ADVERTISEMENT

OTTಯಲ್ಲಿ ಈ ವಾರ ಯಾವೆಲ್ಲಾ ಸಿನಿಮಾಗಳು ಬಿಡುಗಡೆಯಾಗುತ್ತಿವೆ?

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 6 ಆಗಸ್ಟ್ 2025, 10:35 IST
Last Updated 6 ಆಗಸ್ಟ್ 2025, 10:35 IST
   

ಒಟಿಟಿಯಲ್ಲಿ ಈ ವಾರ ಸಿನಿಮಾಗಳ ಹಬ್ಬವೇ ನಡೆಯುತ್ತಿದೆ. ಥ್ರಿಲ್ಲರ್‌, ಹಾಸ್ಯ, ರಾಜಕೀಯ ಹೀಗೆ ವಿವಿಧ ವಿಷಯ ವಸ್ತುಗಳುಳ್ಳ ಸಿನಿಮಾಗಳು ತೆರೆಕಾಣುತ್ತಿವೆ. ಇಲ್ಲಿದೆ ಈ ವಾರ ಒಟಿಟಿಯಲ್ಲಿ ತೆರೆಕಾಣುವ ಸಿನಿಮಾಗಳ ಪಟ್ಟಿ.

ಹೆಬ್ಬುಲಿ ಕಟ್

ನಟ ಸುದೀಪ್‌ ಅವರು ಹೆಬ್ಬುಲಿ ಸಿನಿಮಾದಲ್ಲಿ ಮಾಡಿಕೊಂಡಿದ್ದ ಕೇಶವಿನ್ಯಾಸ ಹೆಬ್ಬುಲಿ ಕಟ್‌ ಎಂದೇ ಹೆಸರಾಗಿದೆ. ಇದನ್ನೇ ಆಧಾರವಾಗಿಟ್ಟುಕೊಂಡು ಚಂದನವನದಲ್ಲಿ ‘ಹೆಬ್ಬುಲಿ ಕಟ್‌’ ಎನ್ನುವ ಚಿತ್ರ ನಿರ್ಮಾಣವಾಗಿದೆ. ಇದು ಈ ವಾರ ಒಟಿಟಿಯಲ್ಲಿ ತೆರೆಕಾಣುತ್ತಿದೆ.

ADVERTISEMENT

ಎಲ್ಲಿ ನೋಡಬಹುದು: ಸನ್‌ನೆಕ್ಸ್ಟ್‌

ಭಾಷೆ: ಕನ್ನಡ

ಯಾವಾಗ ಬಿಡುಗಡೆ: ಆಗಸ್ಟ್‌ 8

ಮಾಯಸಭಾ

1990ರ ಸಮಯದಲ್ಲಿ ನಡೆದ ಆಂಧ್ರಪ್ರದೇಶದ ರಾಜಕೀಯ ಚಟುವಟಿಕೆಗಳ ಸುತ್ತ ‘ಮಾಯಸಭಾ’ ವೆಬ್‌ ಸರಣಿ ಸುತ್ತುತ್ತದೆ.

ಎನ್. ಚಂದ್ರಬಾಬು ನಾಯ್ಡು ಮತ್ತು ವೈಎಸ್ ಆರ್ ಅವರ ರಾಜಕೀಯ ಜೀವನದಿಂದ ವೆಬ್‌ ಸರಣಿ ಪ್ರೇರಿತವಾಗಿದೆ.

ಎಲ್ಲಿ ನೋಡಬಹುದು: ಸೋನಿ ಲೈವ್‌

ಭಾಷೆ: ತೆಲುಗು ಮತ್ತು ಇತರ ಹಲವು ಭಾಷೆ

ಯಾವಾಗ ಬಿಡುಗಡೆ: ಆಗಸ್ಟ್‌ 7

ಮಾಮನ್‌

ಪ್ರೀತಿಸಿದ ಹುಡುಗ –ಹುಡುಗಿ ಮದುವೆಯಾಗಲು ಕುಟುಂಬವನ್ನು ಒಪ್ಪಿಸಲು ಮಾಡುವ ತಂತ್ರಗಳ ನಡುವೆ ‘ಮಾಮನ್‌’ ಸಿನಿಮಾ ಕಥೆ ಸುತ್ತುತ್ತದೆ. ಸಂಪೂರ್ಣವಾಗಿ ಕುಟುಂಬಗಳ ನಡುವೆ ನಡೆಯುವ ಘಟನೆಯನ್ನು ಆಧರಿಸಿದ ಸಿನಿಮಾ ಇದಾಗಿದೆ.

