ತಮ್ಮ ನಟನೆಯ 19ನೇ ಸಿನಿಮಾ ‘ಟಾಕ್ಸಿಕ್’ ಚಿತ್ರೀಕರಣದ ಜೊತೆಜೊತೆಯೇ ಯಶ್ ‘ರಾಮಾಯಣ’ಕ್ಕೂ ಇತ್ತೀಚೆಗೆ ಹೆಜ್ಜೆ ಇಟ್ಟಿದ್ದರು. ಈ ಸಿನಿಮಾ ಸೆಟ್‌ನೊಳಗಿಂದ ಮೊದಲ ಸುದ್ದಿ ಹೊರಬಿದ್ದಿದೆ. ಹಾಲಿವುಡ್‌ನ ಖ್ಯಾತ ಸಾಹಸ ನಿರ್ದೇಶಕ ಗೈ ನೋರಿಸ್ ಇದೀಗ ‘ರಾಮಾಯಣ’ ಚಿತ್ರತಂಡ ಸೇರಿಕೊಂಡಿದ್ದಾರೆ.
ಯಶ್ ಜೊತೆಗೂಡಿ ಗೈ ನೋರಿಸ್ ಸಾಹಸ ದೃಶ್ಯಗಳನ್ನು ಪರಿಕಲ್ಪನೆ ಮಾಡುತ್ತಿರುವ ಫೋಟೊವನ್ನು ಚಿತ್ರತಂಡ ಹಂಚಿಕೊಂಡಿದೆ. ‘ಟಾಕ್ಸಿಕ್’ ಚಿತ್ರದಲ್ಲಿ ಹಾಲಿವುಡ್ ಸಾಹಸ ನಿರ್ದೇಶಕ ಜೆ.ಜೆ.ಪೆರ್‍ರಿ ಜೊತೆಗೂಡಿ ಕೆಲಸ ಮಾಡಿರುವ ಯಶ್ ಇದೀಗ ಮತ್ತೋರ್ವ ಹಾಲಿವುಡ್ ಸಾಹಸ ನಿರ್ದೇಶಕರೊಬ್ಬರ ಜೊತೆಗೂಡಿದ್ದಾರೆ. ನಿತೇಶ್ ತಿವಾರಿ ನಿರ್ದೇಶನದಲ್ಲಿ ‘ರಾಮಾಯಣ’ ಸಿನಿಮಾ ಮೂಡಿಬರಲಿದ್ದು, ನಮಿತ್ ಮಲ್ಹೋತ್ರಾ ಅವರ ಪ್ರೈಂ ಫೋಕಸ್ ಸ್ಟುಡಿಯೊಸ್ ಬ್ಯಾನರ್‌ನಡಿ ಈ ಸಿನಿಮಾ ನಿರ್ಮಾಣವಾಗಲಿದೆ. ಯಶ್ ತಮ್ಮ ಮಾನ್‌ಸ್ಟರ್‌ಮೈಂಡ್ ಪ್ರೊಡಕ್ಷನ್ಸ್‌ನಡಿ ಸಹ ನಿರ್ಮಾಪಕರಾಗಿದ್ದಾರೆ. ಬಾಲಿವುಡ್ ನಟ ರಣಬೀರ್ ಕಪೂರ್ ‘ರಾಮ’ನ ಪಾತ್ರದಲ್ಲಿ ನಟಿಸಲಿದ್ದಾರೆ. ನಟಿ ಸಾಯಿ ಪಲ್ಲವಿ ‘ಸೀತೆ’ಯಾಗಿ ಹಾಗೂ ನಟ ಯಶ್ ರಾವಣನ ಪಾತ್ರಧಾರಿಯಾಗಿ ನಟಿಸಲಿದ್ದಾರೆ
‘ರಾಮಾಯಣ’ ಸಿನಿಮಾಗಾಗಿ ಬೃಹತ್ ಸೆಟ್‌ಗಳನ್ನು ಹಾಕಲಾಗಿದ್ದು ಬಿಗ್‌ಬಜೆಟ್‌ನಲ್ಲಿ ಸಿನಿಮಾ ನಿರ್ಮಾಣವಾಗುತ್ತಿದೆ. ಹಾಲಿವುಡ್‌ನ ‘ಮ್ಯಾಡ್ ಮ್ಯಾಕ್ಸ್’, ‘ದಿ ಸುಸೈಡ್ ಸ್ಕ್ವಾಡ್’ ಸಿನಿಮಾಗಳಿಗೆ ಸ್ಟಂಟ್ ಡೈರೆಕ್ಷನ್ ಮಾಡಿರುವ ಗೈ ನೋರಿಸ್ ಇದೀಗ ‘ರಾಮಾಯಣ’ದ ಸಾಹಸ ದೃಶ್ಯಗಳಿಗೆ ಜೀವ ತುಂಬಲಿದ್ದಾರೆ. ರಾವಣನ ಆ್ಯಕ್ಷನ್ ದೃಶ್ಯಗಳನ್ನು ಅದ್ಧೂರಿಯಾಗಿ ಸೆರೆಹಿಡಿಯುವ ಯೋಜನೆ ಹಾಕಿಕೊಂಡಿದೆ ಚಿತ್ರತಂಡ. ಈಗಾಗಲೇ ಚಿತ್ರದ ಚಿತ್ರೀಕರಣ ಪ್ರಾರಂಭವಾಗಿದ್ದು, ‘ರಾಮಾಯಣ’ ಭಾಗ 1ರಲ್ಲಿ ಸುಮಾರು 60–70 ದಿನಗಳ ಕಾಲ ಚಿತ್ರೀಕರಣದಲ್ಲಿ ತೊಡಗಿಸಿಕೊಳ್ಳಿದ್ದಾರೆ ಯಶ್.
‘ಟಾಕ್ಸಿಕ್’ 2026ರ ಮಾರ್ಚ್ 19ರಂದು ತೆರೆಕಾಣುತ್ತಿದ್ದು, 2026ರ ದೀಪಾವಳಿಗೆ ‘ರಾಮಾಯಣ’ದ ಮೊದಲ ಭಾಗವೂ ತೆರೆಕಾಣಲಿದೆ. 2027ರ ದೀಪಾವಳಿಗೆ ಎರಡನೇ ಭಾಗ ತೆರೆಕಾಣಲಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.