ADVERTISEMENT

OTT: ಒಟಿಟಿಯಲ್ಲಿ ಬಿಡುಗಡೆಯಾಗುತ್ತಿದೆ ಮಲಯಾಳ ಥ್ರಿಲ್ಲರ್ ಸಿನಿಮಾ ‘ಏಕೋ’

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 27 ಡಿಸೆಂಬರ್ 2025, 7:07 IST
Last Updated 27 ಡಿಸೆಂಬರ್ 2025, 7:07 IST
<div class="paragraphs"><p>‘ಏಕೋ’ ಸಿನಿಮಾ ಪೋಸ್ಟರ್</p></div>

‘ಏಕೋ’ ಸಿನಿಮಾ ಪೋಸ್ಟರ್

   

ಎಕ್ಸ್ ಚಿತ್ರ

ಮಲಯಾಳ ಭಾಷೆಯ ಸಸ್ಪೆನ್ಸ್‌ ಥ್ರಿಲ್ಲರ್ ಸಿನಿಮಾ ‘ಏಕೋ’ ಒಟಿಟಿಯಲ್ಲಿ ಬಿಡುಗಡೆಯಾಗುತ್ತಿದೆ.

ADVERTISEMENT

ದಿನಜಿತ್ ಅಯ್ಯಥನ್ ನಿರ್ದೇಶನದ ಏಕೋ ಸಿನಿಮಾವು ಡಿ.31ರಂದು ನೆಟ್‌ಫ್ಲಿಕ್ಸ್‌ನಲ್ಲಿ ಬಿಡುಗಡೆಯಾಗಲಿದೆ. ಸಿನಿಮಾವು 2 ಗಂಟೆ 5 ನಿಮಿಷ ಅವಧಿಯಿದೆ. ಮಲಯಾಳ, ತಮಿಳು, ತೆಲುಗು, ಕನ್ನಡ ಹಾಗೂ ಹಿಂದಿ ಭಾಷೆಯಲ್ಲಿ ಚಿತ್ರವನ್ನು ವೀಕ್ಷಿಸಬಹುದು.

2025ರ ನವೆಂಬರ್‌ 21ರಂದು ಚಿತ್ರಮಂದಿರದಲ್ಲಿ ಬಿಡುಗಡೆಯಾಗಿದ್ದ ‘ಏಕೋ’ ಚಿತ್ರವು ನಿಗೂಢ ಕತೆಯನ್ನು ಹೊಂದಿದೆ. ಕೇರಳದ ಹಳ್ಳಿಯೊಂದರಲ್ಲಿ ಆರಂಭವಾಗುವ ಕತೆ, ಶ್ವಾನ ತಳಿ ಸಂರಕ್ಷಕ ಕುರಿಯಾಚನ್ ಹಾಗೂ ಅವನ ಮಲೇಷಿಯಾ ಹೆಂಡತಿ ಪಾತ್ರದ ಸುತ್ತಾ ಸಾಗುತ್ತದೆ. ಸಿನಿಮಾವು ಕೊನೆಯವರೆಗೂ ಕುತೂಹಲದಿಂದ ಸಾಗುತ್ತದೆ. ಏಕೋ ಸಿನಿಮಾವು ಚಿತ್ರಕತೆಯ ಮೂಲಕ ಸಿನಿ ಅಭಿಮಾನಿಗಳ ಗಮನ ಸೆಳೆದಿತ್ತು.

ಬಾಹುಲ್ ರಮೇಶ್ ಅವರು ಸಿನಿಮಾದ ಕತೆ, ಚಿತ್ರಕತೆ ಹಾಗೂ ಸಂಭಾಷಣೆ ಬರೆದಿದ್ದಾರೆ. ಸಂದೀಪ್ ಪ್ರದೀಪ್, ಸೌರಭ್ ಸಚ್‌ದೇವ, ಸಿಮ್ ಝಿ ಫೀ, ಬಿಯಾನಾ ಮೊಮಿನ್, ಬಿನು ಪಪ್ಪು ಮುಖ್ಯಪಾತ್ರದಲ್ಲಿ ನಟಿಸಿದ್ದಾರೆ.

₹5 ಕೋಟಿ ಬಜೆಟ್‌ನ ಏಕೋ ಸಿನಿಮಾವು ಬಾಕ್ಸ್‌ ಆಫೀಸ್‌ನಲ್ಲಿ ₹40 ಕೋಟಿಗೂ ಅಧಿಕ ಗಳಿಕೆ ಮಾಡಿತ್ತು. ಸಿನಿಮಾಗೆ ಐಎಂಡಿಬಿ ಅಲ್ಲಿ 8.3 ರೇಟಿಂಗ್‌ ಇದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.