ADVERTISEMENT

ಬೇಬಿ ಬಂಪ್ ಫೋಟೊ ಹಂಚಿಕೊಂಡ ಕಾಜಲ್ ಅಗರ್‌ವಾಲ್

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 13 ಮಾರ್ಚ್ 2022, 11:03 IST
Last Updated 13 ಮಾರ್ಚ್ 2022, 11:03 IST
   

ಬೆಂಗಳೂರು: ಮೊದಲ ಮಗುವಿನ ನಿರೀಕ್ಷೆಯಲ್ಲಿರುವ ನಟಿ ಕಾಜಲ್ ಅಗರ್‌ವಾಲ್, ಬೇಬಿ ಬಂಪ್ ಫೋಟೊಗಳನ್ನು ಇನ್‌ಸ್ಟಾಗ್ರಾಮ್‌ನಲ್ಲಿ ಪೋಸ್ಟ್ ಮಾಡಿದ್ದಾರೆ.

ಅದರಲ್ಲೂ ಪತಿ ಗೌತಮ್ ಜತೆಗೆ ಇರುವ ಕಪ್ಪು ಬಿಳುಪಿನ ಫೋಟೊಗಳು ಆಕರ್ಷಕವಾಗಿದ್ದು, ಅಭಿಮಾನಿಗಳ ಮನ ಗೆಲ್ಲುವಲ್ಲಿ ಕಾಜಲ್ ಯಶಸ್ವಿಯಾಗಿದ್ದಾರೆ.

ಕಾಜಲ್ಅವರಪ್ರೀತಿಯ ನಾಯಿಮರಿಗೂ ಫೋಟೊದಲ್ಲಿ ಸ್ಥಾನ ಲಭಿಸಿದೆ. 2021ರ ಅಕ್ಟೋಬರ್‌ನಲ್ಲಿ ಕಾಜಲ್ ಅಗರ್‌ವಾಲ್ ಅವರು ಗೌತಮ್ ಕಿಚಲು ಜತೆ ವಿವಾಹವಾಗಿದ್ದಾರೆ.

ಜನವರಿಯಲ್ಲಿ ಕಾಜಲ್ ದಂಪತಿ, ತಾವು ಮಗುವಿನ ನಿರೀಕ್ಷೆಯಲ್ಲಿದ್ದೇವೆ ಎಂದು ಹೇಳಿದ್ದರು.

ಕಾಜಲ್ ಬೇಬಿ ಬಂಪ್ ಫೋಟೊಗಳನ್ನು ನೋಡಿದ ಅವರ ಗೆಳೆಯರು ಕಾಮೆಂಟ್ ಮೂಲಕ ಅಭಿನಂದನೆ ಸಲ್ಲಿಸಿದ್ದು, ಮಗುವಿನ ಬರುವಿಕೆಗೆ ಕಾತರರಾಗಿದ್ದೇವೆ ಎಂದಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.