ಈ ವಾರ ಒಟಿಟಿಯಲ್ಲಿ ಕುತೂಹಲಕಾರಿ ಥ್ರಿಲ್ಲರ್, ಹಾಸ್ಯ, ರಾಜಕೀಯ ಸೇರಿದಂತೆ ವಿವಿಧ ಕಥಾಹಂದರವುಳ್ಳ 15ಕ್ಕೂ ಹೆಚ್ಚು ಸಿನಿಮಾಗಳು ಬಿಡುಗಡೆಯಾಗುತ್ತಿವೆ. ಈ ವಾರ ಒಟಿಟಿಯಲ್ಲಿ ತೆರೆಕಾಣುವ ಸಿನಿಮಾಗಳ ಪಟ್ಟಿ ಇಲ್ಲಿದೆ.
ಈ ಚಿತ್ರದಲ್ಲಿ ತಮಿಳು ನಟ ವಿಜಯ್ ಸೇತುಪತಿ ಮತ್ತು ನಿತ್ಯಾ ಮೆನನ್ ಮೊದಲ ಬಾರಿಗೆ ತೆರೆಯ ಮೇಲೆ ಜೋಡಿಯಾಗಿ ನಟಿಸಿದ್ದಾರೆ. ಯೋಗಿ ಬಾಬು, ರೋಶಿನಿ ಹರಿಪ್ರಿಯನ್, ಮೈನಾ ನಂದಿನಿ ಮತ್ತು ಕಾಳಿ ವೆಂಕಟ್ ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ. ಜುಲೈ 25ರಂದು ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಿದ್ದ ಈ ಚಿತ್ರ ಪ್ರೇಕ್ಷಕರ ಮನಗೆಲ್ಲುವಲ್ಲಿ ಯಶಸ್ವಿಯಾಗಿತ್ತು.
ಎಲ್ಲಿ ನೋಡಬಹುದು: ಪ್ರೈಮ್ ವಿಡಿಯೊ
ಭಾಷೆ: ತಮಿಳು
ಯಾವಾಗ ಬಿಡುಗಡೆ: ಆಗಸ್ಟ್ 22
ಸುಧೀಶ್ ಶಂಕರ್ ನಿರ್ದೇಶನದ ಫಹಾದ್ ಫಾಸೀಲ್–ವಡಿವೇಲು ನಟನೆಯ ‘ಮಾರೀಸನ್’ ಸಿನಿಮಾವು ಸಿನಿಪ್ರಿಯರಿಂದ ಉತ್ತಮ ಪ್ರತಿಕ್ರಿಯೆ ಗಳಿಸಿತ್ತು. ಈ ಹಿಂದೆ ಫಹಾದ್ ಫಾಸೀಲ್–ವಡಿವೇಲು ಕಾಂಬಿನೇಷನ್‌ನಲ್ಲಿ ತೆರೆಕಂಡಿದ್ದ ‘ಮಾಮನ್’ ಸಿನಿಮಾ ಸೂಪರ್ ಹಿಟ್ ಆಗಿತ್ತು.
ಎಲ್ಲಿ ನೋಡಬಹುದು: ನೆಟ್‌ಫ್ಲಿಕ್ಸ್
ಭಾಷೆ: ತಮಿಳು
ಯಾವಾಗ ಬಿಡುಗಡೆ: ಆಗಸ್ಟ್ 22
‘ಕೊತ್ತಪಲ್ಲಿಲೋ ಒಕ್ಕಪುಡು’
ಪ್ರವೀಣ ಪರುಚೂರಿ ನಿರ್ದೇಶನದ ‘ಕೊತಪಲ್ಲಿಲೊ ಒಕ್ಕಪುಡು’ ಸಿನಿಮಾವು ಜುಲೈ 18ರಂದು ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಿತ್ತು ಮತ್ತು ಪ್ರೇಕ್ಷಕರಿಂದ ಉತ್ತಮ ಪ್ರತಿಕ್ರಿಯೆ ಪಡೆದಿತ್ತು.
