ಪಾಕ್ ನಟಿ ಸಬಾ ಖಮರ್ ವಿರುದ್ಧ ಪಾಕಿಸ್ತಾನದ ಸ್ಥಳೀಯ ನ್ಯಾಯಾಲಯ ಬಂಧನವಾರಂಟ್ ಹೊರಡಿಸಿದೆ.
ಲಾಹೋರ್‌ನ ಐತಿಹಾಸಿಕ ಮಸೀದಿಯ ಮುಂದೆ ವಿಡಿಯೊ ಸಾಂಗ್ ಚಿತ್ರೀಕರಣ ಮಾಡಿರುವುದಕ್ಕೆ ನಟಿ ಹಾಗೂ ವಿಡಿಯೊ ಸಾಂಗ್ ನಿರ್ಮಾಣ ಮಾಡಿದ್ದ ಬಿಬಲ್ ವಿರುದ್ಧ ಬಂಧನವಾರಂಟ್ ಹೊರಡಿಸಲಾಗಿದೆ.
ನ್ಯಾಯಾಲಯ ಹಲವು ದಿನಗಳ ಹಿಂದೆ ವಿಚಾರಣೆಗೆ ಹಾಜರಾಗುವಂತೆ ನೋಟಿಸ್ ನೀಡಿದ್ದರೂ ಸಭಾ ಮತ್ತು ಬಿಬಲ್ ಹಾಜರಾಗಿರಲಿಲ್ಲ ಈ ಹಿನ್ನೆಲೆಯಲ್ಲಿ ಅವರಿಗೆ ಬಂಧನವಾರಂಟ್ ಹೊರಡಿಸಲಾಗಿದೆ ಎಂದು ಸ್ಥಳೀಯ ಮಾಧ್ಯಮಗಳು ವರದಿ ಮಾಡಿವೆ.
ವಿಡಿಯೊ ಸಾಂಗ್ ವಿವಾದ ಕುರಿತಂತೆ ಸಭಾ ಮತ್ತು ಬಿಬಲ್ ಈ ಹಿಂದೆ ಸಾಮಾಜಿಕ ಜಾಲತಾಣಗಳ ಮೂಲಕ ಕ್ಷಮೆ ಕೋರಿದ್ದರು.
ಸಬಾ ಖಮರ್ ಬಾಲಿವುಡ್‌ನಲ್ಲಿ ’ಹಿಂದಿ ಮೀಡಿಯಂ’ ಸಿನಿಮಾದಲ್ಲಿ ನಟಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.