ADVERTISEMENT

ಅಮೇಜಾನ್‌ ಪ್ರೈಂನಲ್ಲಿ ವಿದ್ಯಾಪತಿ, ಕೆರೆಬೇಟೆ

​ಪ್ರಜಾವಾಣಿ ವಾರ್ತೆ
Published 5 ಮೇ 2025, 0:30 IST
Last Updated 5 ಮೇ 2025, 0:30 IST
ಗೌರಿಶಂಕರ್‌
ಗೌರಿಶಂಕರ್‌   

ಡಾಲಿ ಧನಂಜಯ ನಿರ್ಮಿಸಿ, ನಾಗಭೂಷಣ್‌ ನಾಯಕನಾಗಿ ನಟಿಸಿರುವ ‘ವಿದ್ಯಾಪತಿ’ ಹಾಗೂ ರಾಜ್‌ಗುರು ನಿರ್ದೇಶಿಸಿ, ಗೌರಿಶಂಕರ್‌ ನಾಯಕನಾಗಿರುವ ‘ಕೆರೆಬೇಟೆ’ ಚಿತ್ರಗಳು ಅಮೇಜಾನ್‌ ಪ್ರೈಂ ಒಟಿಟಿಯಲ್ಲಿ ವೀಕ್ಷಕರಿಗೆ ಲಭ್ಯವಿವೆ.

ಇಶಾಂ ಹಾಗೂ ಹಸೀಂ ಖಾನ್ ನಿರ್ದೇಶನದ ‘ವಿದ್ಯಾಪತಿ’ ಸಿನಿಮಾ 2025ರ ಏಪ್ರಿಲ್‌ 10ರಂದು ತೆರೆಗೆ ಬಂದಿತ್ತು. ‘ಉಪಾಧ್ಯಕ್ಷ’ ಮೂಲಕ ಸ್ಯಾಂಡಲ್‌ವುಡ್‌ಗೆ ಎಂಟ್ರಿ ಕೊಟ್ಟಿದ್ದ ಮಲೈಕಾ ವಸುಪಾಲ್ ನಾಯಕಿಯಾಗಿ ನಟಿಸಿದ್ದಾರೆ. ಡಾಲಿ ಧನಂಜಯ ಅತಿಥಿ ಪಾತ್ರದಲ್ಲಿ ಕಾಣಿಸಿಕೊಂಡಿದ್ದು, ಇದೀಗ ಈ ಚಿತ್ರ ಒಟಿಟಿಯಲ್ಲಿ ಲಭ್ಯವಿದೆ. ರಂಗಾಯಣ ರಘು ಪ್ರಮುಖ ಪಾತ್ರದಲ್ಲಿದ್ದು, ಲವಿತ್ ಛಾಯಾಚಿತ್ರಗ್ರಹಣ, ಡಾಸ್ಮೋಡ್ ಸಂಗೀತ ನಿರ್ದೇಶನ ಚಿತ್ರಕ್ಕಿದೆ.

ಮಲೆನಾಡು ಭಾಗದಲ್ಲಿ ಮೀನು ಬೇಟೆಯಾಡುವ ಕೆರೆಬೇಟೆಯನ್ನೇ ಕಥೆಯಾಗಿ ಹೊಂದಿರುವ ಚಿತ್ರ 2024ರ ಮಾರ್ಚ್‌ನಲ್ಲಿ ತೆರೆಕಂಡಿತ್ತು. ಗೌರಿಶಂಕರ್‌ಗೆ ಬಿಂದು ಶಿವರಾಮ್ ನಾಯಕಿಯಾಗಿ ನಟಿಸಿದ್ದಾರೆ. ಗೋಪಾಲಕೃಷ್ಣ ದೇಶಪಾಂಡೆ, ಹರಿಣಿ ಶ್ರೀಕಾಂತ್, ಸಂಪತ್ ಮೆತ್ರೇಯ ಮುಂತಾದವರು ತಾರಾಗಣದಲ್ಲಿದ್ದಾರೆ. ‘ಜನಮನ ಸಿನಿಮಾ’ ಬ್ಯಾನರ್ ಅಡಿಯಲ್ಲಿ ನಿರ್ಮಾಣಗೊಂಡ ಚಿತ್ರಕ್ಕೆ ಗಗನ್ ಬದೇರಿಯ ಸಂಗೀತ ನಿರ್ದೇಶನ, ಕೀರ್ತನ್‌ ಪೂಜಾರಿ ಛಾಯಾಚಿತ್ರಗ್ರಹಣವಿದೆ. 

ADVERTISEMENT
ನಾಗಭೂಷಣ್‌

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.