ADVERTISEMENT

2025ರಲ್ಲಿ ಯಶ್ ನಟನೆಯ ಕೆಜಿಎಫ್‌ ಚಾಪ್ಟರ್‌ –3 ತೆರೆಗೆ: ಹೊಂಬಾಳೆ ಫಿಲ್ಮ್ಸ್

ಪಿಟಿಐ
Published 29 ಸೆಪ್ಟೆಂಬರ್ 2023, 10:57 IST
Last Updated 29 ಸೆಪ್ಟೆಂಬರ್ 2023, 10:57 IST
<div class="paragraphs"><p>ಯಶ್‌</p></div>

ಯಶ್‌

   

ಬೆಂಗಳೂರು: ಕನ್ನಡ ಚಿತ್ರರಂಗದಲ್ಲಿ ಹೊಸ ಅಲೆ ಮೂಡಿಸಿದ್ದ ಕೆಜಿಎಫ್‌ ಚಾಪ್ಟರ್‌–1 ಮತ್ತು ಚಾಪ್ಟರ್‌ –2 ಬಳಿಕ ಕೆಜಿಎಫ್‌ ಚಾಪ್ಟರ್‌ –3 ತೆರೆಗೆ ಬರಲು ಸಜ್ಜಾಗುತ್ತಿದೆ ಎಂದು ಹೊಂಬಾಳೆ ಫಿಲ್ಮ್ಸ್ ವಕ್ತಾರರು ಮಾಹಿತಿ ನೀಡಿದ್ದಾರೆ. 

ಕೆಜಿಎಫ್‌ ಚಾಪ್ಟರ್‌ –3ನ ಪ್ರೊಡಕ್ಷನ್‌ ಕೆಲಸಗಳು ಇದೇ ಡಿಸೆಂಬರ್‌ನಲ್ಲಿ ಆರಂಭವಾಗಲಿದ್ದು 2025ರಲ್ಲಿ ಚಿತ್ರ ತೆರೆಕಾಣಲಿದೆ ಎಂದು ತಿಳಿಸಿದ್ದಾರೆ.

ADVERTISEMENT

‘ಡಿ.21ರಂದು ಕೆಜಿಎಫ್‌ ಚಾಪ್ಟರ್‌ –1 ಬಿಡುಗಡೆಯಾಗಿ 5 ವರ್ಷ ಪೂರ್ತಿಯಾಗಲಿದೆ. ಅದೇ ದಿನ ಕಜಿಎಫ್‌ ಚಾಪ್ಟರ್–3 ಬಿಡುಗಡೆ ದಿನಾಂಕ ಘೋಷಿಸಲಾಗುತ್ತಿದೆ. ಕೆಜಿಎಫ್ ಚಾಪ್ಟರ್‌ –3 ಚಿತ್ರದ ನಿರ್ದೇಶಕ, ನಿರ್ಮಾಪಕ ಮತ್ತು ನಟರ ನಡುವೆ ಆರಂಭಿಕ ಸುತ್ತಿನ ಚರ್ಚೆ ನಡೆದಿದೆ ಮತ್ತು ಕಥಾಹಂದರವನ್ನು ಚರ್ಚಿಸಲಾಗಿದೆ. ಚಿತ್ರೀಕರಣವು ಅಕ್ಟೋಬರ್ 2024 ರಲ್ಲಿ ಪ್ರಾರಂಭವಾಗಲಿದೆ. ಚಿತ್ರವು 2025 ರಲ್ಲಿ ಬಿಡುಗಡೆಯಾಗಲಿದೆ. ಕೆಜಿಎಫ್ ಚಾಪ್ಟರ್‌ 3 ಬಿಡುಗಡೆಯ ದಿನಾಂಕದ ಕುರಿತು ಅಧಿಕೃತ ಪ್ರಕಟಣೆಯನ್ನು ಇದೇ ಡಿಸೆಂಬರ್‌ನಲ್ಲಿ ಮಾಡಲಾಗುತ್ತದೆ’ ಎಂದು ಹೊಂಬಾಳೆ ಫಿಲ್ಮ್ಸ್ ವಕ್ತಾರರು ತಿಳಿಸಿದ್ದಾರೆ.

2018 ರ ಕೆಜಿಎಫ್‌ ಅಧ್ಯಾಯ 1ರೊಂದಿಗೆ ಪ್ರಾರಂಭವಾದ ಆಕ್ಷನ್ ಫ್ರ್ಯಾಂಚೈಸ್, ನಂತರ 2022ರಲ್ಲಿ ಮುಂದುವರೆದಿತ್ತು, ಈಗ ಕೆಜಿಎಫ್‌  ಚಾಪ್ಟರ್‌ 3 ಬರುತ್ತಿದೆ. ಇದು ರಾಕಿ (ಯಶ್) ಮತ್ತು ಅವನ ಅಧಿಕಾರ ಮತ್ತು ಸಂಪತ್ತಿನ ಅನ್ವೇಷಣೆಯ ಸುತ್ತ ಹೆಣೆಯಲಾಗಿದೆ ಎಂದು ತಿಳಿಸಿದ್ದಾರೆ.

ಈಗಾಗಲೇ ಹೊಂಬಾಳೆ ಫಿಲ್ಮ್ಸ್‌ನ  3 ಪ್ಯಾನ್‌ ಇಂಡಿಯಾ ಚಿತ್ರಗಳು ಬಿಡುಗಡೆಗೆ ಸಿದ್ದವಾಗಿದೆ. ಅವುಗಳೆಂದರೆ ಪ್ರಭಾಸ್‌ ನಟನೆಯ ‘ಸಲಾರ್‌–2’ ಇದು ಡಿ.22 ರಂದು ಬಿಡುಗಡೆಯಾಗುತ್ತಿದೆ. ರಿಷಬ್‌ ಶೆಟ್ಟಿ ಅವರ ‘ಕಾಂತಾರ –2’ ಹಾಗೂ ಪೃಥ್ವಿರಾಜ ಸುಕುಮಾರನ್‌ ಅವರ ‘ಟೈಸನ್‌’ ಚಿತ್ರಗಳು  ಬಿಡುಗಡೆಯಾಗಬೇಕಿದೆ. ಇವೆರಡು ಚಿತ್ರಗಳ ಬಿಡುಗಡೆ ದಿನಾಂಕ ಇನ್ನಷ್ಟೇ ಘೋಷಣೆಯಾಗಬೇಕಿದೆ. 

ಕೆಜಿಎಫ್‌ ಚಾಪ್ಟರ್‌–3 ಚಿತ್ರದ ಪ್ರೊಡಕ್ಷನ್‌ ಕೆಲಸಗಳು ಇದೇ ಡಿಸೆಂಬರ್‌ನಲ್ಲಿ ಆರಂಭವಾಗಲಿದ್ದು, 2025ರಲ್ಲಿ ಚಿತ್ರ ಬಿಡುಗಡೆಯಾಗಲಿದೆ. ರಾಕಿಂಗ್‌ ಸ್ಟಾರ್‌ ಯಶ್‌ ಅವರೇ ರಾಕಿ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ
–ಚಲುವೇ ಗೌಡ , ಹೊಂಬಾಳೆ ಫಿಲ್ಮ್ಸ್ ವಕ್ತಾರ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.