ADVERTISEMENT

₹80 ಲಕ್ಷದ ಔಡಿ ಕಾರು ಖರೀದಿಸಿದ ನಟಿ ಶಾನಾಯ ಕಪೂರ್

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 23 ಮಾರ್ಚ್ 2022, 11:18 IST
Last Updated 23 ಮಾರ್ಚ್ 2022, 11:18 IST
ನಟಿ ಶಾನಾಯ ಕಪೂರ್ ಅವರು ಹೊಸ ಕಾರು ಖರೀದಿಸಿದ್ದಾರೆ.
ನಟಿ ಶಾನಾಯ ಕಪೂರ್ ಅವರು ಹೊಸ ಕಾರು ಖರೀದಿಸಿದ್ದಾರೆ.   

ಬೆಂಗಳೂರು: ಬಾಲಿವುಡ್‌ ನಟ ಸಂಜಯ್ ಕಪೂರ್ ಮತ್ತು ಮಹೀಪ್ ಕಪೂರ್ ದಂಪತಿ ಪುತ್ರಿ ಶಾನಾಯ ಕಪೂರ್ ಹೊಸ ಲಕ್ಷುರಿ ಕಾರ್ ಖರೀದಿಸಿದ್ದಾರೆ.

ಕರಣ್ ಜೋಹರ್ ಅವರ ಹೊಸ ಚಿತ್ರದಲ್ಲಿ ಶಾನಾಯ ನಟಿಸುತ್ತಿರುವುದು ಬಾಲಿವುಡ್‌ನಲ್ಲಿ ಸದ್ದು ಮಾಡುತ್ತಿರುವ ಬೆನ್ನಲ್ಲೇ, ಅವರು ₹80 ಲಕ್ಷ ಬೆಲೆಯ ಹೊಸ ಔಡಿ ಐಷಾರಾಮಿ ಕ್ಯೂ7 ಫೇಸ್‌ಲಿಫ್ಟ್ ಆವೃತ್ತಿ ಕಾರು ಖರೀದಿಸಿದ್ದಾರೆ.

ಔಡಿ ಮುಂಬೈ ವೆಸ್ಟ್ ಇನ್‌ಸ್ಟಾಗ್ರಾಮ್ ಖಾತೆಯಲ್ಲಿ ಶಾನಾಯ ಅವರ ನೂತನ ಕಾರು ಫೋಟೊ ಸಹಿತ ಕುಟುಂಬದ ಚಿತ್ರವನ್ನು ಪೋಸ್ಟ್ ಮಾಡಲಾಗಿದೆ.

ADVERTISEMENT

22 ವರ್ಷದ ನಟಿ ಶಾನಾಯ ಕಪೂರ್ ಅವರು ಐಷಾರಾಮಿ ಕಾರು ಖರೀದಿಸಿರುವುದನ್ನು ಕಂಡ ಅಭಿಮಾನಿಗಳು ಶುಭಾಶಯ ಕೋರಿದ್ದಾರೆ.

ಬಾಲಿವುಡ್‌ನ ಹಲವು ಪ್ರಮುಖ ಪ್ರಾಜೆಕ್ಟ್‌ಗಳಲ್ಲಿ ಶಾನಾಯ ಈ ವರ್ಷ ತೊಡಗಿಸಿಕೊಳ್ಳುತ್ತಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.