ADVERTISEMENT

ಮಗಳ ಖಾಸಗಿತನ ಗೌರವಿಸಿದ್ದಕ್ಕೆ ಧನ್ಯವಾದ: ಅನುಷ್ಕಾ ಶರ್ಮಾ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 21 ಡಿಸೆಂಬರ್ 2021, 5:03 IST
Last Updated 21 ಡಿಸೆಂಬರ್ 2021, 5:03 IST
ಅನುಷ್ಕಾ ಶರ್ಮಾ ಮತ್ತು ವಿರಾಟ್ ಕೊಹ್ಲಿ
ಅನುಷ್ಕಾ ಶರ್ಮಾ ಮತ್ತು ವಿರಾಟ್ ಕೊಹ್ಲಿ   

ಬೆಂಗಳೂರು: ಮಗಳು ವಮಿಕಾಳ ಫೋಟೊವನ್ನು ಪ್ರಕಟಿಸದೇ ಆಕೆಯ ಖಾಸಗಿತನವನ್ನು ಕಾಪಾಡಿರುವುದಕ್ಕೆ ನಟಿ ಅನುಷ್ಕಾ ಶರ್ಮಾ ಮಾಧ್ಯಮದವರಿಗೆ ಧನ್ಯವಾದ ಹೇಳಿದ್ದಾರೆ..

ಇನ್‌ಸ್ಟಾಗ್ರಾಮ್ ಸ್ಟೋರೀಸ್‌ನಲ್ಲಿ ಈ ಕುರಿತು ಅವರು ಪೋಸ್ಟ್ ಮಾಡಿದ್ದು, ಇತ್ತೀಚೆಗೆ ಮಗಳ ಫೋಟೊವನ್ನು ಹಲವರು ಕ್ಲಿಕ್ ಮಾಡಿದ್ದರು. ಆದರೆ ಅವರು ಅದನ್ನು ಪ್ರಕಟಿಸದೆ ನಮಗೆ ಸಹಕರಿಸಿದ್ದಾರೆ ಎಂದು ಹೇಳಿದ್ದಾರೆ.

ತಾರಾ ದಂಪತಿ ಅನುಷ್ಕಾ ಶರ್ಮಾ ಮತ್ತು ವಿರಾಟ್ ಕೊಹ್ಲಿ ಅವರ ಮಗಳು ವಮಿಕಾ ಬಗ್ಗೆ ಜನರಿಗೆ ಕುತೂಹಲ ಇದೆ.

ADVERTISEMENT

ಅದಕ್ಕೆ ಕಾರಣವೇನೆಂದರೆ, ಮಗಳ ಮುಖ ಕಾಣಿಸುವಂತಹ ಫೋಟೊಗಳನ್ನು ಈವರೆಗೆ ಅನುಷ್ಕಾ ಶರ್ಮಾ ಮತ್ತು ವಿರಾಟ್ ಕೊಹ್ಲಿ ಎಲ್ಲಿಯೂ ಬಹಿರಂಗಪಡಿಸಿಲ್ಲ.

ಹೀಗಾಗಿ ದಂಪತಿ ಹೊರಗಡೆ ಹೋಗುವಾಗ ಮಗು ಜತೆಗಿದ್ದರೆ ಫೋಟೊ ತೆಗೆಯಲು ಮಾಧ್ಯಮದವರು ಮತ್ತು ಜನರು ಯತ್ನಿಸುತ್ತಾರೆ. ಆದರೆ ಈವರೆಗೆ ಎಲ್ಲಿಯೂ ಆ ರೀತಿ ಮಗುವಿನ ಫೋಟೊ ಬಹಿರಂಗವಾಗಿಲ್ಲ.

ಇನ್‌ಸ್ಟಾಗ್ರಾಮ್ ಸ್ಟೋರೀಸ್‌ನಲ್ಲಿ ಪೋಸ್ಟ್

ಮಗಳ ಖಾಸಗಿತನ ಗೌರವಿಸಬೇಕು ಮತ್ತು ಆಕೆಗೆ ಯಾವುದೇ ತೊಂದರೆಯಾಗದಂತೆ ಎಲ್ಲರಂತೆ ಸಾಮಾನ್ಯ ಜೀವನ ನಡೆಸಲು ಅನುವು ಮಾಡಿಕೊಡಬೇಕು ಎನ್ನುವುದು ಕೊಹ್ಲಿ–ಅನುಷ್ಕಾ ದಂಪತಿಯ ನಿಲುವಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.