‘ಸು ಫ್ರಂ ಸೋ’
ಬೆಂಗಳೂರು: ಕಡಿಮೆ ಬಜೆಟ್‌ನಲ್ಲಿ ತಯಾರಾಗಿ ಭರ್ಜರಿ ಹಿಟ್ ಆಗಿರುವ ಸು ಫ್ರಂ ಸೊ ಸಿನಿಮಾ ಇದೇ ಸೆಪ್ಟೆಂಬರ್ 9ರಂದು ಒಟಿಟಿಯಲ್ಲಿ ಬಿಡುಗಡೆಯಾಗಲಿದೆ.
ಜನಪ್ರಿಯ ಜಿಯೊ ಹಾಟ್‌ಸ್ಟಾರ್ ಒಟಿಟಿಲ್ಲಿ ‘ಸು ಫ್ರಂ ಸೊ’ ವೀಕ್ಷಣೆಗೆ ಲಭ್ಯವಾಗಲಿದೆ ಎಂದು ಮೂಲಗಳು ಖಚಿತಪಡಿಸಿವೆ.
ಜುಲೈ 25ರಂದು ರಾಜ್ ಬಿ.ಶೆಟ್ಟಿ ತಂಡದ ‘ಸು ಫ್ರಂ ಸೋ’ ಚಿತ್ರ ತೆರೆ ಕಂಡು ಭರ್ಜರಿಯಾಗಿ ಜನರನ್ನು ಚಿತ್ರಮಂದಿರಗಳತ್ತ ಕರೆತಂದಿತ್ತು.
ಜೆ.ಪಿ.ತೂಮಿನಾಡು ನಿರ್ದೇಶನದ ಚಿತ್ರ ಉಳಿದೆಲ್ಲ ಭಾಷೆಯ ಚಿತ್ರಗಳನ್ನು ಹಿಂದಿಕ್ಕಿ ಗಳಿಕೆಯಲ್ಲಿ ನಾಗಾಲೋಟ ಮುಂದುವರಿಸಿತ್ತು.
ಯುವ ಸಂಗೀತ ನಿರ್ದೇಶಕ ಸುಮೇಧ್ ಕೆ. ಹಾಗೂ ಸಂದೀಪ್ ತುಳಸಿದಾಸ್ ಚಿತ್ರದ ದೃಶ್ಯಗಳಿಗೆ ಸಂಗೀತದ ಮೂಲಕ ಜೀವ ತುಂಬಿದ್ದಾರೆ. ಎಸ್.ಚಂದ್ರಸೇಖರನ್ ಛಾಯಾಚಿತ್ರಗ್ರಹಣ ಕರಾವಳಿಯ ಸೊಬಗನ್ನು ಸೆರೆಹಿಡಿದಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.