
ಇತ್ತೀಚೆಗೆ ಜಾಗತಿಕ ಮಟ್ಟದಲ್ಲಿ ಸದ್ದು ಮಾಡುತ್ತಿರುವ ‘ಎಪ್ಸ್ಟೀನ್ ಫೈಲ್ಸ್’ ರುವಾರಿಯಾದ ಲೈಂಗಿಕ ಅಪರಾಧಿ ಜೆಫ್ರಿ ಎಪ್ಸ್ಟೀನ್ ಕುರಿತ ವೆಬ್ ಸರಣಿಯೊಂದು ಪ್ರಮುಖ ಒಟಿಟಿಯಾದ ನೆಟ್‌ಫ್ಲಿಕ್ಸ್‌ನಲ್ಲಿ ಸದ್ದು ಮಾಡುತ್ತಿದೆ.
‘ಜೆಫ್ರಿ ಎಪ್ಸ್ಟೀನ್: ಫ್ಲಿಫ್ತಿ ರಿಚ್’ಹೆಸರಿನ ಅಮೆರಿಕನ್ ವೆಬ್ ಸರಣಿಯು ಕಳೆದ ಕೆಲವು ದಿನಗಳಿಂದ ನೆಟ್‌ಫ್ಲಿಕ್ಸ್‌ನಲ್ಲಿ ಟ್ರೆಂಡಿಂಗ್‌ನಲ್ಲಿದೆ.
ಇಂಗ್ಲಿಷ್ ಭಾಷೆಯ ಈ ವೆಬ್ ಸರಣಿಯು 2020ರ ಮೇ 27ರಂದು ಬಿಡುಗಡೆಯಾಗಿತ್ತು. 224 ನಿಮಿಷದ ಈ ಸರಣಿಯಲ್ಲಿ ‘ಹಂಟಿಗ್ ಗ್ರೌಂಡ್ಸ್’, ‘ಫಾಲೋ ದಿ ಮನಿ’, ‘ದಿ ಐಸ್‌ಲೆಂಡ್’ ಹಾಗೂ ‘ಫೈಡಿಂಗ್ ದೇರ್ ವಾಯ್ಸ್’ ಹೆಸರಿನ 4 ಎಪಿಸೋಡ್‌ಗಳಿವೆ.
ಸಾಕ್ಷ್ಯಚಿತ್ರದ ರೀತಿ ಈ ವೆಬ್ ಸರಣಿಯನ್ನು ನಿರ್ಮಾಣ ಮಾಡಲಾಗಿದೆ. ಜೆಫ್ರಿ ಎಪ್ಸ್ಟೀನ್ ತನ್ನ ಅಧಿಕಾರ ಮತ್ತು ಹಣ ಬಲದಿಂದ ಮಾಡಿದ ಕುಕೃತ್ಯಗಳಲ್ಲಿ ಭಾಗಿಯಾಗಿ, ಬದುಕುಳಿದವರು ತಮ್ಮ ಅನುಭವಗಳನ್ನು ಹೇಳಿಕೊಂಡಿದ್ದಾರೆ.
ಲಿಸಾ ಬ್ರ್ಯಾಂಟ್ ಈ ವೆಬ್ ಸರಣಿಯನ್ನು ನಿರ್ದೇಶಿಸಿದ್ದಾರೆ. ಎಂಐಡಿಬಿಯಲ್ಲಿ 7.1 ರೇಟಿಂಗ್ ಇದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.