ADVERTISEMENT

ಅಯೋಧ್ಯೆಯ ರಾಮ ಮಂದಿರಕ್ಕೆ ಭೇಟಿ ನೀಡಿದ ಜಹೀರ್ ಖಾನ್-ಸಾಗರಿಕಾ ಘಾಟ್ಗೆ ದಂಪತಿ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 2 ಫೆಬ್ರುವರಿ 2026, 11:40 IST
Last Updated 2 ಫೆಬ್ರುವರಿ 2026, 11:40 IST
   

ನವದೆಹಲಿ: ಕ್ರಿಕೆಟಿಗ ಜಹೀರ್ ಖಾನ್ ಹಾಗೂ ಪತ್ನಿ ಸಾಗರಿಕಾ ಘಾಟ್ಗೆ ಅವರು ಅಯೋಧ್ಯೆಯ ರಾಮ ಮಂದಿರಕ್ಕೆ ಭೇಟಿ ನೀಡಿದ್ದಾರೆ.

ಸಾಮಾಜಿಕ ಮಾಧ್ಯಮದಲ್ಲಿ ಹರಿದಾಡುತ್ತಿರುವ ವಿಡಿಯೊದಲ್ಲಿ, ‘ಮಗನ ಜೊತೆ ಜಹೀರ್ ಖಾನ್, ಪತ್ನಿ ಸಾಗರಿಕಾ ಅವರು ರಾಮನ ಆರ್ಶೀವಾದ ಪಡೆದುಕೊಂಡು, ವಿಶೇಷ ಪೂಜೆ ಸಲ್ಲಿಸಿದ್ದಾರೆ. ಮಗನ ಜೊತೆ ಒಂದಿಷ್ಟು ಹೊತ್ತು ಕಾಲ ಕಳೆದಿರುವುದನ್ನು ಕಾಣಬಹುದು.

ಜಹೀರ್ ಖಾನ್ ಅವರು ಸಾಗರಿಕಾ ಘಾಟ್ಗೆ ಅವರು 2017ರ ನವೆಂಬರ್ 23ರಂದು ವಿವಾಹವಾಗಿದ್ದರು.

ADVERTISEMENT

ನಟಿ ಸಾಗರಿಕಾ ಘಾಟ್ಗೆ ಅವರು ಶಾರುಕ್ ಖಾನ್ ನಟನೆಯ ‘ಚಕ್ ದೇ ಇಂಡಿಯಾ' ಚಿತ್ರದಲ್ಲಿ ಪ್ರೀತಿ ಸಬರ್ವಾಲ್ ಪಾತ್ರದ ಮೂಲಕ ಗಮನ ಸೆಳೆದಿದ್ದಾರೆ. ಇದಲ್ಲದೇ, ‘ಲಾಲಾಟ್’ ಚಿತ್ರದಲ್ಲಿ ಬಣ್ಣ ಹಚ್ಚಿದ್ದಾರೆ. ‘ಫಿಯರ್ ಫ್ಯಾಕ್ಟರ್: ಖತ್ರೋನ್ ಕೆ ಖಿಲಾಡಿ 6’ ರಿಯಾಲಿಟಿ ಶೋನಲ್ಲೂ ಭಾಗವಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.