
ಕನ್ನಡ, ತೆಲುಗು, ತಮಿಳು, ಮಲಯಾಳ, ಹಿಂದಿ, ಇಂಗ್ಲಿಷ್ ಭಾಷೆಯಲ್ಲಿ ಈ ವಾರ (ಜ.11 – ಜ.17) ಒಟಿಟಿಯಲ್ಲಿ ಪ್ರಸಾರವಾಗಲಿರುವ ಸಿನಿಮಾ ಹಾಗೂ ವೆಬ್‌ಸರಣಿಗಳ ಕುರಿತ ಮಾಹಿತಿ ಇಲ್ಲಿದೆ.
ಸಿನಿಮಾ: ಕಲಾಂಕಾವಲ್
ಭಾಷೆ: ಮಲಯಾಳ
ಒಟಿಟಿ: ಸೋನಿ ಲೈವ್
ಬಿಡುಗಡೆ ದಿನಾಂಕ: ಜ.16
ಮಲಯಾಳ ಸ್ಟಾರ್ ನಟ ಮಮ್ಮುಟ್ಟಿ ಅಭಿನಯದ ಥ್ರಿಲ್ಲರ್ ಸಿನಿಮಾವಾದ ‘ಕಲಾಂಕಾವಲ್’, ಚಿತ್ರಮಂದಿರದಲ್ಲಿ ₹83 ಕೋಟಿಗೂ ಅಧಿಕ ಗಳಿಕೆ ಮಾಡುವ ಮೂಲಕ ಸದ್ದು ಮಾಡಿತ್ತು. ಕೊಟ್ಟಾಯಿಕೋಣಂನ ಸಣ್ಣ ಹಳ್ಳಿಯಲ್ಲಿ ನಡೆಯುವ ಕೊಲೆಗಳ ತನಿಖೆ ಹಾಗೂ ಪೊಲೀಸ್ ವಿಚಾರಣೆಯ ಸುತ್ತ ಸಾಗುವ ಸಿನಿಮಾವು, ಕುತೂಹಲಕಾರಿ ತಿರುವುಗಳಿಂದ ವೀಕ್ಷಕರ ಗಮನ ಸೆಳೆಯುತ್ತದೆ. ಜಿತಿನ್ ಕೆ. ಜೋಶ್ ನಿರ್ದೇಶನದ ಈ ಸಿನಿಮಾ, ಜ.16ರಿಂದ ಸೋನಿ ಲೈವ್ ಒಟಿಟಿಯಲ್ಲಿ ಮಲಯಾಳ, ತಮಿಳು, ತೆಲುಗು ಹಾಗೂ ಹಿಂದಿ ಭಾಷೆಗಳಲ್ಲಿ ಪ್ರಸಾರವಾಗಲಿದೆ.
ಸಿನಿಮಾ: ಮಹಾಸೇನಾ
ಭಾಷೆ: ತಮಿಳು
ಒಟಿಟಿ: ಅಮೆಜಾನ್ ಪ್ರೈಮ್
ಬಿಡುಗಡೆ ದಿನಾಂಕ: ಜ.13
ಕೋಲಿವುಡ್‌ನ ‘ಮಹಾಸೇನಾ’ ಸಿನಿಮಾವು ಡಿ.12ರಂದು ಚಿತ್ರಮಂದಿರದಲ್ಲಿ ಬಿಡುಗಡೆಯಾಗಿತ್ತು. ಇದು ಅ್ಯಕ್ಷನ್ ಥ್ರಿಲ್ಲರ್ ಸಿನಿಮಾವಾಗಿದ್ದು, ದಿನೇಶ್ ಕಲೈಸೆಲ್ವನ್ ನಿರ್ದೇಶಿಸಿದ್ದಾರೆ. ನಿಗೂಢ ಅರಣ್ಯದಲ್ಲಿ ಮನುಷ್ಯನ ದುರಾಸೆಯ ವಿರುದ್ಧ ನಡೆಯುವ ಹೋರಾಟವು ಸಿನಿಮಾದ ಕತೆಯಾಗಿದೆ. ವೇಮಲ್, ಯೋಗಿ ಬಾಬು, ಕಬೀರ್ ದುಹಾನ್ ಸಿಂಗ್, ಜಾನ್ ವಿಜಯ್, ಮಹಿಮಾ ಗುಪ್ತಾ ಮುಖ್ಯಪಾತ್ರದಲ್ಲಿ ನಟಿಸಿದ್ದಾರೆ. ತಮಿಳು, ಹಿಂದಿ, ಕನ್ನಡ, ಮಲಯಾಳ, ತೆಲುಗು ಭಾಷೆಯಲ್ಲಿ ಬಿಡುಗಡೆಯಾಗಲಿದೆ.
