
ನಟ ವಿಜಯ್ ದೇವರಕೊಂಡ
ಚಿತ್ರ: ಇನ್‌ಸ್ಟಾಗ್ರಾಂ
ತೆಲುಗು ನಟ ವಿಜಯ್ ದೇವರಕೊಂಡ ನಟನೆಯ ‘ರೌಡಿ ಜನಾರ್ದನ’ ಸಿನಿಮಾದ ಟೈಟಲ್ ಗ್ಲಿಂಪ್ಸ್ ಬಿಡುಗಡೆಯಾಗಿದೆ. ಅದರಲ್ಲಿ ನಟ ವಿಜಯ್ ದೇವರಕೊಂಡ ರಕ್ತಸಿಕ್ತ ಅವತಾರದಲ್ಲಿ ಕಾಣಿಸಿಕೊಂಡು ಎಲ್ಲರ ಗಮನ ಸೆಳೆಯುತ್ತಿದ್ದಾರೆ.
‘ರೌಡಿ ಜನಾರ್ದನ’ ಪೋಸ್ಟರ್ ಅನ್ನು ನಟ ವಿಜಯ್ ದೇವರಕೊಂಡ ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಂಡಿದ್ದಾರೆ. ರೌಡಿ ಜನಾರ್ದನ ಟೈಟಲ್ ಗ್ಲಿಂಪ್ಸ್‌ನಲ್ಲಿ ವಿಜಯ್ ದೇವರಕೊಂಡ ರೌದ್ರಾವತಾರ ತಾಳಿದ್ದಾರೆ.
ಇದೇ ಸಿನಿಮಾಗಾಗಿ ನಟ ದೇಹವನ್ನು ದಂಡಿಸಿದ್ದಾರೆ. ಜಿಮ್ ಬಾಡಿ, ನಿಜಕ್ಕೂ ರೌಡಿ ರೀತಿಯಲ್ಲಿ ಕಾಣಿಸಿಕೊಂಡಿದ್ದಾರೆ. ಕೈಯಲ್ಲಿ ಮಚ್ಚನ್ನು ಹಿಡಿದುಕೊಂಡು ರಕ್ತಸಿಕ್ತ ಲುಕ್‌ನಲ್ಲಿ ನೋಡುಗರನ್ನು ಅಚ್ಚರಿಕೊಳಿಸಿದ್ದಾರೆ. ಇನ್ನು, ಹೈದ್ರಾಬಾದ್‌ನಲ್ಲಿ ಈ ಚಿತ್ರದ ಟೈಟಲ್ ಗ್ಲಿಂಪ್ಸ್ ಅನ್ನು ರಿಲೀಸ್ ಮಾಡಲಾಗಿದೆ. ರೌಡಿ ಜನಾರ್ದನ ಸಿನಿಮಾವನ್ನು ರವಿ ಕಿರಣ್ ಕೋಲಾ ನಿರ್ದೇಶನ ಮಾಡಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.