ಚಿತ್ರ ಕೃಪೆ: @mayurambekallu
'ಇನ್ ಹಿಸ್ ನೇಮ್' ಎಂಬ ಹಾಡಿಗೆ ತಾವೇ ನಟನೆ ಮಾಡಿ ನಟಿ ಚಂದನಾ ಅನಂತಕೃಷ್ಣ ಅವರು ಪಹಲ್ಲಾಮ್ ದಾಳಿಯಲ್ಲಿ ಮೃತಪಟ್ಟವರಿಗೆ ಶ್ರದ್ಧಾಂಜಲಿ ಸಲ್ಲಿಸಿದ್ದಾರೆ.
ಜಮ್ಮು-ಕಾಶ್ಮೀರದ ಪಹಲ್ಗಾಮ್ ನಲ್ಲಿ ಪ್ರವಾಸಿಗರ ಮೇಲೆ ಉಗ್ರರ ದಾಳಿ ಕಣ್ಣಿಗೆ ಕಟ್ಟಿದಂತಿದೆ. ಅದರಲ್ಲೂ ಆಗ ತಾನೇ ಮದುವೆ ಆದ ಜೋಡಿ ಹನಿಮೂನ್‌ಗೆಂದು ಹೋದಾಗ ಪತ್ನಿಯ ಎದುರಲ್ಲೇ ಪತಿಯನ್ನು ಹತ್ಯೆ ಮಾಡಿದ್ದರು. ಈ ಸಂದರ್ಭದ ಆಧಾರದ ಮೇಲೆ 'ಇನ್ ಹಿಸ್ ನೇಮ್' ಹಾಡಿನ ವಿಡಿಯೊವನ್ನು ನಿರ್ಮಿಸಿದ್ದಾರೆ.
ಸ್ವಾತಂತ್ರ್ಯ ದಿನಾಚರಣೆಯಂದೇ ಇನ್ ಹಿಸ್ ನೇಮ್ ಈ ಹಾಡು ಬಿಡುಗಡೆಯಾಗಿದ್ದು, ಕಿಚ್ಚ ಸುದೀಪ್ ಸೇರಿದಂತೆ ಅನೇಕರು ಮೆಚ್ಚುಗೆ ಸೂಚಿಸಿದ್ದಾರೆ.
ಮಯೂರ್ ಅಂಬೆಕಲ್ಲು ಹಾಡನ್ನು ಸಂಯೋಜಿಸಿದ್ದಾರೆ. ತೇಜಸ್ ಕಿರಣ್ ಹಾಗೂ ಮಯೂರ್ ಸೇರಿ ನಿರ್ದೇಶನ ಮಾಡಿದ್ದಾರೆ. ಚಂದನಾ ಜೋಡಿಯಾಗಿ ನಿದರ್ಶನ್ ಹಾಗೂ ಸಂದೀಪ್ ರಾಜ್ ಗೋಪಾಲ್ ನಟಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.