ADVERTISEMENT

‘ಅಮರನ್‌’ ಸೇರಿ OTTಯಲ್ಲಿ ನೋಡಬಹುದಾದ ಉತ್ತಮ ಸಿನಿಮಾಗಳಿವು...

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 4 ಡಿಸೆಂಬರ್ 2024, 14:15 IST
Last Updated 4 ಡಿಸೆಂಬರ್ 2024, 14:15 IST
<div class="paragraphs"><p>ಅಮರನ್‌ ಸೇರಿ OTTಯಲ್ಲಿ ನೋಡಬಹುದಾದ ಉತ್ತಮ ಸಿನಿಮಾಗಳಿವು...</p></div>

ಅಮರನ್‌ ಸೇರಿ OTTಯಲ್ಲಿ ನೋಡಬಹುದಾದ ಉತ್ತಮ ಸಿನಿಮಾಗಳಿವು...

   

ಶಿವ ಕಾರ್ತಿಕೇಯನ್‌ ಮತ್ತು ಸಾಯಿ ಪಲ್ಲವಿ ನಟನೆಯ ಅಮರನ್‌ ಚಿತ್ರ ಡಿ.5ಕ್ಕೆ ನೆಟ್‌ಫ್ಲಿಕ್‌ನಲ್ಲಿ ವೀಕ್ಷಣೆಗೆ ದೊರಕಲಿದೆ. ತಮಿಳು, ತೆಲುಗು, ಕನ್ನಡ, ಮಲಯಾಳಂ, ಹಿಂದಿಯಲ್ಲಿ ಈ ಚಿತ್ರವನ್ನು ನೋಡಬಹುದು. 2024ರಲ್ಲಿ ಅತಿ ಹೆಚ್ಚು ಗಳಿಕೆ ಕಂಡ ತಮಿಳು ಸಿನಿಮಾಗಳ ಪಟ್ಟಿಗೆ ಅಮರನ್‌ ಕೂಡ ಸೇರಿದೆ. 

ಆಲಿಯಾ ಭಟ್‌ ನಟನೆಯ ಬಾಲಿವುಡ್‌ನ ಜಿಗ್ರಾ ಸಿನಿಮಾ ಡಿ.6ಕ್ಕೆ ನೆಟ್‌ಫ್ಲಿಕ್ಸ್‌ನಲ್ಲಿ ಬಿಡುಗಡೆಯಾಗುತ್ತಿದೆ. ಅ.11 ರಂದು ಈ ಚಿತ್ರ ಥಿಯೇಟರ್‌ಗಳಲ್ಲಿ ಬಿಡುಗಡೆಯಾಗಿತ್ತು.

ADVERTISEMENT

ದುಲ್ಕರ್‌ ಸಲ್ಮಾನ್‌ ನಟನೆಯ ಲಕ್ಕಿ ಭಾಸ್ಕರ್‌ ಚಿತ್ರ ನೆಟ್‌ಫ್ಲಿಕ್ಸ್‌ನಲ್ಲಿ ಬಿಡುಗಡೆಯಾಗಿದೆ. ಮಧ್ಯಮ ಕುಟುಂಬದ, ಬ್ಯಾಂಕ್‌ ಉದ್ಯೋಗಿಯಾಗಿ ದುಲ್ಕರ್‌ ಕಾಣಿಸಿಕೊಂಡಿದ್ದಾರೆ. ಈಗಾಗಲೇ ಈ ಚಿತ್ರ ನೆಟ್‌ಫ್ಲಿಕ್ಸ್‌ನಲ್ಲಿ 5.1 ಮಿಲಿಯನ್‌ಗೂ ಹೆಚ್ಚು ಜನರು ವೀಕ್ಷಿಸಿದ್ದು, ಅತಿ ಹೆಚ್ಚು ವೀಕ್ಷಣೆ ಪಡೆದ ಚಿತ್ರಗಳ ಪಟ್ಟಿಗೆ ಸೇರಿದೆ. ತಮಿಳು, ಮಲಯಾಳಂ, ಕನ್ನಡ, ಹಿಂದಿ, ತೆಲುಗಿನಲ್ಲಿ ಈ ಚಿತ್ರ ನೋಡಬಹುದು.

ಕನ್ನಡದ ನಟ ಕಿಶೋರ್‌ ನಟನೆಯ ಪ್ಯಾರಾಚೂಟ್‌ ವೆಬ್‌ ಸಿರೀಸ್‌ ಹಾಟ್‌ಸ್ಟಾರ್‌ನಲ್ಲಿ ಬಿಡುಗಡೆಗೊಂಡಿದೆ. ಹೆಜ್ಜೆ ಹೆಜ್ಜೆಗೂ ಕುತೂಹಲ ಹುಟ್ಟಿಸುವ ಕಥೆಯಿರುವ ಈ ಸಿರೀಸ್‌ ಅನ್ನು ತಮಿಳು, ತೆಲುಗು, ಕನ್ನಡ, ಹಿಂದಿ, ಮಲಯಾಳಂನಲ್ಲಿ ವೀಕ್ಷಿಸಬಹುದು. 

ಪ್ರೈಮ್‌ ವಿಡಿಯೊದಲ್ಲಿ ಬಿಡುಗಡೆಯಾಗಿರುವ ಬ್ಲಡಿ ಬೆಗ್ಗರ್‌ ಚಿತ್ರ ಹಾಸ್ಯಭರಿತ ಸಿನಿಮಾವಾಗಿದೆ. ತಮಿಳು ನಟ ಕೆವಿನ್‌ ಅಭಿಯನದ ಈ ಚಿತ್ರವನ್ನು ಎಂ. ಶಿವ ಬಾಲನ್‌ ನಿರ್ದೇಶಿಸಿದ್ದಾರೆ.

ಅಮೆಜಾನ್‌ ಪ್ರೈಮ್‌ನಲ್ಲಿ ಡಿ.18ಕ್ಕೆ ಗರ್ಲ್ಸ್‌ ವಿಲ್‌ ಬಿ ಗರ್ಲ್ಸ್‌ ಚಿತ್ರ ಬಿಡುಗಡೆಯಾಗುತ್ತಿದೆ. ರಿಚಾ ಚಡ್ಡಾ ನಟನೆಯ ಸಿನಿಮಾಕ್ಕೆ ಈಗಾಗಲೇ ಹಲವು ಅಂತರರಾಷ್ಟ್ರೀಯ ಪ್ರಶಸ್ತಿಗಳು ಲಭಿಸಿವೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.