ರವೀಂದ್ರ ಕಲಾಕ್ಷೇತ್ರ
ಬೆಂಗಳೂರು: ಬೆಂಗಳೂರಿನ ವಿಮಾನ ಕಾರ್ಖಾನೆ ಬಸವ ಸಮಿತಿಯು ವಿಶ್ವಗುರು ಬಸವಣ್ಣನವರ ಜಯಂತ್ಯುತ್ಸವ ಹಾಗೂ ಸಮಿತಿಯ 41ನೇ ವಾರ್ಷಿಕೋತ್ಸವ ಅಂಗವಾಗಿ ಜುಲೈ 20ರಂದು ರವೀಂದ್ರ ಕಲಾಕ್ಷೇತ್ರದಲ್ಲಿ ಕೊಪ್ಪಳದ ಗವಿಮಠದ ಇದುವರೆಗಿನ ಪೀಠಾಧಿಪತಿಗಳ ಕುರಿತು ಸಾಹಿತಿ ಈಶ್ವರ ಹತ್ತಿ ಅವರು ರಚಿಸಿರುವ ‘ಅಟ್ಟಣಿಕೆಗಳು ಹದಿನೆಂಟು‘ ಎಂಬ ನಾಟಕ ಪ್ರದರ್ಶನ ಆಯೋಜಿಸಿದೆ.
ಅಂದು ಬೆಳಿಗ್ಗೆ 8.30 ರಿಂದ ಕಾರ್ಯಕ್ರಮಗಳು ಪ್ರಾರಂಭವಾಗಲಿದ್ದು ರಂಗೋಲಿ ಸ್ಪರ್ಧೆ, ವಚನ ಗಾಯನ,ಮಕ್ಕಳಿಂದ ಶರಣ,ಶರಣೆಯರ ವೇಷ ಭೂಷಣ ಪ್ರದರ್ಶನ ಮತ್ತಿತರ ಸ್ಪರ್ಧೆಗಳು ಜರುಗಲಿವೆ. ಬೆಳಿಗ್ಗೆ 10ಕ್ಕೆ ಗವಿಮಠದ ಅಭಿನವ ಗವಿಸಿದ್ಧೇಶ್ವರ ಸ್ವಾಮೀಜಿ ಕಾರ್ಯಕ್ರಮ ಉದ್ಘಾಟಿಸುವರು. ಮಧ್ಯಾಹ್ನ 2.30ಕ್ಕೆ ನಾಟಕ ಪ್ರದರ್ಶನ ನಡೆಯಲಿದೆ. ಮಂಜುನಾಥ ನಾಗನೂರ ಅವರು ನಾಟಕ ನಿರ್ದೇಶಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.