ADVERTISEMENT

VIDEO: ಮಗ ವಿನೀಶ್ ಜೊತೆ ‘ದಿ ಡೆವಿಲ್’ ಸಿನಿಮಾ ವೀಕ್ಷಿಸಿದ ವಿಜಯಲಕ್ಷ್ಮಿ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 11 ಡಿಸೆಂಬರ್ 2025, 5:23 IST
Last Updated 11 ಡಿಸೆಂಬರ್ 2025, 5:23 IST
<div class="paragraphs"><p>ವಿನೀಶ್, ರಚನಾ ರೈ, ವಿಜಯಲಕ್ಷ್ಮಿ, ಧನ್ವೀರ್</p></div>

ವಿನೀಶ್, ರಚನಾ ರೈ, ವಿಜಯಲಕ್ಷ್ಮಿ, ಧನ್ವೀರ್

   

ಬೆಂಗಳೂರು: ನಟ ದರ್ಶನ್‌ ತೂಗುದೀಪ ಅಭಿನಯದ ಬಹುನಿರೀಕ್ಷಿತ ಸಿನಿಮಾ ‘ದಿ ಡೆವಿಲ್’ ಇಂದು (ಗುರುವಾರ) ರಾಜ್ಯದಾದ್ಯಂತ ಬಿಡುಗಡೆಯಾಗಿದೆ. ಮುಂಜಾನೆ 6.30ರಿಂದಲೇ ಡೆವಿಲ್‌ ಸಿನಿಮಾ ಮೊದಲ ಶೋಗಳು ಪ್ರಾರಂಭವಾಗಿದ್ದು, ಚಿತ್ರಮಂದಿರಗಳು ಅಭಿಮಾನಿಗಳಿಂದ ಕಿಕ್ಕಿರಿದು ತುಂಬಿವೆ.

ಡೆವಿಲ್‌ ಸಿನಿಮಾ ನೋಡಲು ನರ್ತಕಿ ಚಿತ್ರಮಂದಿರಕ್ಕೆ ದರ್ಶನ್‌ ಪತ್ನಿ ವಿಜಯಲಕ್ಷ್ಮಿ, ಪುತ್ರ ವಿನೀಶ್, ದರ್ಶನ್ ಆಪ್ತ ಧನ್ವೀರ್, ನಟಿ ರಚನಾ ರೈ ಸೇರಿದಂತೆ ಹಲವರು ಬಂದಿದ್ದರು. ಅಭಿಮಾನಿಗಳ ಜೊತೆಗೆ ಕುಳಿತು ಸಿನಿಮಾ ವೀಕ್ಷಿಸಿ ಖುಷಿಪಟ್ಟಿದ್ದಾರೆ. ಸಿನಿಮಾ ವೀಕ್ಷಿಸಿ ಹೊರಬಂದ ಅಭಿಮಾನಿಗಳು ಉತ್ತಮ ಪ್ರತಿಕ್ರಿಯೆ ವ್ಯಕ್ತಪಡಿಸುತ್ತಿದ್ದಾರೆ.

ADVERTISEMENT

ಇನ್ನು, ಪತ್ನಿ ವಿಜಯಲಕ್ಷ್ಮಿ ದರ್ಶನ್‌ ಚಿತ್ರಮಂದಿರಕ್ಕೆ ಬಂದಿದ್ದ ಅಭಿಮಾನಿಗಳಿಗೆ ಕೈ ಮುಗಿದು ಧನ್ಯವಾದ ತಿಳಿಸಿದ್ದಾರೆ. ದರ್ಶನ್‌ ಪತ್ನಿ ವಿಜಯಲಕ್ಷ್ಮಿ, ಪುತ್ರ ವಿನೀಶ್, ದರ್ಶನ್ ಆಪ್ತ ಧನ್ವೀರ್, ನಟಿ ರಚನಾ ರೈ ಚಿತ್ರಮಂದಿರಕ್ಕೆ ಬಂದಿರುವ ವಿಡಿಯೊಗಳು ಸಾಮಾಜಿಕ ಮಾಧ್ಯಮದಲ್ಲಿ ಹರಿದಾಡುತ್ತಿವೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.