ADVERTISEMENT

ವಿಜಯ್ ಸೇತುಪತಿ ನಟನೆಯ ಮೂಕಿ ಸಿನಿಮಾ 'ಗಾಂಧಿ ಟಾಕ್ಸ್' ಬಿಡುಗಡೆ ದಿನಾಂಕ ಘೋಷಣೆ

ಪಿಟಿಐ
Published 3 ಜನವರಿ 2026, 10:25 IST
Last Updated 3 ಜನವರಿ 2026, 10:25 IST
   

ವಿಜಯ್ ಸೇತುಪತಿ ಮತ್ತು ಅದಿತಿ ರಾವ್ ಹೈದರಿ ನಟನೆಯ ‘ಗಾಂಧಿ ಟಾಕ್ಸ್’ ಸಿನಿಮಾವು ಜನವರಿ 30ರಂದು ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಲಿದೆ ಎಂದು ಚಿತ್ರತಂಡ ತಿಳಿಸಿದೆ.

'ಗಾಂಧಿ ಟಾಕ್ಸ್' ಸಿನಿಮಾವನ್ನು ಕಿಶೋರ್ ಬೇಲೇಕರ್ ನಿರ್ದೇಶಿಸಿದ್ದಾರೆ. ಸಿನಿಮಾದಲ್ಲಿ ಅರವಿಂದ್ ಸ್ವಾಮಿ ಮತ್ತು ಸಿದ್ಧಾರ್ಥ್ ಜಾಧವ್ ಕೂಡ ನಟಿಸಿದ್ದು, ಜೀ ಸ್ಟುಡಿಯೋಸ್ ಬ್ಯಾನರ್‌ ಅಡಿ ಸಿನಿಮಾ ನಿರ್ಮಾಣವಾಗಿದೆ. ಸಿನಿಮಾವು ‘ಆಧುನಿಕ ಭಾರತೀಯ ಚಿತ್ರರಂಗದಲ್ಲಿ ಬಹಳ ಅಪರೂಪವಾದ ‘ಮೂಕಿ’ ಸಿನಿಮಾ ಇದಾಗಿದೆ. ಸೃಜನಶೀಲ ಸಿನಿಮಾವಾಗಿದ್ದು, ಮೌನವಾಗಿಯೇ ಕಥೆ ಮುಂದಕ್ಕೆ ತೆಗೆದುಕೊಂಡು ಹೋಗುತ್ತದೆ’ ಎಂದು ಚಿತ್ರತಂಡ ತನ್ನ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದೆ.

ಸಿನಿಮಾ ನಿರ್ದೇಶಕ ಕಿಶೋರ್ ಬೇಲೇಕರ್ ಅವರು, ‘ಇದೊಂದು ಮೂಕಿ ಸಿನಿಮಾವಾಗಿದ್ದು, ಇದರಲ್ಲಿ ಅಭಿನಯ ಮತ್ತು ಭಾವನೆಗೆ ಆದ್ಯತೆ ನೀಡಿದ್ದೇವೆ. ಚಿತ್ರದಲ್ಲಿ ನಟಿಸಿರುವ ನಟ ನಟಿಯರು ಈ ಸವಾಲನ್ನು ಯಶಸ್ವಿಯಾಗಿ ಪೂರೈಸಿದ್ದಾರೆ. ಎ.ಆರ್. ರೆಹಮಾನ್ ಸಂಗೀತ, ಜೀ ಸ್ಟುಡಿಯೋಸ್ ಮತ್ತು ಮೀರಾ ಚೋಪ್ರಾ ಅವರ ಬೆಂಬಲದೊಂದಿಗೆ ಪ್ರಾಮಾಣಿಕ ಸಿನಿಮಾವನ್ನು ಮಾಡಲು ಸಾಧ್ಯವಾಯಿತು’ ಎಂದು ಅವರು ಹೇಳಿದರು.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.