ADVERTISEMENT

ಸಂಗೀತ ದಿಗ್ಗಜರ ಕ್ಲಾಸಿಕಲ್‌ ಕಛೇರಿ

​ಪ್ರಜಾವಾಣಿ ವಾರ್ತೆ
Published 1 ಡಿಸೆಂಬರ್ 2019, 14:31 IST
Last Updated 1 ಡಿಸೆಂಬರ್ 2019, 14:31 IST
ಕಲಾವಿದರು
ಕಲಾವಿದರು   

ಪಂಚಮ್ ನಿಶಾದ್ ಕ್ರಿಯೇಟಿವ್ಸ್ ಡಿಸೆಂಬರ್ 4 ರಂದು ನಗರದಲ್ಲಿ ‘ಕ್ಲಾಸಿಕಲ್ ಅಂಡ್ ಬಿಯಾಂಡ್ ಆ್ಯನ್ ಈವನಿಂಗ್ ಆಫ್ ಇಂಡಿಯನ್ ಮ್ಯೂಸಿಕ್’ ಸಂಗೀತ ಕಛೇರಿ ಆಯೋಜಿಸಿದೆ.

ವಿಶ್ವವಿಖ್ಯಾತ ತಬಲಾ ಪಟು ಉಸ್ತಾದ್ ಜಾಕಿರ್ ಹುಸೇನ್, ಕೊಳಲುವಾದಕ ರಾಕೇಶ್ ಚೌರಾಸಿಯಾ, ಕಂಜೀರಾ ಕಲಾವಿದ ವಿ.ಸೆಲ್ವಗಣೇಶ್, ಮೃದಂಗದಲ್ಲಿ ಪತ್ರಿ ಸತೀಶ್‍ಕುಮಾರ್ ಮತ್ತು ಮ್ಯಾಂಡೋಲಿನ್‍ನಲ್ಲಿ ಯು.ರಾಜೇಶ್‍ ಅವರು ಸಂಗೀತದ ರಸದೌತಣ ಉಣಬಡಿಸಲಿದ್ದಾರೆ.

ವಸಂತನಗರದಲ್ಲಿರುವ ಡಾ.ಬಿ.ಆರ್.ಅಂಬೇಡ್ಕರ್ ಭವನದಲ್ಲಿ ಡಿಸೆಂಬರ್ 4 ರಂದು ಸಂಜೆ 7 ಗಂಟೆಗೆಹಿಂದೂಸ್ಥಾನಿ ಮತ್ತು ಕರ್ನಾಟಕ ಸಂಗೀತದರಾಗ ಮತ್ತು ತಾಳದ ಮೇಳಗಳು ಅನಾವರಣಗೊಳ್ಳಲಿವೆ. ಸಾಂಪ್ರದಾಯಿಕ ಸಂರಚನೆಯ ಹೊರತಾದ ಸಂಗೀತ ಲಹರಿಯನ್ನು ಹರಿಸಲಿದ್ದಾರೆ.

ADVERTISEMENT

ಕಾರ್ಯಕ್ರಮದ ವಿವರ
ಕಾರ್ಯಕ್ರಮ:`ಕ್ಲಾಸಿಕಲ್ & ಬಿಯಾಂಡ್’
ದಿನಾಂಕ: 4ನೇ ಡಿಸೆಂಬರ್‌
ಸ್ಥಳ: ಡಾ.ಬಿ.ಆರ್.ಅಂಬೇಡ್ಕರ್ ಭವನ, ವಸಂತನಗರ
ಸಮಯ: ಸಂಜೆ 7 ಗಂಟೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.