ADVERTISEMENT

ಬಿಕಿನಿ ಚಿತ್ರ ಹಂಚಿಕೊಂಡು ಅಭಿಮಾನಿಗಳನ್ನು ಕಿಚಾಯಿಸಿದ ನಟಿ ಶಾನ್ವಿ!

ಪ್ರವಾಸದ ಹೊಸ ಫೋಟೊ ಹಂಚಿಕೊಂಡ ಶಾನ್ವಿ ಶ್ರೀವಾಸ್ತವ್

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 26 ಏಪ್ರಿಲ್ 2023, 14:19 IST
Last Updated 26 ಏಪ್ರಿಲ್ 2023, 14:19 IST
ಶಾನ್ವಿ ಶ್ರೀವಾಸ್ತವ್
ಶಾನ್ವಿ ಶ್ರೀವಾಸ್ತವ್   

ಬೆಂಗಳೂರು: ನಟಿ ಶಾನ್ವಿ ಶ್ರೀವಾಸ್ತವ್ ಅವರು ಕನ್ನಡದ ಅನೇಕ ಸಿನಿಮಾಗಳಲ್ಲಿ ಮಿಂಚಿ ಬಹುಭಾಷಾ ಚಿತ್ರಗಳಲ್ಲೂ ಬಿಸಿಯಾಗಿದ್ದಾರೆ. ಅಲ್ಲದೇ ಈ ಒತ್ತಡದ ನಡುವೆಯೂ ಅವರು ಪ್ರವಾಸಗಳನ್ನು ತಪ್ಪಿಸಿಕೊಳ್ಳುವುದಿಲ್ಲ.

ಇತ್ತೀಚಿಗಿನ ಪ್ರವಾಸದ ಸುಂದರ ಫೋಟೊವನ್ನು ಹಂಚಿಕೊಂಡಿರುವ ಅವರು ಅಭಿಮಾನಿಗಳ ಎದೆಯಲ್ಲಿ ಫುಳಕವನ್ನುಂಟು ಮಾಡಿದ್ದಾರೆ.

ಇದು ರಜೆಯ ಮಜಾ ಎಂದು ಹೇಳಿರುವ ಅವರು, ದಯವಿಟ್ಟು ಹೆಚ್ಚು ಬಿಕಿನಿ ಚಿತ್ರಗಳನ್ನು ಕೇಳಬೇಡಿ ಎಂದು ತಮಾಷೆಯಾಗಿ ಪೋಸ್ಟ್ ಹಾಕಿ ಕಿಚಾಯಿಸಿದ್ದಾರೆ.

ADVERTISEMENT

ಪ್ರಸ್ತುತ ಶಾನ್ವಿ ‘ತ್ರಿಶೂಲಂ’ ಚಿತ್ರದಲ್ಲೂ ನಟಿಸುತ್ತಿದ್ದಾರೆ. ಓಂ ಪ್ರಕಾಶ್‌ ರಾವ್‌ ನಿರ್ದೇಶನದ ಇದರಲ್ಲಿ ಉಪೇಂದ್ರ ಮತ್ತು ರವಿಚಂದ್ರನ್‌ ಮೊದಲ ಬಾರಿಗೆ ಒಟ್ಟಾಗಿ ನಟಿಸುತ್ತಿದ್ದಾರೆ.

ಇದು ತೆಲುಗಿನ ‘ಬಲುಪು’ ಚಿತ್ರದ ರಿಮೇಕ್‌. ರೊಮ್ಯಾಂಟಿಕ್ ಆ್ಯಕ್ಷನ್‌ ಚಿತ್ರ ಇದಾಗಿದ್ದು, ಅರ್ಜುನ್‌ ಜನ್ಯ ಸಂಗೀತ ಸಂಯೋಜಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.