ನೀಲಿಚಿತ್ರಗಳ ತಾರೆ ‘ಕೆಂಡ್ರಾ ಲಸ್ಟ್’ ಅವರ ಜೊತೆ ಅರ್ಚಿತಾ ಫುಕಾನ್ ಎನ್ನಲಾದ ಯವತಿ
ಬೆಂಗಳೂರು: ಅಸ್ಸಾಂ ಮೂಲದ ಸೋಶಿಯಲ್ ಮೀಡಿಯಾ ಇನ್‌ಫ್ಲುಯೆನ್ಸರ್ ಹಾಗೂ ಇನ್‌ಸ್ಟಾಗ್ರಾಂನಲ್ಲಿ ‘ಬೇಬಿ ಡಾಲ್ ಅರ್ಚಿ’ ಎಂದು ಗುರುತಿಸಿಕೊಂಡಿರುವ ಅರ್ಚಿತಾ ಫುಕಾನ್ ಎಂಬ ಯುವತಿ ಅಮೆರಿಕದಲ್ಲಿ ನೀಲಿಚಿತ್ರಗಳ ಉದ್ಯಮಕ್ಕೆ (ಪೋರ್ನ್ ಇಂಡಸ್ಟ್ರಿ) ಇಳಿದಿದ್ದಾರೆ ಎಂದು ಕೆಲ ವರದಿಗಳು ಹೇಳಿವೆ.
ಸದ್ಯ ಇಂಟರ್‌ನೆಟ್‌ನಲ್ಲಿ ಬೇಬಿ ಡಾಲ್ ಅರ್ಚಿ ಹಾಗೂ ಅರ್ಚಿತಾ ಫುಕಾನ್ ಎಂಬ ಹೆಸರು ಹೆಚ್ಚು ಚರ್ಚಿತವಾಗಿದ್ದು, ಅವರ ಹೆಸರು ಇತ್ತೀಚೆಗೆ ಸರ್ಚ್ ಎಂಜಿನ್‌ಗಳಲ್ಲೂ ಹೆಚ್ಚು ಹುಡುಕಾಟವಾಗುತ್ತಿದೆ ಎನ್ನಲಾಗಿದೆ.
ಇದಕ್ಕೆ ಕಾರಣ ‘ಬೇಬಿ ಡಾಲ್ ಅರ್ಚಿ’ ಎಂಬ ಇನ್‌ಸ್ಟಾಗ್ರಾಂ ಖಾತೆಯನ್ನು ಹೊಂದಿರುವ 30 ವರ್ಷದ ಅರ್ಚಿತಾ ಫುಕಾನ್, ಅಮೆರಿಕದ ಖ್ಯಾತ ನೀಲಿಚಿತ್ರಗಳ ತಾರೆ ‘ಕೆಂಡ್ರಾ ಲಸ್ಟ್’ (Kendra Lust) ಅವರ ಜೊತೆ ಇರುವ ಫೋಟೊವನ್ನು ಹಂಚಿಕೊಂಡಿದ್ದಾರೆ.
ಈ ಫೋಟೊ ಇಂಟರ್‌ನೆಟ್‌ನಲ್ಲಿ ಸಾಕಷ್ಟು ಹರಿದಾಡುತ್ತಿದ್ದು, ‘ಅಸ್ಸಾಂ ಮೂಲದ ಚೆಲುವೆ ಪೋರ್ನ್ ಇಂಡಸ್ಟ್ರಿಗೆ ಎಂಟ್ರಿ’ ಎಂದು ಹೇಳಲಾಗುತ್ತಿದೆ.
‘ಮೊದಲ ಬಾರಿಗೆ ಕೆಂಡ್ರಾಳನ್ನು ಭೇಟಿಯಾದದ್ದು ನಿಜಕ್ಕೂ ಮರೆಯಲಾಗದ ಅನುಭವ. ಅವರ ಆತ್ಮವಿಶ್ವಾಸ, ವೃತ್ತಿಪರತೆ ಮತ್ತು ಯಶಸ್ಸಿನಿಂದ ನಾನು ಪ್ರೇರಿತಳಾದೆ. ಅವರು ಒಬ್ಬ ಪ್ರೋತ್ಸಾಹದಾಯಕರು ಮತ್ತು ಉತ್ತಮ ಜೀವನದತ್ತ ಹೋಗುವ ಅಮೂಲ್ಯವಾದ ಒಳನೋಟಗಳನ್ನು ಹಂಚಿಕೊಂಡರು. ಅಂತಹ ತಾರೆಯ ಸಂಪರ್ಕ ಸಾಧಿಸಲು ಮತ್ತು ಕಲಿಯಲು ಅವಕಾಶ ನೀಡಿದ್ದಕ್ಕಾಗಿ ನಾನು ಕೃತಜ್ಞಳಾಗಿದ್ದೇನೆ‘ ಎಂದು ಅರ್ಚಿತಾ ಫುಕಾನ್ ಅವರು ತಮ್ಮ ವೆರಿಫೈಡ್ ಖಾತೆಯಲ್ಲಿ ಬರೆದುಕೊಂಡಿದ್ದಾರೆ.
