ವಿಜಯ್ ಮತ್ತು ವಿಜಯ್ ಸೇತುಪತಿ ನಟನೆಯ ಮಾಸ್ಟರ್ ಚಿತ್ರದ ವಿಶ್ವದಾದ್ಯಂತ ಪ್ರದರ್ಶನದ ಗಳಿಕೆ ₹ 200 ಕೋಟಿ ತಲುಪಿದೆ. ಚಿತ್ರ ಮಂದಿರಗಳಲ್ಲಿ ಶೇ 50ರಷ್ಟುಆಸನ ಭರ್ತಿಗೆ ಅವಕಾಶ ಇದ್ದರೂ ಈ ಚಿತ್ರ ಉತ್ತಮ ಗಳಿಕೆ ಮಾಡಿರುವುದು ಸ್ವತಃ ಚಿತ್ರ ತಂಡಕ್ಕೇ ಬೆರುಗು ಮೂಡಿಸಿದೆ. ಈ ರೀತಿಯ ಸ್ಪಂದನ ನಿರೀಕ್ಷಿಸಿರಲಿಲ್ಲವಂತೆ. ಅಂದಹಾಗೆ ಈ ಚಿತ್ರ ತಮಿಳುನಾಡೊಂದರಲ್ಲೇ ₹ 100 ಕೋಟಿ ಗಳಿಸಿದೆ.
ಲೋಕೇಶ್ ಕನಕರಾಜ್ ಈ ಚಿತ್ರವನ್ನು ನಿರ್ದೇಶಿಸಿದ್ದಾರೆ. ರಜನಿಕಾಂತ್, ತಳಾ ಅಜಿತ್ ಅವರ ಚಿತ್ರಗಳ ದಾಖಲೆಯನ್ನು ಸರಿಗಟ್ಟುತ್ತದೆ ಎಂದು ಕಾಲಿವುಡ್ನಲ್ಲಿ ಚರ್ಚೆಗಳು ಶುರುವಾಗಿವೆ.
ದಳಪತಿ ವಿಜಯ್ ಅವರ ಬಿಗಿಲ್, ಮೆರ್ಸಲ್, ಮತ್ತು ಸರ್ಕಾರ್ ಚಿತ್ರಗಳೂ ಕೂಡಾ ಭರ್ಜರಿ ಯಶಸ್ಸು ದಾಖಲಿಸಿದ್ದವು. ಆಂಧ್ರಪ್ರದೇಶ ಮತ್ತು ತೆಲಂಗಾಣದಲ್ಲಿಮಾಸ್ಟರ್ ಚಿತ್ರ₹13 ಕೋಟಿ ಗಳಿಸಿ ಬ್ಲಾಕ್ಬಸ್ಟರ್ ಎನಿಸಿಕೊಂಡಿದೆ.
ಇದನ್ನೂ ಓದಿ:ಜೊತೆಯಾಗಿ ಸಿನಿಮಾ ಮಾಡಲಿದ್ದಾರಾ ಶಂಕರ್ ಹಾಗೂ ಯಶ್?
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.