ಎಲ್ಲಿ ನೋಡಬಹುದು: ಅಹಾ ವಿಡಿಯೊ
ಭಾಷೆ: ತೆಲುಗು
ಯಾವಾಗ ಬಿಡುಗಡೆ: ಆಗಸ್ಟ್ 22
ರಿವರ್ಸ್ ಆಫ್ ಫೇಟ್ (Rivers Of Fate)
ಕ್ರೈಮ್ ಥ್ರಿಲ್ಲರ್ ಕಥಾಹಂದರ ಹೊಂದಿರುವ ‘ರಿವರ್ಸ್ ಆಫ್ ಫೇಟ್’ ಚಿತ್ರವು ಬ್ರೆಜಿಲ್‌ನ ಅಮೆಜಾನ್‌ನಲ್ಲಿ ಅಪಹರಿಸಲ್ಪಟ್ಟ ಬಾಲಕಿಯ ಭಯಾನಕತೆಯನ್ನು ಒಳಗೊಂಡಿದೆ. ತನ್ನ ಮಗಳಿಗಾಗಿ ತಾಯಿ ಹುಡುಕಾಟ ನಡೆಸುವ ಪರಿಯನ್ನು ಪರಿಚಯಿಸುತ್ತದೆ.
ಎಲ್ಲಿ ನೋಡಬಹುದು: ನೆಟ್‌ಫ್ಲಿಕ್ಸ್
ಭಾಷೆ: ಇಂಗ್ಲಿಷ್ ಮತ್ತು ಇತರೆ
ಯಾವಾಗ ಬಿಡುಗಡೆ: ಆಗಸ್ಟ್ 20
‘ದಿ ಮ್ಯಾಪ್ ದಟ್ ಲೀಡ್ಸ್ ಟು ಯು’
ಯುರೋಪ್ ಪ್ರವಾಸದ ವೇಳೆ ಹೀದರ್ ಎಂಬ ಯುವತಿಯು ಜ್ಯಾಕ್‌ನನ್ನು ಭೇಟಿಯಾಗುತ್ತಾಳೆ. ಇವರಿಬ್ಬರ ನಡುವಿನ ಭಾವೋದ್ವೇಗ, ಏಕಾಂತತೆ ತುಂಬಿದ ಪ್ರಣಯವನ್ನು ಹುಟ್ಟುಹಾಕುತ್ತದೆ. ಹೀದರ್ ಆಗಮನ ಜ್ಯಾಕ್ ಜೀವನದಲ್ಲಿ ಬದಲಾವಣೆಗಳಿಗೆ ಕಾರಣವಾಗುತ್ತದೆ. ಈ ಸಿನಿಮಾವು ಜೆಪಿ ಮೋನಿಂಗರ್ ಅವರ ಕಾದಂಬರಿಯನ್ನು ಆಧರಿಸಿದೆ.
ಎಲ್ಲಿ ನೋಡಬಹುದು: ಪ್ರೈಮ್ ವಿಡಿಯೊ
ಭಾಷೆ: ಇಂಗ್ಲಿಷ್ ಮತ್ತು ಇತರೆ
ಯಾವಾಗ ಬಿಡುಗಡೆ: ಆಗಸ್ಟ್ 20
ಇವಷ್ಟೇ ಅಲ್ಲದೆ ಆಗಸ್ಟ್ 22ರಂದು ಇಂಗ್ಲಿಷ್ ಭಾಷೆಯ ‘ಒನ್ ಹಿಟ್ ವಂಡರ್’, ‘ದಿ ಆಲ್ಟೊ ನೈಟ್ಸ್’, ‘ಅಬಾಂಡೊನೇಡ್ ಮ್ಯಾನ್’, ‘ಲಾಂಗ್ ಸ್ಟೋರಿ ಶಾರ್ಟ್’, ‘ದಿ ಮೂವಿ’, ‘ಪೀಸ್‌ಮೇಕರ್: ಸೀಸನ್ 2’, ‘ದಿ ಟ್ರೂಥ್ ಅಬೌಟ್ ಜಸ್ಸಿ ಸ್ಮೊಲೆಟ್?’, ‘ಹಾಟ್ ಮಿಲ್ಕ್’ ಸೇರಿದಂತೆ ಸಿನಿಮಾಗಳು ಒಟಿಟಿ ವೇದಿಕೆಗಳಲ್ಲಿ ಬಿಡುಗಡೆಯಾಗಲಿವೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.