ADVERTISEMENT

ಫ್ರಾನ್ಸ್ ಪ್ರವಾಸದಲ್ಲಿ ಕಳೆದುಹೋದ ಜಾಹ್ನವಿ ಕಪೂರ್

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 5 ಜೂನ್ 2022, 8:12 IST
Last Updated 5 ಜೂನ್ 2022, 8:12 IST
 ಜಾಹ್ನವಿ ಕಪೂರ್
ಜಾಹ್ನವಿ ಕಪೂರ್   

ಬೆಂಗಳೂರು: ಬಾಲಿವುಡ್‌ನ ಭವಿಷ್ಯದ ತಾರೆ ಎಂದೇ ಬಿಂಬಿಸಲಾಗುತ್ತಿರುವ ಕಪೂರ್ ಕುಟುಂಬದ ಯುವತಾರೆ ಜಾಹ್ನವಿ ಕಪೂರ್ ಅವರಿಗೆ ಪ್ರವಾಸ ಹೋಗುವುದೆಂದರೆ ಅಚ್ಚುಮೆಚ್ಚು.

ಜಾಹ್ನವಿ ಈ ಬಾರಿ ಫ್ರಾನ್ಸ್ ಪ್ರವಾಸಕ್ಕೆ ತೆರಳಿದ್ದಾರೆ. ಪ‍್ರವಾಸದ ವಿವಿಧ ಕ್ಷಣಗಳು ಮತ್ತು ಸುಂದರ ತಾಣಗಳ ಚಿತ್ರಗಳನ್ನು ತಮ್ಮ ಇನ್‌ಸ್ಟಾಗ್ರಾಮ್ ಖಾತೆಯಲ್ಲಿ ಅವರು ಪೋಸ್ಟ್ ಮಾಡಿದ್ದಾರೆ.

ಫ್ರಾನ್ಸ್‌ನ ಐಫೆಲ್ ಟವರ್, ಚರ್ಚ್, ಅಲ್ಲಿನ ವಾಸ್ತುಶಿಲ್ಪದ ಕುರಿತು ಜಾಹ್ನವಿ ಹಲವು ಫೋಟೊಗಳನ್ನು ಹಂಚಿಕೊಂಡಿದ್ದಾರೆ.

ADVERTISEMENT

ಸಿನಿಮಾ ಶೂಟಿಂಗ್ ಇಲ್ಲದಿರುವಾಗ ಜಾಹ್ನವಿ ಪ್ರವಾಸಕ್ಕೆ ಆದ್ಯತೆ ನೀಡುತ್ತಾರೆ.

ಇತ್ತೀಚೆಗೆ ಊಟಿಗೆ ಪ್ರವಾಸ ಹೋಗಿದ್ದ ಅವರು, ಅಲ್ಲಿನ ಸುಂದರ ಮುಂಜಾನೆಯ ಸೊಬಗನ್ನು ವಿಡಿಯೊದಲ್ಲಿ ವರ್ಣಿಸಿ ಪೋಸ್ಟ್ ಮಾಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.