ADVERTISEMENT

ಪೋಲ್ ಡ್ಯಾನ್ಸಿಂಗ್ ಕೌಶಲ ಪ್ರದರ್ಶಿಸಿದ ನಟಿ ಕೃತಿ ಕರಬಂಧ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 20 ಮಾರ್ಚ್ 2022, 11:28 IST
Last Updated 20 ಮಾರ್ಚ್ 2022, 11:28 IST
ನಟಿ ಕೃತಿ ಕರಬಂಧ- ಇನ್‌ಸ್ಟಾಗ್ರಾಮ್‌ ಫೋಟೊ
ನಟಿ ಕೃತಿ ಕರಬಂಧ- ಇನ್‌ಸ್ಟಾಗ್ರಾಮ್‌ ಫೋಟೊ   

ಬೆಂಗಳೂರು: ನಟ ಯಶ್ ಜತೆ ‘ಗೂಗ್ಲಿ‘ ಸಿನಿಮಾದಲ್ಲಿ ಅಭಿನಯಿಸಿದ್ದ ನಟಿ ಕೃತಿ ಕರಬಂಧ ಅವರಿಗೆ ಪೋಲ್ ಡ್ಯಾನ್ಸಿಂಗ್ ಎಂದರೆ ಅಚ್ಚುಮೆಚ್ಚು..

ಮೂಲತಃ ನವದೆಹಲಿಯವರಾದ ಕೃತಿ, ಕನ್ನಡ ಮಾತ್ರವಲ್ಲದೆ, ಬಾಲಿವುಡ್ ಹಾಗೂ ದಕ್ಷಿಣ ಚಿತ್ರರಂಗದಲ್ಲೂ ಮಿಂಚಿದ್ದಾರೆ.

ಮಾಡೆಲಿಂಗ್ ಮೂಲಕ ಬಣ್ಣದ ಲೋಕ ಪ್ರವೇಶಿಸಿದ ಅವರು, ತೆಲುಗಿನ ಬೋನಿ ಚಿತ್ರದ ಮೂಲಕ 2009ರಲ್ಲಿ ಸಿನಿಮಾರಂಗ ಪ್ರವೇಶಿಸಿದರು.

ADVERTISEMENT

ನಟನೆಯ ಜತೆಗೆ, ನೃತ್ಯದ ಮೇಲೂ ಕೃತಿ ಅವರಿಗೆ ಒಲವಿದೆ.

ಕೃತಿ ಅವರು ಪೋಲ್ ಡ್ಯಾನ್ಸಿಂಗ್‌ನಲ್ಲಿ ಪರಿಣತಿ ಹೊಂದಿದ್ದು, ಇನ್‌ಸ್ಟಾಗ್ರಾಮ್‌ನಲ್ಲಿ ಫೋಟೊಗಳನ್ನು ಹಂಚಿಕೊಳ್ಳುವ ಮೂಲಕ ಅಭಿಮಾನಿಗಳನ್ನು ರಂಜಿಸಿದ್ದಾರೆ.

ಬೆಂಗಳೂರಿನಲ್ಲಿಯೇ ಪದವಿಯವರೆಗೆ ಶಿಕ್ಷಣ ಪಡೆದಿರುವ ಕೃತಿ, ಸೌತ್ ಫಿಲಂಫೇರ್ ಪ್ರಶಸ್ತಿಯನ್ನೂ ಪಡೆದಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.