
‘45’ ಸಿನಿಮಾ
ಬೆಂಗಳೂರು: ಅರ್ಜುನ್ ಜನ್ಯ ನಿರ್ದೇಶನದ ಶಿವರಾಜ್‌ಕುಮಾರ್, ಉಪೇಂದ್ರ ಹಾಗೂ ರಾಜ್ ಬಿ.ಶೆಟ್ಟಿ ಜೊತೆಯಾಗಿ ನಟಿಸಿರುವ ‘45’ ಸಿನಿಮಾ ಒಟಿಟಿಗೆ ಬರುತ್ತಿದೆ.
ಜನವರಿ 23ರಂದು ಜೀ5 ನಲ್ಲಿ (Zee5) ಬಿಡುಗಡೆಯಾಗುತ್ತಿದೆ.
‘ಜೀ’ ಸಂಸ್ಥೆಯು ಸಿನಿಮಾದ ಡಿಜಿಟಲ್ ಹಾಗೂ ಸ್ಯಾಟಲೈಟ್ ಹಕ್ಕುಗಳನ್ನು ಖರೀದಿಸಿದೆ. ಈ ಕುರಿತು ಜೀ5ಕನ್ನಡ ಇನ್‌ಸ್ಟಾಗ್ರಾಂ ಖಾತೆಯಲ್ಲಿ ಮಾಹಿತಿ ಹಂಚಿಕೊಳ್ಳಲಾಗಿದೆ. ‘ಮಕರ ಸಂಕ್ರಾಂತಿ ಹಬ್ಬದ ಶುಭಾಶಯಗಳು. ಸಂಕ್ರಾಂತಿ ಹಬ್ಬಕ್ಕೆ ಕನ್ನಡ ಜೀ5ನಿಂದ ವಿಶೇಷ ಉಡುಗೊರೆ’ ಎಂದು ಬರೆದುಕೊಂಡು, ಜ.23 ರಿಂದ ಜೀ5ನಲ್ಲಿ 45 ಸಿನಿಮಾ ವೀಕ್ಷಣೆಗೆ ಸಿಗುತ್ತಿದೆ ಎಂದು ಮಾಹಿತಿ ನೀಡಿದೆ. ಇದರ ಜತೆಗೆ 45 ಸಿನಿಮಾದ ಟ್ರೇಲರ್ ಹಂಚಿಕೊಂಡಿದೆ.
ಗರುಡ ಪುರಾಣದ ಸಾರವೇ ಒಟ್ಟಾರೆ ಚಿತ್ರದ ಕಥಾವಸ್ತುವಾಗಿದ್ದು, ಸಿನಿಮಾದಲ್ಲಿ ಸಾಫ್ಟ್‌ವೇರ್ ಉದ್ಯೋಗಿ ‘ವಿನಯ್’ ಎಂಬ ಪಾತ್ರದಲ್ಲಿ ರಾಜ್, ‘ರಾಯಪ್ಪ’ನಾಗಿ ಉಪೇಂದ್ರ, ‘ಶಿವಪ್ಪ’ನಾಗಿ ಶಿವರಾಜ್‌ಕುಮಾರ್ ಕಾಣಿಸಿಕೊಂಡಿದ್ದಾರೆ. ಸಾವು–ಬದುಕಿನ ನಡುವಿನ ಕಥೆ ಹೊತ್ತ ಈ ಸಿನಿಮಾವನ್ನು ಎಂ.ರಮೇಶ್ ರೆಡ್ಡಿ ಅವರು ತಮ್ಮ ಸೂರಜ್ ಪ್ರೊಡಕ್ಷನ್ ಬ್ಯಾನರ್‌ನಲ್ಲಿ ನಿರ್ಮಿಸಿದ್ದಾರೆ. ಇದು 45 ದಿನಗಳಲ್ಲಿ ನಡೆಯುವ ಕಥೆಯಾಗಿದೆ.
ಡಿ.25ರಂದು ಸಿನಿಮಾ ಬಿಡುಗಡೆಯಾಗಿತ್ತು. ಇದೀಗ ಒಂದೇ ತಿಂಗಳಲ್ಲಿ ಒಟಿಟಿಗೆ ಬರುತ್ತಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.