ಎಲ್ಲಿ ನೋಡಬಹುದು: ಜೀ5

ಭಾಷೆ: ತಮಿಳು

ಯಾವಾಗ ಬಿಡುಗಡೆ: ಆಗಸ್ಟ್‌ 8

ಅರೇಬಿಯಾ ಕಡಲಿ (Arabia Kadali)

ಮೀನುಗಾರನೊಬ್ಬ ಆಕಸ್ಮಿಕವಾಗಿ ವಿದೇಶಿ ಜಲಪ್ರದೇಶವನ್ನು ಪ್ರವೇಶಿಸಿ ಜೈಲುಪಾಲಾಗುತ್ತಾನೆ. ಆತ ಮತ್ತೆ ಹೇಗೆ ದೇಶವನ್ನು ಸೇರುತ್ತಾನೆ ಎನ್ನುವ ಕಥಾಹಂದರವನ್ನು ‘ಅರೇಬಿಯಾ ಕಡಲಿ’ ವೆಬ್‌ ಸರಣಿಯಲ್ಲಿದೆ.

ಎಲ್ಲಿ ನೋಡಬಹುದು: ಪ್ರೈಮ್‌ ವಿಡಿಯೊ

ಭಾಷೆ: ತೆಲುಗು ಮತ್ತು ಇತರ ಭಾಷೆ

ಯಾವಾಗ ಬಿಡುಗಡೆ: ಆಗಸ್ಟ್‌ 8

ಸಲಕಾರ್ (Salakaar)

1978 ಮತ್ತು 2025 ರ ನಡುವಿನ ಅವಧಿಯಲ್ಲಿ ನಡೆಯುವ ಘಟನೆಗಳ ‘ಸಲಕಾರ್’ ಚಿತ್ರ, ಗುಪ್ತ ಸತ್ಯಗಳನ್ನು ಬಹಿರಂಗಪಡಿಸಲು ರಹಸ್ಯ ಕಾರ್ಯಾಚರಣೆಗಳಲ್ಲಿ ತೊಡಗಿರುವ ಯುವ ಭಾರತೀಯ ಗೂಢಚಾರನ ಕಥೆಯನ್ನು ಹೇಳಿದೆ.

ಎಲ್ಲಿ ನೋಡಬಹುದು: ಜಿಯೊ ಹಾಟ್‌ಸ್ಟಾರ್

ಭಾಷೆ: ಹಿಂದಿ

ಯಾವಾಗ ಬಿಡುಗಡೆ: ಆಗಸ್ಟ್‌ 8

ಯಂಗ್‌ ಮಿಲಿಯನೆರ್ಸ್‌

ಜಾಕ್‌ಪಾಟ್‌ ಗೆದ್ದ ನಾಲ್ವರು ಗೆಳೆಯರ ಜೀವನ ಹೇಗೆ ಬದಲಾಯಿತು ಎನ್ನುವ ಕಥಾಹಂದರವನ್ನು ಯಂಗ್‌ ಮಿಲಿಯನೆರ್ಸ್‌ ಚಿತ್ರ ಹೊಂದಿದೆ

ಎಲ್ಲಿ ನೋಡಬಹುದು: ನೆಟ್‌ಫ್ಲಿಕ್ಸ್‌

ಭಾಷೆ: ಇಂಗ್ಲಿಷ್

ಯಾವಾಗ ಬಿಡುಗಡೆ: ಆಗಸ್ಟ್‌ 13

ಸಾರೆ ಜಹಾ ಸೆ ಅಚ್ಚಾ: ದಿ ಸೈಲೆಂಟ್ ಗಾರ್ಡಿಯನ್ಸ್‌

ಭಾರತ ಅಸ್ಥಿರತೆಯಿಂದ ಕೂಡಿದ್ದ 1970ರ ಸಮಯದಲ್ಲಿ, ಒಬ್ಬ ಭಾರತೀಯ ಗೂಢಚಾರನು ಗಡಿಯುದ್ದಕ್ಕೂ ತೋರಿದ ಅಸಾಧಾರಣ ಧೈರ್ಯದ ಕಥೆ ಈ ಚಿತ್ರದಲ್ಲಿದೆ.

ಎಲ್ಲಿ ನೋಡಬಹುದು: ನೆಟ್‌ಫ್ಲಿಕ್ಸ್‌

ಭಾಷೆ: ಹಿಂದಿ

ಯಾವಾಗ ಬಿಡುಗಡೆ: ಆಗಸ್ಟ್‌ 13

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.