ADVERTISEMENT

ಡಾಕು ಮಹಾರಾಜ್ ಸೇರಿ ಓಟಿಟಿಯಲ್ಲಿ ಈ ವಾರ ನೋಡಬಹುದಾದ ಸಿನಿಮಾಗಳಿವು...

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 21 ಫೆಬ್ರುವರಿ 2025, 7:51 IST
Last Updated 21 ಫೆಬ್ರುವರಿ 2025, 7:51 IST
   

ಈ ವಾರ ಒಟಿಟಿಯಲ್ಲಿ ಕುತೂಹಲ ಹುಟ್ಟಿಸುವ ಹಲವು ಸಿನಿಮಾ ಮತ್ತು ವೆಬ್‌ ಸಿರೀಸ್‌ಗಳು ವೀಕ್ಷಣೆಗೆ ಲಭ್ಯವಿದೆ.

ಕ್ರೈಮ್‌ ಬೀಟ್‌ (Crime Beat): ದೆಹಲಿ ಮಾಫಿಯಾ ತನಿಖೆಯ ಕುರಿತಾದ ಕಥಾ ಹಂದರ ಹೊಂದಿರುವ  ಕ್ರೈಮ್‌ ಬೀಟ್‌ ವೆಬ್‌ ಸರಣಿ ಜೀ5ನಲ್ಲಿ ಶುಕ್ರವಾರ ಬಿಡುಗಡೆಗೊಂಡಿದೆ. ಸಾಕಿಬ್‌ ಸಲೀಮ್‌, ಸಬಾ ಅಜಾದ್‌ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ.

ಡಾಕು ಮಹಾರಾಜ್‌: ನಂದಮೂರಿ ಬಾಲಕೃಷ್ಣ, ಊರ್ವಶಿ ರೌಟೇಲಾ ನಟಿಸಿರುವ ಡಾಕು ಮಹಾರಾಜ್‌ ಚಿತ್ರ ಫೆ.21ರಂದು ನೆಟ್‌ಫ್ಲಿಕ್ಸ್‌ನಲ್ಲಿ ಬಿಡುಗಡೆಗೊಂಡಿದೆ. ಆ್ಯಕ್ಷನ್‌ ಮತ್ತು ಸಾಹಸದ ಈ ಚಿತ್ರ ದರೋಡೆಕೋರರ ಕಥಾಹಂದರವನ್ನು ಹೊಂದಿದೆ.

ADVERTISEMENT

Oops! Ab Kya?: ಹಿಂದಿಯ ಕಾಮಿಡಿ ಚಿತ್ರ Oops! Ab Kya? ಜಿಯೋ ಹಾಟ್‌ಸ್ಟಾರ್‌ನಲ್ಲಿ ಬಿಡುಗಡೆಯಾಗಿದೆ. ಫೆ. 20ರಿಂದ ಚಿತ್ರ ವೀಕ್ಷಣೆಗೆ ದೊರಕಿದ್ದು, ಶ್ವೇತಾ ಬಸು ಪ್ರಸಾದ್‌ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ.

ಕ್ಯೆಸೆಂಡ್ರಾ (cassandra): ನೆಟ್‌ಫಿಕ್ಸ್‌ನಲ್ಲಿ ಕ್ಯೆಸೆಂಡ್ರಾ ವೆಬ್‌ ಸರಣಿ ಬಿಡುಗಡೆಗೊಂಡಿದೆ. ವ್ಯಕ್ತಿಯೊಬ್ಬ ಪತ್ನಿಯನ್ನು ಸದಾ ಜೀವಂತವಾಗಿರಿಸಬೇಕೆಂದು ರೊಬೊದಲ್ಲಿ ಇರಿಸುತ್ತಾನೆ. ಅದರ ಪರಿಣಾಮವೇನು ಎನ್ನುವುದೇ ಕಥಾ ಹಂದರ. ಜರ್ಮನ್‌ ಸೈನ್ಸ್‌ ಫಿಕ್ಷನ್‌ ವೆಬ್‌ ಸರಣಿ ಇದಾಗಿದ್ದು, ಇಂಗ್ಲಿಷ್‌ನಲ್ಲಿ ಬಿಡುಗಡೆಯಾಗಿದೆ.

ಸಿಐಡಿ (CID): ಭಾರತದಲ್ಲಿ ಅತಿ ಹೆಚ್ಚು ಜನರನ್ನು ಸೆಳೆದಿರುವ ಸಿಐಡಿ ವೆಬ್‌ ಸರಣಿ ಫೆ.21ರಿಂದ ಪ್ರಸಾರವಾಗುತ್ತಿದೆ ಎರಡನೇ ಆವೃತ್ತಿಯ ಮೊದಲ 18 ಸಂಚಿಕೆಗಳನ್ನು ವೀಕ್ಷಕರಿಗೆ ನೆಟ್‌ಫ್ಲಿಕ್ಸ್‌ನಲ್ಲಿ ನೋಡಲು ಲಭ್ಯವಿದೆ. ಹೊಸ ಸಂಚಿಕೆಗಳು ಫೆ.22ರಿಂದ ಪ್ರತಿ ಶನಿವಾರ ಮತ್ತು ಭಾನುವಾರ ರಾತ್ರಿ 10 ಗಂಟೆಗೆ ಬಿಡುಗಡೆಯಾಗಲಿದೆ. 

Kadhalikka Neramillai: ರವಿ ಮೋಹನ್‌, ನಿತ್ಯಾ ಮೆನನ್‌ ನಟನೆಯ Kadhalikka Neramillai ಚಿತ್ರ ನೆಟ್‌ಫ್ಲಿಕ್ಸ್‌ನಲ್ಲಿ ಬಿಡುಗಡೆಯಾಗಿದೆ. ಇದೊಂದು ರೊಮ್ಯಾಂಟಿಕ್‌ ಚಿತ್ರವಾಗಿದ್ದು, ಮಲಯಾಳಂ, ಕನ್ನಡ, ತೆಲುಗು, ತಮಿಳು ಸೇರಿ ಹಲವು ಭಾಷೆಗಳಲ್ಲಿ ನೋಡಬಹುದಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.