಟ ವಿಜಯ್ ದೇವರಕೊಂಡ ಜೋಡಿಯಾಗಿದ್ದಾರೆ.
ರವಿಕಿರಣ್ ಕೋಲಾ ಅವರು ಈ ಸಿನಿಮಾದ ನಿರ್ದೇಶಕರಾಗಿದ್ದು, ಶ್ರೀ ವೆಂಕಟೇಶ್ವರ ಕ್ರಿಯೇಷನ್ಸ್ ನಿರ್ಮಾಣದಲ್ಲಿ ಸಿನಿಮಾ ಮೂಡಿ ಬರುತ್ತಿದೆ. ಜೊತೆಗೆ ಮೇ ತಿಂಗಳಿನಲ್ಲಿ ಚಿತ್ರೀಕರಣ ಆರಂಭಿಸಲು ಸಿದ್ಧತೆ ನಡೆಸಲಾಗಿದೆ.
ಸದ್ಯ, ಇನ್ನು ಹೆಸರಿಡದ ಚಿತ್ರದ ಮುಹೂರ್ತ ನೆರವೇರಿದ್ದು, ಮುಹೂರ್ತದ ಫೋಟೊಗಳನ್ನು ಶ್ರೀ ವೆಂಕಟೇಶ್ವರ ಕ್ರಿಯೇಷನ್ಸ್ ತಮ್ಮ ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಂಡಿದೆ. ಈ ಸಿನಿಮಾಗೆ ಅಧಿಕೃತವಾಗಿ ಯಾವುದೇ ಶೀರ್ಷಿಕೆ ನೀಡಿಲ್ಲ.
ಶ್ರೀ ವೆಂಕಟೇಶ್ವರ ಕ್ರಿಯೇಷನ್ಸ್ ಹಂಚಿಕೊಂಡ ಪೋಸ್ಟ್‌ನಲ್ಲಿ ‘ಒಂದು ಕಾಡು ಆರಂಭ.. ಪ್ರೀತಿ - ಕ್ರೋಧ - ರಕ್ತ ಎಂದು ಬರೆಯಲಾಗಿದೆ.
ಸದ್ಯ ತಾತ್ಕಾಲಿಕವಾಗಿ ಈ ಸಿನಿಮಾಗೆ SVC59 ಎಂದು ಹೆಸರಿಡಲಾಗಿದೆ. ಚಿತ್ರದ ಮುಹೂರ್ತದ ವೇಳೆ ಹನು ರಾಘವಪುಡಿ, ದಿಲ್ ರಾಜು ಮತ್ತು ಅಲ್ಲು ಅರವಿಂದ್ ಉಪಸ್ಥಿತರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.