ADVERTISEMENT

ಬೇಬಿ ಶವರ್‌ ಫೋಟೊ ಹಂಚಿಕೊಂಡ ನಟಿ ಅಮೂಲ್ಯ: ಅಭಿಮಾನಿಗಳಿಂದ ಶುಭ ಹಾರೈಕೆ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 2 ಡಿಸೆಂಬರ್ 2021, 8:43 IST
Last Updated 2 ಡಿಸೆಂಬರ್ 2021, 8:43 IST
ನಟಿ ಅಮೂಲ್ಯ ಜಗದೀಶ್‌ ತಮ್ಮ ಇನ್‌ಸ್ಟಾಗ್ರಾಂ ಖಾತೆಯಲ್ಲಿ ಹಂಚಿಕೊಂಡ ಬೇಬಿ ಶವರ್‌ ಫೋಟೊ
ನಟಿ ಅಮೂಲ್ಯ ಜಗದೀಶ್‌ ತಮ್ಮ ಇನ್‌ಸ್ಟಾಗ್ರಾಂ ಖಾತೆಯಲ್ಲಿ ಹಂಚಿಕೊಂಡ ಬೇಬಿ ಶವರ್‌ ಫೋಟೊ   

ಬೆಂಗಳೂರು: ನಟಿ ಅಮೂಲ್ಯಜಗದೀಶ್‌ ಅವರು ಬೇಬಿ ಶವರ್‌ ಫೋಟೊವನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿದ್ದು, ಅಭಿಮಾನಿಗಳು, ನಟ-ನಟಿಯರು ಮತ್ತು ಕನ್ನಡ ಚಿತ್ರರಂಗದ ಮಂದಿ ಅಭಿನಂದನೆಗಳನ್ನು ಹೇಳಿದ್ದಾರೆ.

'ನಾವೀಗ ಇಬ್ಬರೇ ಅಲ್ಲ' ಎಂದು ಬೇಬಿ ಶವರ್‌ ಫೋಟೊಗೆ ಅಡಿಬರಹ ನೀಡಿರುವ ಅಮೂಲ್ಯ ಹೃದಯದ ಎಮೋಜಿಯನ್ನು ಹಂಚಿಕೊಂಡಿದ್ದಾರೆ. ಪತಿ ಜಗದೀಶ್‌ ಜೊತೆಗೆ ಬೇಬಿ ಶವರ್‌ ಫೋಟೊ‌ ಶೂಟ್‌ ಮಾಡಿಸಿಕೊಂಡಿರುವ ಅಮೂಲ್ಯ ಇನ್‌ಸ್ಟಾಗ್ರಾಂನಲ್ಲಿ ಪೋಸ್ಟ್‌ ಮಾಡಿದ್ದಾರೆ.

ಸೆಲೆಬ್ರಿಟಿಗಳಾದ ಕಾರುಣ್ಯಾ, ವೈಷ್ಣವಿ, ಪಾರುಲ್‌ ಯಾದವ್‌, ಆಶಿಕಾ ರಂಗನಾಥ್‌, ದೀಪಿಕಾ ದಾಸ್‌, ಹರ್ಷಿಕಾ ಪುಣಚ್ಚಾ, ಭುವನ್‌ ಪೊನ್ನಣ್ಣ, ಚೈತ್ರಾ ವಾಸುದೇವನ್‌ ಮುಂತಾದವರು ಅಮೂಲ್ಯ ಅವರಿಗೆ ಶುಭ ಹಾರೈಸಿದ್ದಾರೆ.

ADVERTISEMENT

ಇತ್ತೀಚೆಗೆ ನಟಿ ಅಮೂಲ್ಯ ಅವರು ಮೃಗಾಲಯದಲ್ಲಿರುವ ಪ್ರಾಣಿ, ಪಕ್ಷಿಗಳನ್ನು ದತ್ತು ಪಡೆಯಲು ನಟ ದರ್ಶನ್‌ ಅವರು ಕರೆಗೆ ಕೈಜೋಡಿಸಿ, ಮೈಸೂರಿನ ಮೃಗಾಲಯದಲ್ಲಿನ ಜಾಗ್ವಾರ್‌ ಒಂದನ್ನು ದತ್ತು ಪಡೆದಿದ್ದಾರೆ. ಮುಂದಿನ ಒಂದು ವರ್ಷದವರೆಗೆ ಆ ಪ್ರಾಣಿಯ ನಿರ್ವಹಣಾ ವೆಚ್ಚವನ್ನು ನಟಿ ಅಮೂಲ್ಯ ಭರಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.