ಇನ್ನೊಂದು ಪೋಸ್ಟ್‌ನಲ್ಲಿ, ‘ನಾನು ಪ್ಲೆಬಾಯ್ ಮ್ಯಾಗ್‌ಜಿನ್, ವೆಬ್‌ಸೈಟ್‌ಗೆ (ವಯಸ್ಕರರಿಗೆ ಮೀಸಲಿರುವ) ಒಳಉಡುಪುಗಳ ಮಾಡೆಲ್ ಆಗಿ ಆಯ್ಕೆಯಾಗಿದ್ದೇನೆ’ ಎಂದು ಬರೆದುಕೊಂಡಿದ್ದಾರೆ.
ಇನ್‌ಸ್ಟಾಗ್ರಾಂ ಹಾಗೂ ಎಕ್ಸ್ ಖಾತೆಯಲ್ಲಿ ತಮ್ಮ ಬೋಲ್ಡ್ ಚಿತ್ರಗಳನ್ನು, ವಿಡಿಯೊಗಳನ್ನು ಹಂಚಿಕೊಂಡಿರುವ ಅರ್ಚಿತಾ ಐಪಿಎಲ್‌ನ ಆರ್‌ಸಿಬಿ ಜರ್ಸಿಯಲ್ಲಿ ಇರುವ ಫೋಟೊಗಳನ್ನೂ ಹಂಚಿಕೊಂಡಿದ್ದಾರೆ. ತಾನೊಬ್ಬ ಆರ್‌ಸಿಬಿ ಅಭಿಮಾನಿ ಎಂದು ಹೇಳಿಕೊಂಡಿದ್ದಾರೆ.
ಇನ್‌ಸ್ಟಾದಲ್ಲಿ 7.11 ಲಕ್ಷ ಫಾಲೋವರ್‌ಗಳನ್ನು ಹೊಂದಿರುವ ಅರ್ಚಿತಾ ಫುಕಾನ್ ಅಮೆರಿಕದ ಮಿಚಿಗನ್‌ನಲ್ಲಿ ನೆಲೆಸಿದ್ದಾರೆ. ತಾನು ಅಸ್ಸಾಂ ಮೂಲದವಳು, ಆಮೇಲೆ ದೆಹಲಿಗೆ ಬಂದಿದ್ದೆ. ಸದ್ಯ ಅಮೆರಿಕದಲ್ಲಿ ನೆಲೆಸಿದ್ದೆನೆ ಎಂದು ಹೇಳಿಕೊಂಡಿದ್ದಾರೆ.
ಕೇಂದ್ರಾ ಲಸ್ಟ್ ಜೊತೆ ಅರ್ಚಿತಾ ಹಂಚಿಕೊಂಡಿರುವ ಪೋಸ್ಟ್ ಸತ್ಯಾಸತ್ಯತೆಯ ಬಗ್ಗೆಯೂ ಚರ್ಚೆಯಾಗುತ್ತಿದೆ. ಇದು ಎ.ಐ ಜನರೇಟೆಡ್ ಆಗಿರಲೂಬಹುದು ಎನ್ನಲಾಗಿದೆ. ಅರ್ಚಿತಾ ಫುಕಾನ್ ಎಂಬ ವ್ಯಕ್ತಿ ಇರುವುದು ನಿಜ. ಆದರೆ, ಕೆಲ ಇಮೇಜ್‌ಗಳು ಎಐ ಜನರೇಟೆಡ್ ಎಂದು ಎಕ್ಸ್‌ನ Grok ಹೇಳಿದೆ. ಈ ಕುರಿತು ಲೇಟಸ್ಟ್‌ಲಿ ವೆಬ್‌ಸೈಟ್ ವರದಿ ಮಾಡಿದೆ.
ಪೋರ್ನ್ ಇಂಡಸ್ಟ್ರಿ ಎಂಬುದು ಅಮೆರಿಕ, ಕೆನಡಾದಲ್ಲಿ ದೊಡ್ಡ ಉದ್ಯಮವಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.