ADVERTISEMENT

ತಾಯಿಯಾಗುತ್ತಿದ್ದಾರೆ ನಟಿ ಪ್ರಣೀತಾ ಸುಭಾಷ್: ಬೇಬಿ ಬಂಪ್ ಫೋಟೊ ವೈರಲ್

ಬಹುಭಾಷಾ ನಟಿ ಪ್ರಣೀತಾ ಸುಭಾಷ್ ಅವರು ಕಳೆದ ವರ್ಷ ಉದ್ಯಮಿ ನಿತಿನ್ ರಾಜು ಜತೆ ಮದುವೆಯಾಗಿದ್ದರು.

​ಪ್ರಜಾವಾಣಿ ವಾರ್ತೆ
Published 3 ಜೂನ್ 2022, 11:05 IST
Last Updated 3 ಜೂನ್ 2022, 11:05 IST
ಬಹುಭಾಷಾ ನಟಿ ಪ್ರಣೀತಾ ಸುಭಾಷ್ ಅವರು ಕಳೆದ ವರ್ಷ ಉದ್ಯಮಿ ನಿತಿನ್ ರಾಜು ಜತೆ ಮದುವೆಯಾಗಿದ್ದರು.
ಬಹುಭಾಷಾ ನಟಿ ಪ್ರಣೀತಾ ಸುಭಾಷ್ ಅವರು ಕಳೆದ ವರ್ಷ ಉದ್ಯಮಿ ನಿತಿನ್ ರಾಜು ಜತೆ ಮದುವೆಯಾಗಿದ್ದರು.   
ಪ್ರಣೀತಾ ಸುಭಾಷ್ ಅವರು ಗರ್ಭಿಣಿಯಾಗಿದ್ದು, ಬೇಬಿ ಬಂಪ್ ಫೋಟೊಗಳನ್ನು ಸಾಮಾಜಿಕ ತಾಣಗಳಲ್ಲಿ ಪೋಸ್ಟ್ ಮಾಡಿದ್ದಾರೆ.
ಪ್ರಣೀತಾ ಅವರು ಕನ್ನಡ, ತೆಲುಗು, ತಮಿಳು ಮತ್ತು ಹಿಂದಿ ಚಿತ್ರಗಳಲ್ಲಿ ನಟಿಸಿ, ಅಭಿಮಾನಿಗಳ ಮೆಚ್ಚುಗೆಗೆ ಪಾತ್ರರಾಗಿದ್ದಾರೆ.
ಮೂಲತಃ ಬೆಂಗಳೂರಿನವರೇ ಆದ ಪ್ರಣೀತಾ, ಲಾಕ್‌ಡೌನ್ ಅವಧಿಯಲ್ಲಿ ಬಡಕುಟುಂಬಗಳಿಗೆ ಆರ್ಥಿಕ ನೆರವು, ಆಹಾರ ಧಾನ್ಯ ವಿತರಿಸಿ ಮಾನವೀಯತೆ ಮೆರೆದಿದ್ದರು.
2010ರಲ್ಲಿ ಪೊರ್ಕಿ ಕನ್ನಡ ಚಿತ್ರದಲ್ಲಿ ‘ಅಂಜಲಿ ಐಯ್ಯರ್‘ ಪಾತ್ರದ ಮೂಲಕ ಸಿನಿಮಾರಂಗ ಪ್ರವೇಶಿಸಿದ್ದರು.
2021ರ ಮೇ 30ರಂದು ಪ್ರಣೀತಾ, ನಿತಿನ್ ರಾಜು ಜತೆ ವಿವಾಹವಾಗಿದ್ದು, 2022ರ ಏಪ್ರಿಲ್‌ 11ರಂದು ಗರ್ಭಿಣಿಯಾಗಿರುವುದನ್ನು ಘೋಷಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.