ಸಿನಿಮಾ: ಭಾ. ಬಾ. ಬಾ
ಭಾಷೆ: ಮಲಯಾಳ
ಒಟಿಟಿ: ಜೀ 5
ಬಿಡುಗಡೆ ದಿನಾಂಕ: ಜ. 16
ಧನಂಜಯ್ ಶಂಕರ್ ನಿರ್ದೇಶನದ ಆ್ಯಕ್ಷನ್ – ಕಾಮಿಡಿ ಸಿನಿಮಾ ‘ಭಾ. ಬಾ. ಬಾ’, 2025ರ ಡಿ.18ರಂದು ಚಿತ್ರಮಂದಿರದಲ್ಲಿ ಬಿಡುಗಡೆಯಾಗಿತ್ತು. ಬಾಕ್ಸ್ ಆಫೀಸ್‌ನಲ್ಲಿ ₹30 ಕೋಟಿ ಗಳಿಸಿತ್ತು. ಮುಖ್ಯಮಂತ್ರಿಯನ್ನು ಅಪಹರಣ ಮಾಡಿ, ಜನರ ಬೇಡಿಕೆಗಳನ್ನು ಈಡೇರಿಸುವಂತೆ ಮಾಡುವುದು ಚಿತ್ರಕತೆಯಾಗಿದೆ. ದಿಲೀಪ್, ವಿನೀತ್ ಶ್ರೀನಿವಾಸನ್, ಬೈಜು ಸಂತೋಷ್ ಮುಖ್ಯಪಾತ್ರದಲ್ಲಿ ನಟಿಸಿದ್ದಾರೆ. ಮೋಹನ್‌ಲಾಲ್ ಅವರು ಕ್ಯಾಮಿಯೋ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಚಿತ್ರವು 153 ನಿಮಿಷಗಳ ಅವಧಿಯಿದೆ.
ವೆಬ್ ಸರಣಿ: ಟಾಸ್ಕರಿ: ದಿ ಸ್ಮಗ್ಲರ್ಸ್ ವೆಬ್
ಭಾಷೆ: ಹಿಂದಿ
ಒಟಿಟಿ: ನೆಟ್‌ಫ್ಲಿಕ್ಸ್
ಬಿಡುಗಡೆ ದಿನಾಂಕ: ಜ. 14
ಬಾಲಿವುಡ್ ನಟ ಇಮ್ರಾನ್ ಹಶ್ಮಿ ಮುಖ್ಯಪಾತ್ರದಲ್ಲಿ ಕಾಣಿಸಿಕೊಂಡಿರುವ ‘ಟಾಸ್ಕರಿ: ದಿ ಸ್ಮಗ್ಲರ್ಸ್ ವೆಬ್’ ವೆಬ್ ಸರಣಿಯು ಜ. 14ರಂದು ನೆಟ್‌ಫ್ಲಿಕ್ಸ್‌ನಲ್ಲಿ ಬಿಡುಗಡೆಯಾಗಲಿದೆ. ಕಸ್ಟಮ್ಸ್ ಅಧಿಕಾರಿ ಪಾತ್ರದಲ್ಲಿ ಇಮ್ರಾನ್ ಹಶ್ಮಿ ಕಾಣಿಸಿಕೊಂಡಿದ್ದಾರೆ. ಅವರ ತಂಡವು ಕುಖ್ಯಾತ ಕಳ್ಳಸಾಗಣಿಕಾ ತಂಡದ ಬೆನ್ನತ್ತುವ ಕ್ರೈಮ್ – ಥ್ರಿಲ್ಲರ್ ಸರಣಿ ಇದಾಗಿದೆ. ಈ ವೆಬ್ ಸರಣಿಯನ್ನು ನೀರಜ್ ಪಾಂಡೆ ನಿರ್ದೇಶನ ಮಾಡಿದ್ದಾರೆ. ಒಟ್ಟು 7 ಎಪಿಸೋಡ್‌ಗಳಿವೆ.
ವೆಬ್ ಸರಣಿ: ದಿ ನೈಟ್ ಮ್ಯಾನೇಜರ್ – 2
ಭಾಷೆ: ಇಂಗ್ಲಿಷ್
ಒಟಿಟಿ: ಅಮೆಜಾನ್ ಪ್ರೈಮ್
ಬಿಡುಗಡೆ ದಿನಾಂಕ: ಜ.11
‘ದಿ ನೈಟ್ ಮ್ಯಾನೇಜರ್’ವೆಬ್ ಸರಣಿಯ 2ನೇ ಸೀಸನ್ ಜ.11ರಂದು ಬಿಡುಗಡೆಯಾಗಲಿದೆ. ಬ್ರಿಟಿಷ್ ಮಾಜಿ ಸೈನಿಕ ಮತ್ತು ಐಷಾರಾಮಿ ಹೋಟೆಲ್‌ನ ರಾತ್ರಿ ವ್ಯವಸ್ಥಾಪಕನಾಗಿದ್ದ ಜೊನಾಥನ್ ಪೈನ್‌ನನ್ನು ಗುಪ್ತಚರ ಅಧಿಕಾರಿಯೊಬ್ಬರು ನೇಮಿಸಿಕೊಳ್ಳುತ್ತಾರೆ. ಅವನನ್ನು ರಹಸ್ಯ ಶಸ್ತ್ರಾಸ್ತ್ರ ವ್ಯಾಪಾರಿಯ ಗುಟ್ಟು ತಿಳಿದುಕೊಳ್ಳಲು ರಹಸ್ಯ ಕಾರ್ಯಾಚರಣೆಗೆ ಕಳಿಸುತ್ತಾರೆ, ಮುಂದೇನಾಗುತ್ತದೆ ಎನ್ನುವುದಕ್ಕೆ ಈ ಸರಣಿಯಲ್ಲಿ ಉತ್ತರವಿದೆ. ಟಾಮ್ ಹಿಡಲ್‌ಸ್ಟನ್, ಹಗ್ ಲೌರಿ, ಒಲಿವಿಯಾ ಕೋಲ್ಮನ್ ಮುಖ್ಯಪಾತ್ರದಲ್ಲಿ ನಟಿಸಿದ್ದಾರೆ. 2ನೇ ಸೀಸನ್‌ನಲ್ಲಿ ಒಟ್ಟು 8 ಎಪಿಸೋಡ್‌ಗಳಿವೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.