ADVERTISEMENT

ಪುನೀತ್‌ರ ಸಮಾಧಿಯಿಂದ‌ ಮಣ್ಣು ತಂದು ದೇವರ ಕೋಣೆಯಲ್ಲಿ ಇಟ್ಟಿದ್ದೆ: ನಟ ಯೋಗೇಶ್

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 20 ನವೆಂಬರ್ 2025, 10:26 IST
Last Updated 20 ನವೆಂಬರ್ 2025, 10:26 IST
<div class="paragraphs"><p>ನಟ ಲೂಸ್ ಮಾದ ಯೋಗೇಶ್</p></div>

ನಟ ಲೂಸ್ ಮಾದ ಯೋಗೇಶ್

   

ಚಿತ್ರ:ಇನ್‌ಸ್ಟಾಗ್ರಾಮ್

ನಟ ಯೋಗೇಶ್‌ ಅವರು ಪುನೀತ್‌ ರಾಜ್‌ಕುಮಾರ್‌ ಬಗ್ಗೆ ಕೆಲವೊಂದು ಅಚ್ಚರಿಯ ವಿಚಾರದ ಕುರಿತು ಮನಬಿಚ್ಚಿ ಮಾತನಾಡಿದ್ದಾರೆ. ಅಶ್ವಿನಿ ಪುನೀತ್ ರಾಜ್‌ಕುಮಾರ್ ಒಡೆತನದ ಪಿಆರ್‌ಕೆ ಆ್ಯಪ್‌ ಸಂದರ್ಶನದಲ್ಲಿ ಭಾಗಿಯಾಗಿದ್ದ ನಟ ಯೋಗೇಶ್ ಅವರು, ಪುನೀತ್ ರಾಜ್‌ಕುಮಾರ್ ಅವರ ಸಮಾಧಿಯಿಂದ‌ ಮಣ್ಣು ತಂದು ದೇವರ ಮನೆಯಲ್ಲಿ ಇಟ್ಟುಕೊಂಡಿರುವುದಾಗಿ ಹೇಳಿಕೊಂಡಿದ್ದಾರೆ.

ADVERTISEMENT

ಹೌದು, ನಟ ಯೋಗೇಶ್ ಅವರು ತಾವು ಕಂಡು ಅಪ್ಪು ಅವರ ಬಗ್ಗೆ ಮಾತನಾಡಿದ್ದಾರೆ. ಪಿಆರ್‌ಕೆ ಆ್ಯಪ್‌ ಸಾಮಾಜಿಕ ಮಾಧ್ಯಮ ಇನ್‌ಸ್ಟಾಗ್ರಾಮ್ ಖಾತೆಯಲ್ಲಿ ಪ್ರೊಮೋ ಒಂದನ್ನು ಹಂಚಿಕೊಂಡಿದೆ. ಅದರಲ್ಲಿ ಮಾತನಾಡಿದ ನಟ ಯೋಗೇಶ್, ‘ಆ ದಿನ ನಾನು ಸಲೂನ್‌ಗೆ ಹೋಗಿದ್ದೆ. ಅಂದು ಅಪ್ಪು ಅವರ ನಿಧನ ಸುದ್ದಿ ಕೇಳಿ ಅಲ್ಲೇ ಕುಸಿದು ಬಿದ್ದಿದೆ. ನನ್ನ ಜೀವನದಲ್ಲೇ ಅದೇ ಮೊದಲು ಅಷ್ಟು ಅತ್ತಿದ್ದು. ಆಗ ನನ್ನ ಪತ್ನಿ ಬಂದು ಸಮಾಧಾನ ಮಾಡಿದ್ದರು. ನನ್ನ ಸಮಾಧಾನಕ್ಕಾಗಿ ಅಪ್ಪು ಅವರನ್ನು ಮಣ್ಣು ಮಾಡುವ ಮೊದಲು ಸಮಾಧಿಯಲ್ಲಿದ್ದ ಮಣ್ಣನ್ನು ಎತ್ತಿಕೊಂಡು ದೇವರ ಮನೆಯಲ್ಲಿ ಇಟ್ಟುಕೊಂಡಿದ್ದೇನೆ’ ಎಂದು ಭಾವುಕರಾಗಿದ್ದಾರೆ.

ನಟ ಯೋಗೇಶ್‌ ಅವರು ಪುನೀತ್‌ ರಾಜ್‌ಕುಮಾರ್‌ ಜೊತೆಗೆ ‘ಹುಡುಗರು‘, ‘ಯಾರೇ ಕೂಗಾಡಲಿ’ ಸಿನಿಮಾಗಳಲ್ಲಿ ಒಟ್ಟಿಗೆ ನಟಿಸಿದ್ದರು. ಅಷ್ಟೇ ಅಲ್ಲದೇ ಈ ಇಬ್ಬರು ತುಂಬಾ ಆತ್ಮೀಯರಾಗಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.